೫ನೇ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಬಿ.ಎಲ್ ಬುಲ್ಸ್ ಕರಾಟೆ ಸಂಸ್ಥೆಯ ಕರಾಟೆ ವಿದ್ಯಾರ್ಥಿಗಳ ಅಮೋಘ ಸಾಧನೆ
.
ಗಂಗಾವತಿ: ಡಿಸೆಂಬರ್-೧೪ ಶನಿವಾರ ನಡೆದ ೫ನೇ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಯನ್ನು ಸಿಂಧನೂರಿನ ಮಿಲಪ್ ಶಾದಿಮಹಲ್‌ನಲ್ಲಿ ಡಾ. ರಜಾಕ್ ರವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.
ಈ ಒಂದು ಸ್ಪರ್ಧೆಯಲ್ಲಿ ಬಿ.ಎಲ್ ಬುಲ್ಸ್ ಕರಾಟೆ ಡು ಸ್ಪೋರ್ಟ್ಸ್ ಅಸೋಸಿಯೇ?ನ್ (ರಿ) ಗಂಗಾವತಿ ಸಂಸ್ಥೆ ವತಿಯಿಂದ ೨೦ ಕರಾಟೆ ಕ್ರೀಡಾಪಟುಗಳು ಭಾಗವಹಿಸಿ ಅಮೋಘವಾದ ಸಾಧನೆ ಮಾಡಿದಾರೆ.
ಕಟಾ ಮತ್ತು ಕುಮುಟೆ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಚಿನ್ನು, ಭೀಮ್‌ಸಿಂಗ್, ನಿರ್ಮಲ, ಪ್ರತಾಪ್ ಪಡೆದಿದ್ದು, ಅದೇರೀತಿ, ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಮತ್ತು ಕುಮುಟೆ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಅವೇಜ್, ಚಿರು, ಚರಣ್, ಅಹಾನ್ ಪಡೆದಿದ್ದು, ಅದೇರೀತಿ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಮತ್ತು ಕುಮುಟೆ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಮನೋಜ್, ವಿಜಯ್ ಕುಮಾರ, ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಮತ್ತು ಕುಮುಟೆ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಆಲಿಯಾ, ರಾಘವೇಂದ್ರ, ಆದ್ವಿಕ್, ಯಶಿಕಾ, ಮಣಿಕಂಠ, ಚೇತನ್ ಪಡೆದಿದ್ದು, ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಮತ್ತು ಕುಮುಟೆ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ರಾಮಾರ್ಜುನ ಪಡೆದಿದ್ದು, ಅದೇರೀತಿ ಕಟಾ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಮುತ್ತುರಾಜ್, ವಿಜಯ್, ಪ್ರಥಮ್ ಪಡೆದಿರುತ್ತಾರೆ.
ಒಟ್ಟಾರೆಯಾಗಿ ಕಟಾ ವಿಭಾಗದಲ್ಲಿ ೧೦ ಪ್ರಥಮ ಸ್ಥಾನ, ೬ ದ್ವಿತೀಯ ಸ್ಥಾನ, ೪ ತೃತೀಯ ಸ್ಥಾನ ಹಾಗೂ ಕುಮುಟೆ ವಿಭಾಗದಲ್ಲಿ ೫ ಪ್ರಥಮ, ೪ ದ್ವಿತೀಯ, ೮ ತೃತಿಯ ಸ್ಥಾನ ಪಡೆದಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಚಂದ್ರೇಗೌಡ ಪೊಲೀಸ್ ಪಾಟೀಲ್ ಪ್ರಶಂಸೆ ವ್ಯಕ್ತಪಡಿಸಿದರು. ಕರಾಟೆ ಶಿಕ್ಷಕರಾದ ಮಂಜುನಾಥ ರಾಠೋಡ್, ಮೀನಾಕ್ಷಿ, ಫಯಾಜ್, ಪ್ರಜ್ವಲ್ ನಿಂಗರಾಜ್, ಆಂಜನೇಯರವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.