ಕವಿಗಳ ಕಣ್ಣಲ್ಲಿ ಜ್ಞಾನಪೀಠ ಪ್ರಶಸ್ತಿ” ಪುರಸ್ಕøತರು ಕವಿತಾ ರಚನಾ ಸ್ಪರ್ಧೆಗೆ ಆಸಕ್ತರಿಗೆ ಕರೆ
1992 ರಿಂದ ಸುರ್ವೆ ಕಲ್ಚರಲ್ ಅಕಾಡೆಮಿಯು, ಸಾಂಸ್ಕøತಿಕ ಲೋಕದಲ್ಲಿ ಅತ್ಯುತ್ತಮ ಕಾರ್ಯಕ್ರಮಗಳ ಮೂಲಕ, ಲಕ್ಷಾಂತರ ಕಲಾವಿದರಿಗೆ ವೇದಿಕೆ ನೀಡಿದೆ. ಈಗಾಗಲೇ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಸಾಹಿತಿಗಳಾದ ಕುವೆಂಪು, ಬೇಂದ್ರೆ, ಕಾರಂತ, ಮಾಸ್ತಿ, ವಿ.ಕೃ. ಗೋಕಾಕ್, ಯು.ಆರ್. ಅನಂತಮೂರ್ತಿ ಹೆಸರಿನಲ್ಲಿ, ತಲಾ ನಾಲ್ಕು ದಿನಗಳ ರಾಷ್ಟ್ರೀಯ ಕಲಾ ಪ್ರತಿಭೋತ್ಸವ ಕಾರ್ಯಕ್ರಮ ನಡೆಯಿಸಿ, ಇಂದಿನ ಪೀಳಿಗೆಗೆ ಅವರ ಸಾಧನೆ ಮತ್ತು ಕೃತಿಗಳ ಪರಿಚಯ ಮಾಡುತ್ತಾ ಬಂದಿದೆ.
ಕನ್ನಡಕ್ಕೆ ಬಂದ 8 ಜ್ಞಾನಪೀಠ ಪ್ರಶಸ್ತಿ ತಂದು ಮಹನಿಯರಾದ 8 ಜನ ಹಿರಿಯ ಸಾಹಿತಿಗಳು ಕುರಿತು, “ಕವಿಗಳ ಕಣ್ಣಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕøತರ ಮಾಲಿಕೆ” ಅಡಿಯಲ್ಲಿ ಅವರ ವ್ಯಕ್ತಿತ್ವ, ಸಾಹಿತ್ಯದ ಕೃತಿಗಳ ಮತ್ತು ಸಾಧನೆ ಕುರಿತು, ಕವಿತಾ ರಚನೆ ಸ್ಪರ್ಧೆಗೆ ಕರೆ ನೀಡಿದೆ.
ಜೊತೆಗೆ ಭಾಗವಹಿಸಿದ್ದಕ್ಕಾಗಿ, ಒಂದು ವಾರದೊಳಗೆ ಫೋಟೋ ಸಮೇತ ಪ್ರಮಾಣ ಪತ್ರವನ್ನು ಅಂಚೆ ಅಥವಾ ಕೊರಿಯರ್ ಮೂಲಕ ಕಳುಹಿಸಲಾಗುವುದು.
Comments are closed.