ಮೌನೇಶಗೆ ಉತ್ತಮ ಕರಾಟೆ ಶಿಕ್ಷಕ ಪ್ರಶಸ್ತಿ

0

Get real time updates directly on you device, subscribe now.


ಕೊಪ್ಪಳ : ಕರಾಟೆ ಡೋ ಕೆನ್ರ್ಯುಕನ್ ಶೊಟೋಕಾನ್ ಸ್ಪೈಲ್ ಇಂಡಿಯಾ ಹಾಗೂ ಉತ್ತರ ಕನ್ನಡ ಕರಾಟೆ ಶಿಕ್ಷಕರ ಮತ್ತು ಕ್ರೀಡಾ ವತಿಯಿಂದ ಕೊಡಮಾಡುವ ಉತ್ತಮ ಕರಾಟೆ ಶಿಕ್ಷಕ ಪ್ರಶಸ್ತಿಯೂ ಕೊಪ್ಪಳ ಜಿಲ್ಲೆಯ ಕರಾಟೆ ಶಿಕ್ಷಕ ಮೌನೇಶ ವಡ್ಡಟ್ಟಿಯವರಿಗೆ ಲಭಿಸಿದೆ.
ಕರಾಟೆ ಶಿಕ್ಷಕನಾಗಿ ಪೋಲಿಸ್ ಪ್ರಶಿಕ್ಷಣಾರ್ಥಿಗಳಿಗೆ, ಐಆರ್‌ಬಿ ಪ್ರಶಿಕ್ಷಣಾರ್ಥಿಗಳಿಗೆ, ಕಂದಾಯ ಇಲಾಖೆಯ ಸಿಬ್ಬಂದಿ ವರ್ಗದವರಿಗೆ, ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ, ಇನ್ನರ್ ವ್ಹಿಲ್ ಕ್ಲಬ್‌ನ ಸದಸ್ಯರಿಗೆ, ಹೆಜ್ಜೆ ಮಹಿಳಾ ಸಂಘಟನೆಯ ಸದಸ್ಯರಿಗೆ ಇನ್ನೂ ಹಲವಾರು ಸಂಘ ಸಂಸ್ಥೆಗಳ ಮಹಿಳೆಯರಿಗೆ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವ ಸ್ವಯಂ ರಕ್ಷಣಾ ಕಲೆಯಾದ ಕರಾಟೆ ತರಬೇತಿಯನ್ನು ನೀಡಿರುವುದರ ಜೊತೆಗೆ ಸುಮಾರು ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರ ಸೇರಿ ಇತರೆ ಕ್ಷೇತ್ರಗಳಲ್ಲಿ ಎಲೆ ಮರೆ ಕಾಯಿಯಂತೆ ೨೫ ವರ್ಷಗಳ ಸೇವೆ ಸಲ್ಲಿಸುತ್ತಿರುವುದನ್ನು ಗುರ್ತಿಸಿ ಡಿ ೮ ರಂದು ಕಾರವಾರದಲ್ಲಿ ಆಯೋಜಿಸಲಾಗಿದ್ದ ಪ್ರಥಮ ರಾಷ್ಟ್ರೀಯ ಕರಾಟೆ ಚಾಂಪಿಯನ್ ಟೂರ್ನಿಯಲ್ಲಿ ಮೌನೇಶರವರಿಗೆ ಉತ್ತಮ ಕರಾಟೆ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಆಯೋಜಕರಾದ ಸಾಗರ್ ಉದಯ ನಾಯಕ, ಭಿ ರಮೇಶ, ವಿಶಾಲ ನಾಯಕ, ರಾಜ್ಯ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷಕರಾದ ನದೀಮ್, ರವಿ ಸಾಲಿಯಾನ್, ಸತೀಶ ಬೆಳಮಣ್, ಶಿವಕುಮಾರ ಶಾರದಳ್ಳಿ, ಅರವಿಂದ ನಾಯಕ, ಲಕ್ಷ್ಮೀ ನಾರಾಯಣ, ಪ್ರಕಾಶ, ಸಲೀಂ, ಅಣ್ಣಪ್ಪ ಮಾರಕಲ್ ಸೇರಿದಂತೆ ಇತತರು ಉಪಸ್ಥಿತರಿದ್ದರು

Get real time updates directly on you device, subscribe now.

Leave A Reply

Your email address will not be published.

error: Content is protected !!