ಪರ್ಯಾಯ ಭೂಮಿ ಗುರುತಿಸುವ ಕಾರ್ಯ ಪ್ರಗತಿಯಲ್ಲಿ: ಕೃಷ್ಣ ಭೈರೇಗೌಡ
ಬೆಳಗಾವಿ ಸುವರ್ಣಸೌಧ ಡಿ.13
ಡಿ-ನೋಟಿಫಿಕೇಶನ್ ಪ್ರಸ್ತಾವನೆಗಳನ್ನು ನಿರ್ವನೀಕರಣಗೊಳಿಸುವ (disforest) ಪ್ರಕ್ರಿಯೆ ಚಾಲ್ತಿಯಲ್ಲಿರುವ ಕಾರಣದಿಂದ ರೈತರ ಪಹಣಿ ಪತ್ರಿಕೆಯಲ್ಲಿ ಮಂಜೂರಿದಾರರ ಹೆಸರಿನ ಬದಲಾಗಿ ಈವರೆಗೂ ಅರಣ್ಯ ಇಲಾಖೆಯ ಹೆಸರೇ ಮುಂದುವರೆದಿರುತ್ತದೆ.
ಪ್ರಸ್ತುತ ಸರ್ಕಾರದಿಂದ ಮತ್ತು ಜಿಲ್ಲಾಧಿಕಾರಿಯವರ ಸಮಿತಿಯಿಂದ ಅಂಗೀಕೃತವಾದ 1978ರ ಪೂರ್ವದ ಅರಣ್ಯ ಒತ್ತುವರಿ ಪ್ರಕರಣಗಳನ್ನು ಕರ್ನಾಟಕ ಅರಣ್ಯ ಅಧಿನಿಯಮ, 1963ರ ಸೆಕ್ಷನ್ 28 ರಂತೆ ಡಿ-ನೋಟಿಫಿಕೇಶನ್ ಮಾಡಲು ಪರಿಹಾರಾತ್ಮಕವಾಗಿ (Compansatory Afforestation) ಉತ್ತರ ಕನ್ನಡ ಜಿಲ್ಲೆಯಲ್ಲಿ 2499 ಪ್ರಕರಣಗಳಿಗೆ 1293.253 ಹೆಕ್ಟೇರ್ ಪರ್ಯಾಯ ಭೂಮಿಯ ಅವಶ್ಯಕತೆಯಿರುತ್ತದೆ. ಪರ್ಯಾಯ ಭೂಮಿಯನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.
ವಿಧಾನಪರಿಷತ್ ಸದಸ್ಯ ಶಾಂತಾರಾಮ್ ಸಿದ್ದಿ ಅವರ ಗಮನಸೆಳೆಯುವ ಸೂಚನೆಗೆ ಕಂದಾಯ ಸಚಿವರು ಉತ್ತರ ನೀಡಿದ್ದಾರೆ.