ಕಲಾ ಸಂಭ್ರಮ – ಕಲಾ ದೀಪ್ತಿ
Koppal ಸ್ವರ ಸೌರಭ ಸಂಗೀತ ಮತ್ತು ಲಲಿತ ಕಲಾ ಸಂಸ್ಥೆ ಭಾಗ್ಯನಗರವತಿಯಿಂದ ಕೊಪ್ಪಳದ ಬಾಲಕೀಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಚಿನ್ನರೊಂದಿಗೆ ಕಲಾ ಸಂಭ್ರಮ ಎಂಬ ಶೀರ್ಷಿಕೆಯೊಂದಿಗೆ ಕಲಾ ದೀಪ್ತಿ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಹ ಶಿಕ್ಷಕರಾದ ವೀರೇಶ ಚೋಳಪ್ಪರವರು ಸಸ್ಯಕ್ಕೆ ನೀರೇರೆಯುವ ಮೂಲಕ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಹ ಶಿಕ್ಷಕರಾದ ದೇವಪ್ಪರವರು ಸಂಸ್ಥೆಯವತಿಯಿಂದ ಮಕ್ಕಳಿಗಾಗಿ ವಿಶೇ? ಕಾರ್ಯಕ್ರಮವನ್ನು ಆಯೋಜಿಸರುವುದು ಅದ್ಭುತ ಕಾರ್ಯವಾಗಿದೆ, ಓಡುತ್ತಿರುವ ಕಾಲ ಘಟ್ಟದಲ್ಲಿ ಸಾಮಾಜಿಕ ಪರಿಸರವನ್ನು ಕಾಪಾಡುವಲ್ಲಿ ಸಾಂಸ್ಕೃತಿಕ ಪರಂಪರೆಯ ಪಾತ್ರ ಬಹು ದೊಡ್ಡದಾಗಿದೆ. ಇಂತಹ ಇನ್ನು ಅನೇಕ ಕಾರ್ಯಕ್ರಮ ಬೇರೆಲ್ಲ ಶಾಲೆಗಳಲ್ಲಿ ನೆರವೇರಲಿ ಎಂದು ಆಶಿಸುತ್ತೇನೆ ಎಂದರು.
ವಿಜಯಲಕ್ಷ್ಮಿಯವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಅಭಿ?ಕ ಚಿತ್ರಗಾರರವರ ಬಾನ್ಸೂರಿ ವಾದನ, ಸಂಗೀತ ಶರಣಪ್ಪರವರ ಸುಗಮ ಸಂಗೀತ, ಅಲ್ಲಾಭಕ್ಷಿ ವಾಲಿಕಾರರವರ ತತ್ವಪದಗಳು ಹಾಗೂ ವಿಶಾಲ ಹಾಗೂ ತಂಡದವರ ಸಮೂಹ ನೃತ್ಯ ಕಾರ್ಯಕ್ರಮಗಳು ಮಕ್ಕಳ ಮನಸೊರೆಗೊಂಡವು.
ವಾದ್ಯವೃಂದದ ಕೀಬೋರ್ಡನಲ್ಲಿ ರಾಮಚಂದ್ರಪ್ಪ ಉಪ್ಪಾರ, ಬಾನ್ಸೂರಿಯಲ್ಲಿ ನಾಗರಾಜ ಶ್ಯಾವಿ, ತಬಲದಲ್ಲಿ ಮಾರುತಿ ದೊಡ್ಡಮನಿ, ರಿಧಮ ಪ್ಯಾಡನಲ್ಲಿ ಪುಟ್ಟರಾಜ ಬಿನ್ನಾಳರವರು ಮೆರುಗು ನೀಡಿದರು.