ಯುವಕರು ಭಾರತೀಯ ಸೇನೆಗೆ ಸೇರಿ: ಮೇಜರ್ ಜನರಲ್ ಹರಿಪಿಳ್ಳೈ

Get real time updates directly on you device, subscribe now.

  ಯುವಕರಿಗೆ ಭಾರತೀಯ ಸೇನೆಯಲ್ಲಿ ಸೇರಲು ಬಹಳಷ್ಟು ಅವಕಾಶಗಳಿದ್ದು, ಆಸಕ್ತ ವಿದ್ಯಾರ್ಥಿಗಳು ಭಾರತೀಯ ಸೇನೆಗೆ ಸೇರಿ ಎಂದು ಎಡಿಜಿ ರಿಕ್ರೂಟಿಂಗ್ ಝಡ್‌ಆರ್‌ಓ ಬೆಂಗಳೂರಿನ ಮೇಜರ ಜನರಲ್ ಹರಿಪಿಳ್ಳೈ ಹೇಳಿದರು.

ಅವರು ಶುಕ್ರವಾರ ತಳಕಲ್ ಸರಕಾರಿ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಭಾರತೀಯ ಸೇನೆಗೆ ಸೇರುವ ಕುರಿತು ವಿಶೇಷ ಉಪನ್ಯಾಸ ನೀಡಿ, ಮಾತನಾಡಿದರು.
ಈ ವರ್ಷ ಸೇನಾ ರ‍್ಯಾಲಿಯ ಮುಖಾಂತರ ಇಡೀ ದೇಶದಾದ್ಯಂತ 40 ಸಾವಿರ ಅಭ್ಯರ್ಥಿಗಳಿಗೆ ಆಯ್ಕೆ ಮಾಡುತ್ತಿದ್ದೆವೆ. ಮುಂದಿನ ವರ್ಷ ಇದು ಡಬಲ್ ಆಗಲಿದೆ. ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಸೇನೆಯಲ್ಲ್ಲಿ ಸೇರಲು ಬಹಳಷ್ಟು ಅವಕಾಶವಿದ್ದು, ವಿದ್ಯಾರ್ಥಿಗಳು ದೇಶ ಸೇವೆ ಮಾಡಲು ಮುಂದೆ ಬರಬೇಕು ಎಂದು ಹೇಳಿದರು.
ಆಯ್ಕೆ ಪ್ರಕ್ರಿಯೆ ಮೊದಲಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಕರೆಯಲಾಗುತ್ತದೆ. ನಂತರ ವಿವಿಧ ಹಂತಗಳಲ್ಲಿ ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳ ಅರ್ಹತೆಗಳನ್ನು ಪರಿಶೀಲನೆ ಮಾಡಲಾಗುತ್ತದೆ. ಸೇನೆಗೆ ಆಯ್ಕೆಯಾದವರಿಗೆ ಸಮಾಜದಲ್ಲಿ ವಿಶೇಷ ರೀತಿಯ ಗೌರವಯುತ ಸ್ಥಾನದಲ್ಲಿ ಕಾಣಲಾಗುತ್ತದೆ ಎಂದು ಹೇಳಿದರು.
ಒಮ್ಮೆ ಸೇನೆಗೆ ಸೇರಿದ ನಂತರ ವೃತ್ತಿಪರ ಜೀವನ, ಸಾಹಸ, ಕ್ರೀಡೆ, ಪ್ರಯಾಣ ಸೇರಿದಂತೆ ತಮ್ಮ ಜೀವನ ಶೈಲಿ ವಿಭಿನ್ನವಾದ ರೀತಿಯಲ್ಲಿ ಬದಲಾವಣೆಯಾಗುತ್ತದೆ. ಕ್ರೀಡಾಪಟುಗಳಿಗೆ, ತಾಂತ್ರಿಕ ಸಿಬ್ಬಂದಿಗಳು ಹಾಗೂ ಹೆಚ್ಚಿನ ಶಿಕ್ಷಣ ಮುಗಿಸಿದವರಿಗೆ ಸೇನೆಯಲ್ಲಿ ಬೋನಸ್ ಅಂಕಗಳನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳು ಭಾರತೀಯ ಸೇನೆಯ ವೆಬ್‌ಸೈಟ್‌ನಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕರ್ನಲ್ ವಿವೇಕ್ ಜಮಾದಾರ, ತಳಕಲ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿರುಪಾಕ್ಷ ಬಾಗೋಡಿ, ಸಹಾಯಕ ಪ್ರಾಧ್ಯಾಪಕರಾದ ಡಾ. ಪ್ರದೀಪ್. ಕಬ್ಬಳ್ಳಿ ಪ್ರಶಾಂತ. ಡಾ. ಶೋಭಾ ಭುವನೇಶ್ವರಿ. ಪ್ರಥಮ ದರ್ಜೆ ಸಹಾಯಕ ಹೊನ್ನಪ್ಪ ಸೇರಿದಂತೆ ಕಾಲೇಜಿನ ಇತರೆ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!