ಮಾದಿನೂರ ಗ್ರಾ.ಪಂ ನೂತನ ಅಧ್ಯಕ್ಷೆ ನಾಗಮ್ಮ ಯಲ್ಲಪ್ಪ ಹಳೇಮನಿ ,ಉಪಾಧ್ಯಕ್ಷೆ ಕೆಂಚವ್ವ ಹುಲಗಪ್ಪ ಕೊಪ್ಪಳ ಅಧಿಕಾರ ಸ್ವೀಕಾರ
ಕೊಪ್ಪಳ.ಅ.03; ತಾಲೂಕಿನ ಮಾದಿನೂರ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ನೂತನ ಅಧ್ಯಕ್ಷೆಯಾಗಿ ನಾಗಮ್ಮ ಯಲ್ಲಪ್ಪ ಹಳೇಮನಿ ಹಾಗೂ ಉಪಾಧ್ಯಕ್ಷೆಯಾಗಿ ಕೆಂಚವ್ವ ಹುಲಗಪ್ಪ ಕೊಪ್ಪಳ ಇವರು ಗುರುವಾರ ಬೆಳಿಗ್ಗೆ ಅಧಿಕಾರ ಸ್ವೀಕರಿಸಿದರು.
ಮೊದಲನೇ ಅವಧಿಗೆ ಅಧ್ಯಕ್ಷೆಯಾಗಿ ಮಾದಿನೂರ ಗ್ರಾಮದ ಸವಿತಾ ಸುರೇಶ ಬೃಂಗಿ ಹಾಗೂ ಅದೇ ಗ್ರಾಮದ ಸದಸ್ಯೆ ಮಂಜುಳಾ ಸಿದ್ದಪ್ಪ ಜಾಲಿಹಾಳ ಉಪಾಧ್ಯಕ್ಷೆಯಾಗಿ ತಲಾ 30 ತಿಂಗಳು ಅಧಿಕಾರ ಅನುಭವಿಸಿ ಮುಕ್ತಾಯಗೊಳಿಸಿದ್ದರು.
ತೆರುವಾದ ಸ್ಥಾನಕ್ಕೆ ಜು.20 ರಂದು ಮಾದಿನೂರ ಗ್ರಾಮ ಪಂಚಾಯತಿಯಲ್ಲಿ ಬಿಗುವಿನ ವಾತಾವರಣದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮೂಲಕ ಚುನಾವಣಾ ಅಧಿಕಾರಿ ಜಯಶ್ರೀ. ಆರ್ ಇವರ ನೇತೃತ್ವದಲ್ಲಿ ಗೌಪ್ಯ ಮತದಾನ ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ಮಾದಿನೂರ ಗ್ರಾಮದ ಸದಸ್ಯ ಚನ್ನಕೇಶವ ನಂದಾಪೂರ ಹಾಗೂ ಮುದ್ಲಾಪೂರ ಗ್ರಾಮದ ಸದಸ್ಯೆ ನಾಗಮ್ಮ ಯಲ್ಲಪ್ಪ ಹಳೇಮನಿ ನಡುವೆ ಸ್ಪರ್ಧೆ ನಡೆದು ನಾಮಪತ್ರ ಸಲ್ಲಿಸಿದರು. 5 ಜನ ಸದಸ್ಯರು ನಾಗಮ್ಮ ಯಲ್ಲಪ್ಪ ಹಳೇಮನಿ
ಅವರಿಗೆ ಗೌಪ್ಯ ಮತಗಳನ್ನು ನೀಡಿದ್ದರಿಂದ ಜಯಶಾಲಿಯಾಗಿದ್ದರು. 4 ಮತಗಳನ್ನು ಪಡೆದು ಚನ್ನಕೇಶವ ನಂದಾಪೂರ
ಪರಾಭವಗೊಂಡರು. ಉಪಾಧ್ಯಕ್ಷೆ ಸ್ಥಾನಕ್ಕೆ ದೇವಲಾಪೂರ ಸದಸ್ಯೆ ಕೆಂಚವ್ವ ಹುಲಗಪ್ಪ ಕೊಪ್ಪಳ ಹಾಗೂ ಮಾದಿನೂರ ಸದಸ್ಯೆ
ಮಂಜುಳಾ ಸಿದ್ದಪ್ಪ ಜಾಲಿಹಾಳ ಇಬ್ಬರು ನಡುವೆ ಸ್ಪರ್ಧೆ ನಡೆದು 5 ಮತಗಳನ್ನು ಪಡೆದು ಕೆಂಚವ್ವ ಹುಲಗಪ್ಪ ಕೊಪ್ಪಳ
ವಿಜಯಶಾಲಿಯಾದರು. 4 ಮತಗಳನ್ನು ಪಡೆದು ಮಂಜುಳಾ ಸಿದ್ದಪ್ಪ ಜಾಲಿಹಾಳ ಸೋಲು ಅನುಭವಿಸಿದರು ಎಂದು
ಚುನಾವಣಾ ಅಧಿಕಾರಿ ಹಾಗೂ ಶಿಶು ಅಭಿವೃದ್ಧಿ ಅಧಿಕಾರಿ ಜಯಶ್ರೀ. ಆರ್ ಘೋಷಣೆ ಮಾಡಿದ್ದರು. ಚುನಾವಣೆಯಲ್ಲಿ ವಿಜಯಶಾಲಿಯಾದ ನೂತನ ಅಧ್ಯಕ್ಷೆ ನಾಗಮ್ಮ ಯಲ್ಲಪ್ಪ ಹಳೇಮನಿ ಹಾಗೂ ಉಪಾಧ್ಯಕ್ಷೆ ಕೆಂಚವ್ವ ಹುಲಗಪ್ಪ ಕೊಪ್ಪಳ ಇಂದು ಗುರುವಾರ ತಮ್ಮ ಅಪಾರ ಬೆಂಬಲಿಗರೊಂದಿಗೆ ಗ್ರಾಮ ಪಂಚಾಯಿತಿಗೆ ತೆರಳಿ ಅಧಿಕಾರ ಸ್ವೀಕರಿಸಿದರು. ನೂತನವಾಗಿ ಅಧಿಕಾರ ಸ್ವೀಕರಿಸಿದ ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆಗೆ ಅವರ ಬೆಂಬಲಿಗರು ಹೂ ಮಾಲೆ ಹಾಕಿ ಪರಸ್ಪರ ಸಿಹಿ ತಿನಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಬಸವರಾಜ ಎತ್ತಿನಮನಿ, ಚನ್ನಕೇಶವ
ನಂದಾಪೂರ, ಗವಿಸಿದ್ದಪ್ಪ ತಳಕಲ್, ಹುಲಗಪ್ಪ ಭಜಂತ್ರಿ, ಸುನೀತಾ ಅವಣ್ಣಿ, ಮಂಜುಳಾ ಜಾಲಿಹಾಳ, ಸವಿತಾ ಬೃಂಗಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗವಿಸಿದ್ದಯ್ಯ ಗಂಧದ, ಕಾರ್ಯದರ್ಶಿ ಭೀಮಣ್ಣ ಬಡಗೇರ, ಹಿರಿಯ ಮುಖಂಡ ಯಲ್ಲಪ್ಪ ಹಳೇಮನಿ ಹಾಗೂ ಮಾದಿನೂರ, ದೇವಲಾಪೂರ, ಮುದ್ಲಾಪೂರ ಗ್ರಾಮದ ಗುರು ಹಿರಿಯರು ಮತ್ತು ಯುವಕರು
ಉಪಸ್ಥಿತರಿದ್ದರು.
Comments are closed.