ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಸಾಧಕರಿಗೆ ಸನ್ಮಾನ
.
ಗಂಗಾವತಿ: ಇಂದು ಗಂಗಾವತಿಯ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಅಲ್ಲಮಪ್ರಭು ಬೆಟ್ಟದೂರು ಮತ್ತು ಸುವರ್ಣ ಕರ್ನಾಟಕ ಸಂಭ್ರಮ ಪ್ರಶಸ್ತಿ ಪಡೆದ ಡಾ|| ಚಂದ್ರಪ್ಪ ಇವರನ್ನು ಸನ್ಮಾನಿಸಲಾಯಿತು. ರಾಜ್ಯೋತ್ಸವದ ಅಂಗವಾಗಿ ಸಂಸ್ಥೆಯಲ್ಲಿ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಅಲ್ಲಮಪ್ರಭು ಬೆಟ್ಟದೂರು ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾಡುತ್ತಾ ತಮ್ಮ ಬದುಕಿನ ಹಲವು ಘಟನೆಗಳನ್ನು ಹಂಚಿಕೊಳ್ಳುತ್ತ ಕೊಪ್ಪಳ ಜಿಲ್ಲೆ ಮಾಡುವಾಗ ಎಲ್ಲರೂ ನಮ್ಮನ್ನು ಕೇವಲವಾಗಿ ನೋಡಿದರು, ನಾವ್ಯಾರು ಕೂಡ ಅದಕ್ಕೆ ಎದೆಗುಂದದೆ ಮುನ್ನುಗ್ಗಿ ಹೋರಾಟವನ್ನು ಯಶಸ್ವಿಗೊಳಿಸಿದ ಕಾರಣವಾಗಿ ಇಂದು ಕೊಪ್ಪಳ ಜಿಲ್ಲೆಯಾಗಿದೆ. ಹಾಗೆಯೇ ವಿದ್ಯಾರ್ಥಿಗಳಾದವರು ಎಂತಹ ಸಮಯ ಬಂದರೂ ಯಾವುದಕ್ಕೂ ಎದೆಗುಂದದೆ ನಿಮ್ಮ ಗುರಿ ಮುಟ್ಟುವ ಕಡೆ ಮಾತ್ರ ಗಮನ ಕೊಡಬೇಕು. ಇವತ್ತಿನ ಸಂಭ್ರಮ ಎ? ಜನರ ಕೊಡುಗೆಗಳನ್ನು ನೆನಪಿಸುತ್ತದೆ. ಇಂದು ಅನುಭವಿಸುವ ಎಲ್ಲಾ ಸೌಲಭ್ಯಗಳು ಅಂದು ನಮ್ಮ ಹಿರಿಯರು ಉಳಿಸಿದ ಉಂಬಳಿ. ಅಂತೆಯೇ ನಾವು ಯಾರೂ ಕೂಡ ಬೇರೆ ಭಾ?ಯ ವಿರೋಧಿಗಳಲ್ಲ ನಮ್ಮ ಕನ್ನಡ ಭಾ?ಯ ಸದಭಿಮಾನಿಗಳು. ಅದನ್ನು ಉಳಿಸುವ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಇನ್ನೋರ್ವ ಸನ್ಮಾನಿತರಾದ ಡಾ|| ಜಿ. ಚಂದ್ರಪ್ಪ ರವರು ಮಾತನಾಡುತ್ತಾ ನಾವೆಲ್ಲ ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ನನ್ನದು ಇಲ್ಲಿಯ ಹತ್ತಿರದ ಕೆಸರಹಟ್ಟಿ, ಕ?ಪಟ್ಟು ಓದಿ ಮೇಲ್ಬಂದೆವು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದೆವು. ಇದೆಲ್ಲವೂ ಕೂಡ ಸುಮ್ಮನೆ ಆದುದಲ್ಲ ಪರಿಶ್ರಮದ ಫಲ. ನೀವೆಲ್ಲ ಪರಿಶ್ರಮ ಪಟ್ಟರೆ ಖಂಡಿತ ನೀವು ಕೂಡ ಸಾಧಕರಾಗುತ್ತೀರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಕಾಲೇಜಿನ ಪ್ರಾಚಾರ್ಯರಾದ ಬಸಪ್ಪ ನಾಗೋಲಿಯವರು ಮಾತನಾಡುತ್ತಾ, ನಾಡು ನುಡಿ ಸೇವೆಗಾಗಿ ದುಡಿದ ಮಹನೀಯರನ್ನು ವಿದ್ಯಾರ್ಥಿಗಳು ಗಮನಿಸಬೇಕು, ವಿದ್ಯಾರ್ಥಿಗಳ ಮುಂದೆ ಇಂತಹ ಸಾಧಕರನ್ನು ಸನ್ಮಾನಿಸುವ ಮೂಲಕ ತಾವು ಸಹ ಅವರಂತೆ ಆಗಬೇಕು ಎಂಬ ಕನಸುಗಳನ್ನು ಕಟ್ಟಿಕೊಳ್ಳುವ ಮೂಲಕ, ಅವರ ಪ್ರೋತ್ಸಾಹದ ಮಾತುಗಳು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುತ್ತವೆ ಎಂಬ ಸದುದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದನ್ನು ಪ್ರತಿವ? ಕೂಡ ನಮ್ಮ ಕಾಲೇಜಿನಲ್ಲಿ ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಡಾ. ಲಿಂಗಣ್ಣ ಜಂಗಮರಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ವೇದಿಕೆ ಮೇಲೆ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಸೋಮಶೇಖರಗೌಡ, ಶ್ರೀಮತಿ ರಮಾ, ಶ್ರೀಮತಿ ಲಲಿತಾಬಾಯಿ, ರಮೇಶ ಗ್ರಂಥಪಾಲಕರು, ಕುಮಾರಸ್ವಾಮಿ, ಚಿದಾನಂದ ಮೇಟಿ, ನಾಗಪ್ಪ ಎಂ., ಶ್ರೀಮತಿ ಸಾವಿತ್ರಿ, ಶ್ರೀಮತಿ ಲಕ್ಷ್ಮಿ, ನಿರುಪಾದಿ, ಮಹೇಶ್, ಈಶ್ವರಪ್ಪ ಸಿ., ಶ್ರೀಮತಿ ರಾಜೇಶ್ವರಿ ಸೇರಿದಂತೆ ಇನ್ನಿತರ ಉಪನ್ಯಾಸಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರ್ವಹಣೆಯನ್ನು ಕನ್ನಡ ಉಪನ್ಯಾಸಕರಾದ ರುದ್ರೇಶ್ ತಬಾಲಿ ಅವರು ನೆರವೇರಿಸಿದರೆ, ಕೊನೆಯಲ್ಲಿ ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ಅಜಗರ್ ಪಾ? ವಂದಿಸಿದರು.
Comments are closed.