ಯತ್ನಾಳ ಬಹಿರಂಗ ಕ್ಷಮೆಯಾಚನೆಗೆ ಬಸವಪರ ಸಂಘಟನೆಗಳ ಒತ್ತಾಯ
ಕೊಪ್ಪಳ : ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವಕ್ಕೆ ಅವಮಾನಕರ ಹೇಳಿಕೆಯನ್ನು ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳರವರು ಅಸಭ್ಯ ನಡೆಯನ್ನು ಕೊಪ್ಪಳ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಎಲ್ಲಾ ಬಸವಪರ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ. ಅವರು ಬಹಿರಂಗ ಕ್ಷಮೆಯಾಚನೆ ಮಾಡಬೇಕೆಂದು ಜಿಲ್ಲಾಧ್ಯಕ್ಷ ಹನಮೇಶ ಕಲ್ಮಂಗಿಯವರು ಎಲ್ಲರ ಪರವಾಗಿ ಒತ್ತಾಯಿಸಿದರು.
ಎಲ್ಲ ಬಸವಪರ ಸಂಘಟನೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ; ಕೊಪ್ಪಳ ಬಸವೇಶ್ವರ ವೃತ್ತದಿಂದ ಪ್ರತಿಭಟನೆ ಮೂಲಕ ತಹಸೀಲದಾರ ಕಚೇರಿ ತಲುಪಿ ಕೊಪ್ಪಳ ತಹಸೀಲದಾರರಿಗೆ ಮನವಿ ಸಲ್ಲಿಸಿ ; ಹನಮೇಶ ಕಲ್ಮಂಗಿಯವರು ಮಾತನಾಡುತ್ತಿದ್ದರು. ಇತ್ತೀಚೆಗೆ ಪಹಣಿಯಲ್ಲಿ ವಕ್ಸ್ ನಮೂದು ವಿಚಾರಕ್ಕೆ ಸಂಬAಧಿಸಿದAತೆ ನಡೆದ ಬೀದರಿನ ಕಾರ್ಯಕ್ರಮವೊಂದರಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವಕ್ಕೆ ಅವಮಾನಕರ ಹೇಳಿಕೆಯನ್ನು ಜಾಗತಿಕ ಲಿಂಗಾಯತ ಮಹಾಸಭಾ ಕೊಪ್ಪಳ ಜಿಲ್ಲಾ ಘಟಕ ಹಾಗೂ ಎಲ್ಲಾ ಬಸವಪರ ಸಂಘಟನೆಗಳು ತೀವ್ರವಾಗಿ ಪ್ರತಿಭಟನೆ ನಡೆಸಿದರು.
ಧರ್ಮದ ಹೆಸರಿನಲ್ಲಿ ಶತ ಶತಮಾನಗಳಿಂದ ಶೋಷಣೆಗೆ ಒಳಗಾದ ಮನುಕುಲವನ್ನು ಉದ್ದರಿಸಿದವರು ಮಹಾ ಪುರುಷ ವಿಶ್ವಗುರು ಬಸವಣ್ಣನವರು. ಅವರು ಹನ್ನೆರಡನೇ ಶತಮಾನದಲ್ಲಿ ಉದಯಿಸಿ, ಜಾತಿ, ವರ್ಣ, ವರ್ಗರಹಿತ, ಸರ್ವ ಜೀವಿಗಳ ಏಳಿಗೆಗಾಗಿ ಧಾರ್ಮಿಕ, ಸಾಮಾಜಿಕ ಕ್ರಾಂತಿಯನ್ನು ಮಾಡಿದ್ದು ಕರ್ನಾಟಕದ ಇತಿಹಾಸದಲ್ಲಿಯೇ ಒಂದು ಮೈಲಿಗಲ್ಲು.
ವಿಶ್ವಗುರು ಬಸವಣ್ಣನವರ ತತ್ತ್ವಗಳು ಕೇವಲ ಕರ್ನಾಟಕವನ್ನು ಮಾತ್ರ ಅಲ್ಲ, ಭಾರತವನ್ನು ಮಾತ್ರ ಅಲ್ಲ, ಇಡೀ ವಿಶ್ವದ ಮಾನವ ಕುಲವನ್ನು ಬೆಳಗುತ್ತಿವೆ. ಪ್ರಪಂಚದ ಮುಂದುವರಿದ ರಾಷ್ಟ್ರಗಳಲ್ಲಿ ಒಂದಾದ ಇಂಗ್ಲೆAಡ ಥೇಮ್ಸ್ ನದಿ ದಂಡೆಯ ಮೇಲೆ ಅವರ ಪ್ರತಿಮೆಯನ್ನು ಸ್ಥಾಪಿಸಿ ಗೌರವ ಸಲ್ಲಿಸಲಾಗಿದೆ. ಲಕ್ಷದಾ ತೋಂಭತ್ತಾರು ಸಾವಿರ ಶರಣ ಶರಣೆಯರೊಂದಿಗೆ ಕಟ್ಟಿದ ಮಹಾಮಾರ್ಗವನ್ನು ಜಗತ್ತೇ ಮೆಚ್ಚಿಕೊಳ್ಳುತ್ತಿದೆ.
ಇಂತಹ ಸಂದರ್ಭದಲ್ಲಿ ಲಿಂಗಾಯತರಾಗಿಯೇ ಹುಟ್ಟಿದ ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಉದ್ಧಟತನದ ಮಾತುಗಳನ್ನು ಆಡಿದ್ದಾರೆ. ತಾನು ಹುಟ್ಟಿದ ಧರ್ಮದ ಬಗ್ಗೆಯೇ, ತನ್ನ ಧರ್ಮದ ಗುರುವಾದ ಬಸವಣ್ಣನವರ ಬಗ್ಗೆಯೇ ಇಂತಹ ಮಾತುಗಳನ್ನ ಆಡಿದ್ದು ನೋಡಿದರೆ ಸಂಸ್ಕಾರವಿಲ್ಲದ ವ್ಯಕ್ತಿ ಎಂದು ತಿಳಿದು ಬರುತ್ತದೆ. ಅವರ ಈ ಮಾತುಗಳು ಅಧಿಕಾರದ ಆಸೆಗಾಗಿ, ಯಾರನ್ನೋ ಮೆಚ್ಚಿಸಲು ಆಡಿದ ನುಡಿಗಳು ಆಗಿವೆ. ಅವರ ಈ ಮಾತುಗಳು ಬಸವ ಭಕ್ತರಿಗೆ ಅಪಾರ ನೋವುಂಟು ಮಾಡಿವೆ.
“ಒಂದನ್ನಾಡಲು ಹೋಗಿ ಒಂಬತ್ತನಾಡುವ ಡಂಭಕರ ಮೆಚ್ಚ ನಮ್ಮ ಕೂಡಲಸಂಗಮದೇವಾ” ಎಂದು ಬಸವಣ್ಣನವರು ಹೇಳಿದ್ದಾರೆ. ಲಿಂಗಾಯತ ಧರ್ಮೀಯರಾದ ಯತ್ನಾಳರಿಗೆ ನಾಲಿಗೆ ಮೇಲೆ ಹಿಡಿತ ತಪ್ಪಿ ಅರಿವಿಲ್ಲದೆ ಪುಢಾರಿಯಂತೆ ಮಾತನಾಡುವುದು ಶೋಭೆ ತರುವಂಥದಲ್ಲ.
ಬಸವಣ್ಣನವರ ಬಗ್ಗೆ ಲಘುವಾಗಿ ಮಾತನಾಡಿ ಬಸವ ಭಕ್ತರಿಗೆ ನೋವು ಉಂಟು ಮಾಡಿದ್ದಕ್ಕೆ ಕೂಡಲೇ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಲೇಬೇಕು. ಇಲ್ಲವಾದರೆ ಮುಂದೆ ಅವರ ವಿರುದ್ಧ ಉಗ್ರ ಹೋರಾಟ ಮಾಡುವದು ಅನಿವಾರ್ಯವಾಗುತ್ತದೆ ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ.
ಬಸವ ಸಮಿತಿ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳೊಳ್ಳಿ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಿವಕುಮಾರ ಕುಕನೂರ, ಕೊಪ್ಪಳ ಕದಳಿ ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷೆ ನಿರ್ಮಲಕ್ಕ ಬಳ್ಳೊಳ್ಳಿ, ಜಾಲಿಂಮ ಜಿಲ್ಲಾಧ್ಯಕ್ಷೆ ಅರ್ಚನಾ ಸಸಿಮಠ, ಲಿಂಗಾಯತ ಧರ್ಮ ಮಹಾಸಭಾ ರಾಜ್ಯಾಧ್ಯಕ್ಷ ಈಶಣ್ಣ ಕೊರ್ಲಹಳ್ಳಿ, ಜಾಲಿಂಮ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ ಸಸಿಮಠ, ವಿಶ್ವಗುರು ಬಸವೇಶ್ವರ ಟ್ರಸ್ಟ್ ಅಧ್ಯಕ್ಷ ಗುಡದಪ್ಪ ಹಡಪದ, ಶರಣ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷೆ ಸಾವಿತ್ರಿ ಮುಜುಂದಾರ, ಜಾಲಿಂಮ ತಾಲೂಕು ಅಧ್ಯಕ್ಷ ದಾನಪ್ಪ ಶೆಟ್ಟರ, ಜಾಲಿಂಮ ತಾಲೂಕು ಅಧ್ಯಕ್ಷೆ ಸೌಮ್ಯ ನಾಲವಾಡ, ಜಾಲಿಂಮ ತಾಲೂಕು ಪ್ರಧಾನ ಕಾರ್ಯದರ್ಶಿ ಶರಣಬಸನಗೌಡ ಪಾಟೀಲ, ಲಿಂಗಾಯತ ಪ್ರಗತಿಶೀಲ ಸಂಘ ಅಧ್ಯಕ್ಷ ಸಂಗಮೇಶ ವಾರದ, ರಾಷ್ಟಿçÃಯ ಬಸವದಳ ಅಧ್ಯಕ್ಷ ಶಿವಬಸಯ್ಯ ವೀರಾಪೂರ ಮತ್ತು ಸಾವಿರಾರು ಬಸವತತ್ವ ಅನುಯಾಯಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Comments are closed.