ಡಿ.17 ರಂದು ಭಾಗ್ಯನಗರ, ಕೊಪ್ಪಳ ವಿವಿಧೆಡೆ ವಿದ್ಯುತ್ ವ್ಯತ್ಯಯ

Get real time updates directly on you device, subscribe now.

 ಕೊಪ್ಪಳ, ): ಜೆಸ್ಕಾಂ ಕೊಪ್ಪಳ ಉಪ ವಿಭಾಗ ವ್ಯಾಪ್ತಿಯ 110/33/11ಕೆವಿ ಎಂ.ಎA.ಯು.ಎಸ್ ಕೊಪ್ಪಳ ಸ್ಟೇಷನ್ ತೃತೀಯ ತ್ರೈಮಾಸಿಕ ತುರ್ತು ನಿರ್ವಹಣೆ ಕೆಲಸ ನಡೆಸುತ್ತಿರುವ ಪ್ರಯುಕ್ತ ಈ ಸ್ಟೇಷನಗೆ ಒಳಪಡುವ ಎಲ್ಲ ಮಾರ್ಗಗಳಲ್ಲಿ ಡಿಸೆಂಬರ್ 17 ರಂದು ಬೆಳಿಗ್ಗೆ 09 ಗಂಟೆಯಿAದ ಸಾಯಂಕಾಲ 05 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಅಂದು ಭಾಗ್ಯನಗರ, ಎಫ್-09 ಬನ್ನಿಕಟ್ಟಿ, ಎಫ್-03 ಎಸ್ ಜಿ ಕಾಲೇಜ್ , ಎಫ್ 10 ಗವಿಮಠ, ಎಫ್ 11 ಡಿ.ಸಿ ಆಪೀಸ್, ಎಫ್ 12 ತಾಲೂಕು ಪಂಚಾಯತ, ಎಫ್ 13 ಕಾಳಿದಾಸ ನಗರ, 33 ಕೆ.ವಿ ಕಿನ್ನಾಳ ಹಾಗೂ ಮೆಡಿಕಲ್ ಕಾಲೇಜ ರಸ್ತೆ ಫೀಡರ್ ನ 33 ಕೆ.ವಿ ಲೈನಗಳು ಮತ್ತು 11 ಕೆ.ವಿ ಲೈನಗಳು ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ಕೆಲಸವು ಬೇಗನೆ ಮುಕ್ತಾಯಗೊಂಡಲ್ಲಿ, ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ಥಿ ಕೆಲಸ-ಕಾರ್ಯಗಳನ್ನು ಮಾಡಬಾರದೆಂದು ಈ ಮೂಲಕ ಕೋರಲಾಗಿದೆ. ಒಂದು ವೇಳೆ ವಿದ್ಯುತ್ ಅಫಘಾತ ಸಂಭವಿಸಿದಲ್ಲಿ ಕಂಪನಿಯು ಜವಾಬ್ದಾರರಾಗಿರುವುದಿಲ್ಲ ಎಂದು ಜೆಸ್ಕಾಂ ಕೊಪ್ಪಳ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!