ಗುರುನಮನ ಮತ್ತು ಸ್ನೇಹಿತರ ಸಮ್ಮಿಲನ
ಕೊಪ್ಪಳ, ೧೩: ಶ್ರೀ ಗವಿಸಿದ್ಧೇಶ್ವರ ಪ್ರೌಢಶಾಲೆಯ ೧೯೯೭-೯೮ ರ ಬ್ಯಾಚಿನ ’ಗುರುನಮನ’ ಕಾರ್ಯಕ್ರಮವನ್ನು ದಿ. ೧೫-೧೨-೨೦೨೪, ರವಿವಾರ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಮುಂಜಾನೆ ೧೦ ಗಂಟೆಗೆ ಆಯೋಜಿಸಲಾಗಿದೆ.
’ಗುರುನಮನ’ದ ದಿವ್ಯ ಸಾನಿಧ್ಯವನ್ನು ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ವಹಿಸಲಿದ್ದು, ಉದ್ಘಾಟನೆಯನ್ನು ನಿವೃತ್ತ ಹಿರಿಯ ಮುಖ್ಯೋಪಾಧ್ಯಾಯರಾದ ಬಿ.ವಿ. ರಾಮರೆಡ್ಡಿ ನೆರವೇರಿಸಲಿದ್ದಾರೆ. ಶಾಲೆಯ ಪ್ರಸ್ತುತ ಮುಖ್ಯೋಪಾಧ್ಯಾಯರಾದ ಅಮರೇಶ ಕರಡಿ ಅಧ್ಯಕ್ಷತೆ ವಹಿಸಲಿದ್ದು, ವಿದೇಶಗಳಲ್ಲಿ, ಹೊರ ರಾಜ್ಯಗಳಲ್ಲಿ ಮತ್ತು ದೂರ ದೂರದ ಪ್ರದೇಶಗಳಲ್ಲಿ ನೆಲೆ ನಿಂತಿರುವ ೧೯೯೭-೯೮ ರ ಬ್ಯಾಚಿನ ೧೪೦ ಕ್ಕೂ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಕಲಿಸಿದ ಗುರುಗಳಿಗೆ, ಲಿಂಗೈಕ್ಯರಾದ ಗುರುಗಳ ಕುಟುಂಬದವರಿಗೆ ಸನ್ಮಾನ, ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಅನಿಸಿಕೆಗಳು, ತರಗತಿ ಅಣಕು ಸೇರಿದಂತೆ ವಿಭಿನ್ನ ವೇದಿಕೆಯ ಕಾರ್ಯಕ್ರಮವಿರುತ್ತದೆ ಎಂದು ೧೯೯೭-೯೮ ರ ಬ್ಯಾಚಿನ ’ಗುರುನಮನ’ದ ಸಂಚಾಲಕ ಸಮಿತಿಯ ಸ್ನೇಹಿತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.