ಒಳಮೀಸಲಾತಿ ಬಿಕ್ಷೆ ಅಲ್ಲ ಅದು ನಮ್ಮ ಸಂವಿಧಾನ ಬದ್ಧ ಹಕ್ಕು ಕೂಡಲೇ ಜಾರಿ ಮಾಡಬೇಕು : ಗಣೇಶ್ ಹೊರತಟ್ನಾಳ

0

Get real time updates directly on you device, subscribe now.

Koppal :  ಮಾದಿಗ ಮತ್ತು ಮಾದಿಗ ಉಪಜಾತಿಗಳ ಸಂಘಟನೆಗಳ ಒಕ್ಕೂಟ ವತಿಯಿಂದ ಬೃಹತ್ ತಮಟೆ ಚಳುವಳಿಯ ಪಾದಯಾತ್ರೆಯ ಮೂಲಕ ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ ರಾಘವೇಂದ್ರ ಹಿಟ್ನಾಳ್ ರವರ ಗೃಹ ಕಚೇರಿ ಮುಂದೆ ಬೃಹತ್ ತಮಟೆ ಚಳುವಳಿ ಮಾಡಿ ಶಾಸಕರ ತಂದೆಯವರಾದ   ಕೆ ಬಸವರಾಜ್ ಹಿಟ್ನಾಳ್ರವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕರಾದ ಗಣೇಶ್ ಹೊರತಟ್ನಾಳ ಮಾತನಾಡಿ ಸುಪ್ರೀಂಕೋರ್ಟಿನ ತೀರ್ಪು ಬಂದು ನಾಲ್ಕು ತಿಂಗಳಾದರೂ ಒಳಮೀಸಲಾತಿ ಜಾರಿ ಮಾಡದೆ ಕಾಲಾಹರಣದ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಡಿಸೆಂಬರ್ 16 ರಂದು ಬೆಳಗಾವಿಯಲ್ಲಿ ಬೃಹತ್ ಹಕ್ಕೊತ್ತಾಯ ಸಮಾವೇಶ ನೆಡಸಲಾಗುವುದು .

ಆಗಸ್ಟ್ 1 ರಂದು ಸುಪ್ರೀಂಕೋರ್ಟಿನ ಸಂವಿಧಾನ ಪೀಠ ಒಳಮೀಸಲಾತಿಯನ್ನು ಜಾರಿ ಮಾಡುವ ಅಧಿಕಾರವನ್ನು ರಾಜ್ಯಗಳಿಗೆ ಕೊಡುವ ಐತಿಹಾಸಿಕ ತೀರ್ಪು ಪ್ರಕಟಿಸಿತು . ತೀರ್ಪು ಬಂದು ನಾಲ್ಕು ತಿಂಗಳಾದರೂ ಕರ್ನಾಟಕದ ಸರ್ಕಾರ ಅಮೆಗತಿಯಲ್ಲಿ ಸಾಗಿದೆ . ಕಾಟಾಚಾರಕ್ಕೆ ನ್ಯಾ ನಾಗಮೋಹನ್ ದಾಸ್ ಆಯೋಗ ರಚಿಸಿದ್ದು ಬಿಟ್ಟರೆ ಏನನ್ನೂ ಮಾಡಿಲ್ಲ , 2 ತಿಂಗಳಲ್ಲಿ ಆಯೋಗ ವರದಿ ಕೊಡುತ್ತದೆ ಎಂದು ಸರ್ಕಾರ ಹೇಳಿತ್ತು . ಆದರೆ 45 ದಿನವಾದರೂ ಆಯೋಗ ಕೆಲಸ ಆರಂಭಿಸಿಲ್ಲ , ಆಯೋಗಕ್ಕೆ ಬೇಕಾದ ಕಛೇರಿ , ಸಿಬ್ಬಂದಿ , ಹಣಕಾಸಿನ ನೆರವುಕೊಡದೆ ಕಾಲಾಹರಣ ನೆಡೆಸಲಾಗುತ್ತಿದೆ . ಆಯೋಗ ರಚಿಸಬೇಕು ಎನ್ನುವುದು ಮಾದಿಗ ಸಮಾಜದ ಯಾರೊಬ್ಬರ ಬೇಡಿಕೆಯೂ ಆಗಿರಲಿಲ್ಲ , ಸರಕಾರದ ಮುಂದೆ ನ್ಯಾ ಸದಾಶಿವ ಆಯೋಗ , ಮಾಧುಸ್ವಾಮಿ ಸಮಿತಿ ವರದಿ ಇದೆ . ಮಾಧುಸ್ವಾಮಿ ಯವರ ಸಮಿತಿ ಏಕೆ , ಏಡಿ ಸಮಸ್ಯೆಗೆ ಪರಿಹಾರಒದಗಿಸಿದೆ , 2011ರ ಜನಗಣತಿಯ ಅಂಕಿಅಂಶಗಳ ಅಧಾರದಲ್ಲಿ ವರ್ಗೀಕರಣ ಮಾಡಿದೆ . ಈಗ ಮತ್ತೆ ನಾಗಮೋಹನ್ ದಾಸ್ ಆಯೋಗಕ್ಕೆ ಅದೇ ಕೆಲಸ ಕೊಡಲಾಗಿದೆ . ಸರ್ಕಾರದ ಈ ನಿಧಾನಗತಿಯ ನಿರ್ಲಕ್ಷ್ಯದ ಧೋರಣೆ ನೋಡಿದರೆ ಇವರಿಗೆ ಅವಕಾಶ ವಂಚಿತ ದಲಿತ ಸಮುದಾಯಗಳಿಗೆ ಒಳ ಮೀಸಲಾತಿ ಕೊಡುವ ಮನಸ್ಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ .

ಒಳಮೀಸಲಾತಿ ಜಾರಿ ಆಗುವ ವರೆಗೆ ಸರ್ಕಾರ ಯಾವುದೇ ಉದ್ಯೋಗ ನೇಮಕಾತಿ ಮಾಡುವುದಿಲ್ಲ ಎಂದು ಭರವಸೆ ಕೊಟ್ಟಿತ್ತು . ಆದರೆ ಈ ಭರವಸೆ ಜಾರಿಯಾಗಿಲ್ಲ , ನೇಮಕಾತಿಯ ಘೋಷಣೆಗಳು ವಿವಿಧ ಇಲಾಖೆಯಿಂದ ಬರುತ್ತಲೆ ಇದೆ . ಇದು ಖಂಡನಾರ್ಹ .

ಸರ್ಕಾರದ ಈ ಒಳಮೀಸಲಾತಿ ವಿರೋಧಿ ಧೋರಣೆ ಖಂಡಿಸಿ ಇದೇ ಡಿ 16 ರಂದು ಸೋಮವಾರ ಬೆಳಗಾವಿಯಲ್ಲಿ ಬೃಹತ್ ಹಕ್ಕೊತ್ತಾಯ ಸಮಾವೇಶಕ್ಕೆ ಕರೆಕೊಡಲಾಗಿದೆ .
ಬೆಳಗಾವಿ ಸಮಾವೇಶದ ಮೊದಲು ರಾಜ್ಯದ ಎಲ್ಲ ಶಾಸಕರ ಮನೆಯಮುಂದೆ ಡಿಸೆಂಬರ್ 14 ರಂದು ಶನಿವಾರ ತಮಟೆ ಚಳವಳಿ ನೆಡಸಿ ವಿಧಾನಸೌಧದಲ್ಲಿ ಒಳಮೀಸಲಾತಿಯ ಪರವಾಗಿ ಧ್ವನಿ ಎತ್ತಲು ಆಗ್ರಹಿಸಲಾಯಿತು.

ಹರಿಯಾಣದ ಬಿಜೆಪಿ ಸರ್ಕಾರ ಸುಪ್ರೀಂಕೋರ್ಟಿನ ತೀರ್ಪು ಬಂದ ಮೊದಲವಾರದಲ್ಲೆ ಒಳಮೀಸಲಾತಿಯನ್ನು ಜಾರಿಮಾಡಿದೆ . ಆದರೆ ಕರ್ನಾಟಕದ ಕಾಂಗ್ರೆಸ್ ಸರಕಾರ ಬದ್ಧತೆ ತೋರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ . ಅಧಿಕಾರಕ್ಕೆ ಬಂದ ಮೊದಲ ವಾರದಲ್ಲೇ ಒಳ ಮೀಸಲಾತಿ ಜಾರಿ ಮಾಡುತ್ತೇವೆಂದು ಹಸಿಸುಳ್ಳು ಹೇಳಿದ ಕಾಂಗ್ರೆಸ್ ನಾಯಕರು ಮಾದಿಗ ಜನತೆಯ ವಿಶ್ವಾಸ ಕಳೆದುಕೊಂಡಿದ್ದಾರೆ .
ಮಾದಿಗ ಮತ್ತು ಉಪಜಾತಿಗಳ ಈ ಹೋರಾಟಕ್ಕೆ ಸಹಕಾರ ಕೊಡಬೇಕೆಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕರಾದ   ರಾಘವೇಂದ್ರ ಹಿಟ್ನಾಳ ರವರ ತಂದೆಯವರಾದ ಕೆ ಬಸವರಾಜ ಹಿಟ್ನಾಳ ರವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನಾಗಲಿಂಗ ಮಳೆ ಕೊಪ್ಪ, ಮಂಜುನಾಥ್ ಮುಸಲಾಪುರ್, ರಮೇಶ್ ಬೇಳೂರು, ಪರಶುರಾಮ್ ಕೆಡದಾಳ, ಮಾರುತಿ ಬಿಕ್ಕನಹಳ್ಳಿ, ಮೈಲಾರಪ್ಪ ಮೈನಹಳ್ಳಿ, ಅಣ್ಣಪ್ಪ ಪುರದ, ಕೃಷ್ಣ ಮುದ್ದಾಬಳ್ಳಿ, ವೀರೇಶ್ ಓಜನಹಳ್ಳಿ, ಮಹೇಶ್ ಕರ್ಕಿಹಳ್ಳಿ, ದೇವರಾಜ್ ಕಾತರಕಿ, ವಿನಾಯಕ ಕಿಡದಾಳ, ಮಹೇಶ್ ಕಂದಾರಿ, ಪಕೀರಪ್ಪ ಬುದಗುಂಪಾ, ಮುದುಕಪ್ಪ ಚಿಲವಾಡಗಿ, ದುರಗೇಶ್ ಚಿಲವಾಡಗಿ, ಪ್ರಾಣೇಶ್ , ಸ್ವಾಮಿ ಸ್ವಾಮಿ ಹಾಲವರ್ತಿ ಸಮುದಾಯದ ಮುಖಂಡರು ಪಾಲ್ಗೊಂಡು ಯಶಸ್ವಿಗೊಳಿಸಿದರು

Get real time updates directly on you device, subscribe now.

Leave A Reply

Your email address will not be published.

error: Content is protected !!