ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಶ್ರೀ ಗವಿಸಿದ್ದೇಶ್ವರ ಹೆಸರಿಡಿ : ರಾಜಶೇಖರ ಗೌಡ ಆಡೂರ 

Get real time updates directly on you device, subscribe now.

ಕೊಪ್ಪಳ : ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಶ್ರೀ ಗವಿಸಿದ್ದೇಶ್ವರ ರೈಲ್ವೆ ನಿಲ್ದಾಣ ಎಂದು  ಹೆಸರಿಡುವಂತೆ ನಗರಸಭೆ ಸದಸ್ಯ ರಾಜಶೇಖರಗೌಡ ಆಡೂರ ಮಾನವಿ ಮಾಡಿದರು.
ಅವರು  ಶನಿವಾರದಂದು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ 11ನೇ ವಾರ್ಡಿನಲ್ಲಿ ಒನಕೆ ಓಬವ್ವನ ವೃತ್ತ ನಿರ್ಮಿಸಬೇಕು, ಜೆಪಿ ಮಾರುಕಟ್ಟೆ ಅಭಿವೃದ್ಧಿಪಡಿಸಬೇಕು ಮಾರುಕಟ್ಟೆಯಲ್ಲಿ ಸಿಸಿ ಕ್ಯಾಮೆರಾ,ಗೇಟುಗಳನ್ನು  ಅಳವಡಿಸಬೇಕು, ಈ ಹಿಂದೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ವಿವಿಧ ಸಮುದಾಯದವರು ವಿವಿಧ ವೃತ್ತಗಳನ್ನು ನಿರ್ಮಿಸಲು ಮನವಿ ಮಾಡಿದ್ದರು, ಅದು ಇದುವರೆಗೂ ಕಾರ್ಯಗತವಾಗಿಲ್ಲ,ನಗರಸಭೆ ಅಧ್ಯಕ್ಷರು ಇದನ್ನು ಗಮನ ಹರಿಸಿ ಕೂಡಲೇ ವಿವಿಧ ಸಮುದಾಯದವರಿಗೆ ನಗರದಲ್ಲಿ ವಿವಿಧಡೆ ವೃತ್ತ ನಿರ್ಮಿಸಲು  ಅವಕಾಶ ನೀಡಬೇಕು ಎಂದು  ಸಭೆಯಲ್ಲಿ ಮನವಿ ಮಾಡಿದರು.
ನಗರಸಭೆಯ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿ ಶೀಘ್ರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಸಭೆ ಉಪಾಧ್ಯಕ್ಷ ಅಶ್ವಿನಿ ಭಗತ್ ಕುಮಾರ್ ,ನಗರಸಭೆಯ ಪೋರಾಯುಕ್ತ ಗಣಪತಿ ಪಾಟೀಲ್ ,ನಗರಸಭೆ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
ಸನ್ಮಾನ : ನಗರಸಭೆಯ ಉಪಚುನಾವಣೆಯಲ್ಲಿ ಜಯ ಸಾಧಿಸಿದ 11ನೇ ವಾರ್ಡಿನ ಕಾಂಗ್ರೆಸ್ ಪಕ್ಷದ ರಾಜಶೇಖರಗೌಡ ಆಡೂರ,8ನೇ ವಾರ್ಡಿನ ಬಿಜೆಪಿ ಪಕ್ಷದ ಕವಿತಾ ಬಸವರಾಜ್ ಗಾಳಿ ಅವರನ್ನು ಇದೇ ಸಂದರ್ಭದಲ್ಲಿ  ಅಧ್ಯಕ್ಷರು ಸದಸ್ಯರು ಅಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.

Get real time updates directly on you device, subscribe now.

Comments are closed.

error: Content is protected !!