ಅ.6 ರಂದು ಪಂಚಮಸಾಲಿ ಸಮಾಜದ ತಾಲೂಕು ಮಟ್ಟದ ಸಭೆ; ಚಂದ್ರಶೇಖರ ನಾಲತ್ವಾಡ
ಕುಷ್ಟಗಿ.ಅ.03; ತಾಲೂಕು ಪಂಚಮಸಾಲಿ ಸಮಾಜದ
ವತಿಯಿಂದ ಎಸ್.ಎಸ್.ಎಲ್.ಸಿ ಮತ್ತು
ಪಿ.ಯು.ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಹಾಗೂ ತಾಲೂಕು ಅಧ್ಯಕ್ಷ ಚಂದ್ರಶೇಖರ ನಾಲತ್ವಾಡ
ಇವರ ಅಪ್ಪಣೆ ಮೇರೆಗೆ ವಿವಿಧ ವಿಷಯಗಳ ಕುರಿತು
ಚರ್ಚಿಸಲು
ಅ.6 ರವಿವಾರ ಬೆಳಿಗ್ಗೆ 10:30 ಗಂಟೆಗೆ ಇಲ್ಲಿನ
ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಸಭೆ
ಕರೆಯಲಾಗಿದೆ ಕಾರಣ ಕುಷ್ಟಗಿ ತಾಲೂಕಿನ
ಪಂಚಮಸಾಲಿ ಸಮಾಜದ ಅಧ್ಯಕ್ಷರು ಹಾಗೂ
ಉಪಾಧ್ಯಕ್ಷರು,
ಪದಾಧಿಕಾರಿಗಳು, ಸರ್ವ ಸದಸ್ಯರು ಮತ್ತು ಹಿರಿಯ
ಮುಖಂಡರು ಹಾಗೂ ಸಮಾಜದ ಬಾಂಧವರು ಹೆಚ್ಚಿನ
ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಪಂಚಮಸಾಲಿ
ಸಮಾಜದ ತಾಲೂಕು ಅಧ್ಯಕ್ಷ ಚಂದ್ರಶೇಖರ
ನಾಲತ್ವಾಡ, ಪ್ರಧಾನ ಕಾರ್ಯದರ್ಶಿ ಶಿವಪ್ಪ
ಗೆಜ್ಜಲಗಟ್ಟಿ, ರಾಜ್ಯ ನಿರ್ದೇಶಕ ದೊಡ್ಡಪ್ಪ
ಕಂದಗಲ್, ಸಂಘಟನಾ ಕಾರ್ಯದರ್ಶಿ ಮಲ್ಲಪ್ಪ ಬಾಳಿ
ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.