ಚುಟುಕು ಸಾಹಿತ್ಯ ಅಧ್ಯಯನ ಮೂಲಕ ಕೃತಿ ರಚನೆಗೆ ಮುಂದಾಗಲಿ : ಅರುಣಾ ನರೇಂದ್ರ

0

Get real time updates directly on you device, subscribe now.

 ಕೊಪ್ಪಳ : ಯುವ ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರು ಚುಟುಕು ಸಾಹಿತ್ಯ ಅಧ್ಯಯನ ಮಾಡುವ ಮೂಲಕ ಭವಿಷ್ಯದಲ್ಲಿ ಉತ್ಕೃಷ್ಟ ಸಾಹಿತ್ಯ ಕೃತಿ ಪ್ರಕಟಿಸಲು ಮುಂದಾಗಬೇಕೆಂದು ಗಜಲ್ ಕವಯತ್ರಿ ಹಾಗೂ ಶಿಕ್ಷಕಿ ಶ್ರೀಮತಿ ಅರುಣಾ ನರೇಂದ್ರ ಪಾಟೀಲ್ ಸಲಹೆ ನೀಡಿದರು. ಅವರು ಭಾನುವಾರ ನಗರದ ಕಿನ್ನಾಳ ರಸ್ತೆಯ ಸೇಂಟ್ ಪಾಲ್ಸ್ ಪದವಿ ಕಾಲೇಜಿನಲ್ಲಿ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಆಯೋಜಿಸಿದ್ದ ಜಿಲ್ಲಾ ಮಟ್ಟದ ೨ ನೆಯ ಚುಟುಕು ಕವಿಗೋಷ್ಠಿ ,ಉಪನ್ಯಾಸ ಕಾರ್ಯಕ್ರಮಕ್ಕೇ ಚಾಲನೆ ನೀಡಿ ಮಾತನಾಡಿದರು. ,ನಾಡಿನ ಅನೇಕ ಕವಿಗಳು ಚುಟುಕು ಸಾಹಿತ್ಯ ಸಾಹಿತ್ಯ ರಚನೆಯಲ್ಲಿ ತೊಡಗಿ, ಕನ್ನಡ ಸಾಹಿತ್ಯ ವನ್ನು ಶ್ರೀಮಂತ ಗೊಳಿಸಿದ್ದಾರೆ,ದಿನಕರ ದೇಸಾಯಿ,ಸಿ.ಪಿ.ಕೆ, ಚಂಪಾ,ಎಚ್ ದುಂಡಿರಾಜ್, ಕೊಪ್ಪಳದಲ್ಲಿ
ಶಿ.ಕಾ.ಬಡಿಗೇರ, ಅಲ್ಲಮಪ್ರಭು ಬೆಟ್ಟದೂರು, ಶಿವಪ್ರಸಾದ್ ಹಾದಿಮನಿ, ಮುಂತಾದವರು , ಚುಟುಕು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು. ವಕೀಲ ಹಾಗೂ ಉಪನ್ಯಾಸಕ ಪ್ರಕಾಶ್ ಹಳ್ಳಿಗುಡಿ ವಿಶೇಷ ಉಪನ್ಯಾಸ ನೀಡಿ, ಸಾಮಾಜಿಕ ಜಾಲ ತಾಣಗಳ ಅಬ್ಬರದಲ್ಲಿ ಓದುವ ಅಭಿರುಚಿ ಕಡಿಮೆ ಆಗುತ್ತದೆ, ದಿನಕರ ದೇಸಾಯಿ ಅವರ ಸಾಹಿತ್ಯ ಕೃತಿ ಮತ್ತು ದೇಸಾಯಿ ಅವರ ವ್ಯಕ್ತಿತ್ವದ ಬಗ್ಗೆ ವಣಿ೯ಸಿದರು. ಅಧ್ಯಕ್ಷತೆ ವಹಿಸಿದ್ದ ನಿವೃತ್ತ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಎ.ಪಿ. ಅಂಗಡಿ ಅವರು ಮಾತನಾಡಿ, ಜಿಲ್ಲೆಯಲ್ಲಿ ತುಕ್ಕು ಹಿಡಿದಿದ್ದ ಚುಟುಕು ಸಾಹಿತ್ಯ ಚಟುವಟಿಕೆಗಳಿಗೆ ಈಗ ಹೊಸ ಪದಾಧಿಕಾರಿಗಳು ಜೀವ ತುಂಬಿದ್ದಾರೆ, ಯುವ ಸಾಹಿತಿಗಳು ಒಂದುಗೂಡಿ ನಿರಂತರ ಸಾಹಿತ್ಯಿಕ ಕೆಲಸ ಮಾಡುವ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.
ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ರುದ್ರಪ್ಪ ಭಂಡಾರಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಜಿಲ್ಲೆಯಲ್ಲಿ ಚುಟುಕು ಸಾಹಿತ್ಯ ಪರಿಷತ್ ನಿರಂತರ ಕಾರ್ಯಕ್ರಮ ಆಯೋಜನೆ ಮಾಡಲಿದೆ ಎಲ್ಲ ಪ್ರತಿಭೆಗಳಿಗೆ ಪರಿಷತ್ತು ಮುಕ್ತ ಅವಕಾಶ ಕಲ್ಪಿಸುತ್ತಿದೆ ಎಂದರು.
ಕವಿಯತ್ರಿ,ಶಾರದಾ ಶ್ರಾವಣ ಸಿಂಗ್, ರಜಪೂತ, , ಅಕ್ಕಮಹಾದೇವಿ ಅಂಗಡಿ, ಶ್ವೇತಾ ಜೋಶಿ, ರವಿ ಹಿರೇಮನಿ, ಪ್ರದೀಪ ಹದ್ದಣ್ಣವರ್, ರಮೇಶ್, ಶಿವಪ್ರಸಾದ್ ಹಾದಿಮನಿ, ಬಸವರಾಜ ಸಂಕನಗೌಡ್ರು, ಮುತ್ತುರಾಜ್ ಅಂಗಡಿ ಮೊದಲಾದವರು ಉತ್ತಮ ಚುಟುಕು ವಾಚನ ಮಾಡಿದರು, ನಂತರ ಕವಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ನಿವೃತ್ತ ಉಪನ್ಯಾಸಕ ಎಸ್.ಬಿ.ಬೀಳಗಿಮಠ,ಡಾ ನರಸಿಂಹ ಗುಂಜಹಳ್ಳಿ, ಅಮೀನ್ ಸಾಹೇಬ್, ನಾಗರಾಜ್, ಸಂಗೀತಾ,ಮನು ಪ್ರಿಯಾ, ಇತರರು ಉಪಸ್ಥಿತರಿದ್ದರು. ಪೂಜಾ ಗಂಟೆ ಪ್ರಾರ್ಥಿಸಿದರು. ಶಿವಪ್ರಸಾದ್ ಹಾದಿಮನಿ ಸ್ವಾಗತಿಸಿದರು. ಡಾ. ಮಹಾಂತೇಶ್ ನೆಲಾ ಗಣಿ ನಿರೂಪಿಸಿದರು.

Get real time updates directly on you device, subscribe now.

Leave A Reply

Your email address will not be published.

error: Content is protected !!