ವಿದ್ಯಾರ್ಥಿಗಳಲ್ಲಿ ಅದ್ಬುತವಾದ ಜ್ಞಾನಯಿದೆ ಅದನ್ನು ಸದುಪಯೋಗ ಪಡಿಸಿಕೊಳ್ಳಿ : ಕಲ್ಲೇಶ ಬಿ

0

Get real time updates directly on you device, subscribe now.

ಕೊಪ್ಪಳ,  ವಿದ್ಯಾರ್ಥಿಗಳಲ್ಲಿ ಅದ್ಭುತವಾದ ಜ್ಞಾನವಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮುಖ್ಯ ಆಡಳಿತ ಅಧಿಕಾರಿ ಕಲ್ಲೇಶ ಬಿ ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶುಕ್ರವಾರದಂದು 2024-25 ಸಾಲಿನ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಮತ್ತು ಕಾಲೇಜಿನ ಎಲ್ಲ ಸಹ ಪಠ್ಯ ಚಟುವಟಿಕೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಸ್ವಾವಲಂಬನೆ ಇರಬೇಕು ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ನಿಮ್ಮ ಗುರಿಗಳನ್ನು ಸಾಧಿಸಬೇಕು. ಚೆನ್ನಾಗಿ ಅಭ್ಯಾಸ ಮಾಡಿದರೆ ಒಳ್ಳೆಯ ಉದ್ಯೋಗ ಸಿಕ್ಕೇ ಸಿಗುತ್ತದೆ ಎಲ್ಲ ವಿಷಯಗಳನ್ನು ಅಭ್ಯಾಸ ಮಾಡಬೇಕು ಒಂದು ಪಾಠವನ್ನು ಪದೇ ಪದೇ ಓದಬೇಕು ದೃಢವಾದ ಮನಸ್ಸು ಮತ್ತು ಛಲ ಇರಬೇಕು ಆಗ ಮಾತ್ರ ಜೀವನದಲ್ಲಿ ಯಶಸ್ವಿ ಆಗಲು ಸಾಧ್ಯ. ಸತತವಾಗಿ ಪ್ರಯತ್ನ ಮಾಡದರೆ ಯಶಸ್ಸು ಖಂಡಿತ ಸಿಗುತ್ತದೆ. ನಿರಾಸೆ ಆಗಬಾರದು ಸಾಧನೆಗೆ ಅಸಾಧ್ಯವಾದದ್ದು ಯಾವುದು ಇಲ್ಲ ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಮಾತನಾಡಿ ಕಾಲೇಜಿನಲ್ಲಿರುವ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ನಮ್ಮ ಕಾಲೇಜು ಬಹು ಬೇಗನೆ ಅಭಿವೃದ್ಧಿಹೊಂದಿದ್ದು, ಬಡ ವಿದ್ಯಾರ್ಥಿಗಳಿಗೆ ಸರಕಾರಿ ಕಾಲೇಜುಗಳು ಬಹಳ ಉಪಯುಕ್ತವಾಗಿವೆ. ಇಲ್ಲಿ ಕಡಿಮೆ ಶುಲ್ಕ ಇರುತ್ತದೆ. ನೀವು ಕಥೆ, ಕಾದಂಬರಿ, ಪುಸ್ತಕ, ಪತ್ರಿಕೆಗಳನ್ನು ಓದಬೇಕು. ಪರಿಶ್ರಮ ಪಟ್ಟವರು ಜೀವನದಲ್ಲಿ ಮುಂದೆ ಬರುತ್ತಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಾಂಸ್ಕೃತಿಕ ವಿಭಾಗದ ಸಂಚಾಲಕಿ ಡಾ. ಹುಲಿಗೆಮ್ಮ, ಶಿಕ್ಷಣ ಪ್ರೇಮಿ ಬಿ. ಜಿ ಕರಿಗಾರ್, ಕ್ರೀಡಾ ವಿಭಾಗದ ಮುಖ್ಯಸ್ಥ ಡಾ.ಪ್ರದೀಪ್ ಕುಮಾರ, ಗ್ರಂಥಾಪಾಲಕ ಡಾ. ಮಲ್ಲಿಕಾರ್ಜುನ, ಉಪನ್ಯಾಸಕರಾದ ಡಾ. ನರಸಿಂಹ, ಡಾ. ಅಶೋಕ ಕುಮಾರ್, ಶುಭ, ಸುಮಿತ್ರಾ ಎಸ್. ವಿ. ವಿರೂಪಾಕ್ಷಪ್ಪ ಮುತ್ತಾಳ, ಶಿವಪ್ರಸಾದ್ ಹಾದಿಮನಿ, ಶ್ರೀ ಕಾಂತ್, ಬೊಮ್ಮನಾಳ ಸೇರಿದಂತೆ ಕಾಲೇಜಿನ ಎಲ್ಲ ಅತಿಥಿ ಉಪನ್ಯಾಸಕರು ಹಾಗೂ ಎಲ್ಲ ಭೋದಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಭೂಮಿಕಾ ಮತ್ತು ಸಬಿಹಾ ನಿರೂಪಿಸಿದರು, ಮಹಾದೇವಿ ಪ್ರಾರ್ಥಿಸಿದರು, ನೇತ್ರಾ ಸ್ವಾಗತಿಸಿದರು. ಭವ್ಯ ವಂದಿಸಿದರು,

Get real time updates directly on you device, subscribe now.

Leave A Reply

Your email address will not be published.

error: Content is protected !!