ಕವಿಗಳು ಕೇವಲ ವ್ಯಕ್ತಿ ವಣ೯ನಗೆ  ಒತ್ತು ಕೊಡದೇ ಜನರ ಬದುಕು ಅರಳಿಸುವಂತೆ ಕಾವ್ಯ ರಚನೆಗೆ ಮುಂದಾಗಲಿ

Get real time updates directly on you device, subscribe now.

: ಸಾವಿತ್ರಿ ಮುಜಾಮದಾರ್
ಕೊಪ್ಪಳ:    ಕವಿಗಳು ಕೇವಲ ಹೆಣ್ಣಿನ ವಣ೯ನೆಗೆ ಒತ್ತು ಕೊಡದೆ   ಜನರ ಜೀವನದ  ಸ್ಥಿತಿ ಗತಿಯ ಬಗ್ಗೆ  ಸಾಹಿತ್ಯ ಬರೆಯಲು ಮುಂದಾಗಲಿ ಎಂದು  ಸಾಹಿತ್ಯ ಆಕಾಡೆಮಿ ಮಾಜಿ ಸದಸ್ಯೆ ಸಾವಿತ್ರಿ ಮುಜನದಾರ ಹೇಳಿದರು. ಅವರು ಭಾನುವಾರ ಸಂಜೆ ಇಲ್ಲಿಯ ತಾ.ಪಂ. ಸಭಾಂಗಣದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ  ಜಿಲ್ಲಾ ಮಟ್ಟದ ಚುಟುಕು ವಾಚನ ಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದ ಅವರು   ಕೊಪ್ಪಳ ಜಿಲ್ಲೆಯ ಲ್ಲಿ ಸಾಹಿತ್ಯ ಬರೆಯುವವರ ಸಂಖ್ಯೆ ಜೋರ್ ಇದೆ, ಆದರೆ. ಇವತ್ತಿನ ದಿನಗಳಲ್ಲಿ ವ್ಯಕ್ತಿಯ ವೈಭವಕ್ಕಿಂತ  ಜನರ ಜೀವನದ ಅತ್ಯಂತ ಕಷ್ಟಕರ ಸ್ಥಿತಿಯ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡೋಣ , ಸಾಹಿತಿಗಳ ಮೇಲೆ ಸಾಮಾಜಿಕ ಜವಾಬ್ದಾರಿ ಬಹಳ ಇದೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಸಾಹಿತಿ ರಮೇಶ್ ಸುವೆ೯ ಮಾತನಾಡಿ,  ಚುಟುಕು ಸಾಹಿತ್ಯ ಪರಿಷತ್ತು ನಲ್ಲಿ ಹೊಸ ಪದಾಧಿಕಾರಿಗಳ ಆಯ್ಕೆ ಸೂಕ್ತ ವಾಗಿದೆ , ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಸ್ವತಂತ್ರವಾಗಿ. ಸಾಹಿತ್ಯ ಸಂಸ್ಕೃತಿ ಭವನದ ಕೊರತೆ ಇದೆ. ಎಲ್ಲ ಸಾಹಿತಿಗಳು ಒಂದುಗೂಡಿ ಜನಪ್ರತಿನಿಧಿಗಳ ಮೇಲೆ ಒತ್ತಡ ತಂದು ಸಾಹಿತ್ಯ ಚಟುವಟಿಕೆ ನಡೆಸಲು ಸ್ವತಂತ್ರವಾಗಿ ಸಾಹಿತ್ಯ ಭವನ ನಿರ್ಮಾಣಕ್ಕೆ ಮುಂದಾಗಬೇಕು  ಕೊಪ್ಪಳ ಜಿಲ್ಲೆಯ ಕವಿಗಳು ಉತ್ತಮ ಅಧ್ಯಯನ ಮಾಡುವ ಮೂಲಕ ಉತ್ತಮ ಸಾಹಿತ್ಯ ಕೃಷಿ ಮಾಡಲಿ ಎಂದು ಹಾರೈಸಿದರು. ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ
ಪತ್ರಕರ್ತ,ಯುವ ಸಾಹಿತಿ, ರುದ್ರಪ್ಪ ಭಂಡಾರಿ, ಯವರನ್ನು ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಸಂಚಾಲಕ  ಡಾ.ಎಂ.ಜಿ.ಆರ್.ಅರಸ್ ಅವರು, ಪದಾಧಿಕಾರಿಗಳ ಪದಗ್ರಹಣ ಸಮಾರಂಭ ದಲ್ಲಿ  ಅಧಿಕೃತ ವಾಗಿ ಘೋಷಿಸಿದರು.
ಇದೇ ಸಂದರ್ಭದಲ್ಲಿ ಕವಿ ಗೋಷ್ಠಿ ಯಲ್ಲಿ. ಕವಿಗಳಾದ ಡಾ.ಸಂಗಮೇಶ್ವರ ಪಾಟೀಲ, ಶಾರದಾ  ರಜಪೂತ, ಕುರುವತ್ತಿಗೌಡ,ಪೋ.ಪಾಟೀಲ
ಈರಯ್ಯ ಕುರ್ತಕೋಟಿ, ಸೋಮಶೇಖರ ಕಂಚಿ, ಕಲ್ಲಪ್ಪ ಕವಳಕೇರಿ, ರೇವಣಸಿದ್ದಪ್ಪ ಕೋಲ್ಕಾರ್, ಶ್ವೇತಾ ಜೋಶಿ,
ಎ.ಪಿ.ಅಂಗಡಿ, ವಿರುಪಾಕ್ಷೇಶ್ವರ ಸ್ವಾಮಿ ತಲೇಕಾನ್ ಮಠ, ಜಯಶ್ರೀ ತಳವಾರ, ಅಕ್ಕಮಹಾದೇವಿ ಅಂಗಡಿ,ಬಾಲಕ ಸೃಜನ್, ಬಸವರಾಜ ಹಲಗೇರಿ,ಪ್ರಕಾಶ್ ಎಚ್,ನಿಂಗಾಪೂರ,  ಬಸವರಾಜ ವಾರಿ, ಶ್ರೀಮತಿ ಶಿವಮ್ಮ,ಜಿ. ಶಿವಪ್ರಸಾದ್ ಹಾದಿಮನಿ, ರಾಘು,ಎಚ್,ತಾಳಕೇರಿ, ಇವರು ಚುಟುಕು ಕವಿ ಗೋಷ್ಠಿ ಯಲ್ಲಿ ಚುಟುಕು ಗಳನ್ನು ವಾಚಿಸಿದರು.   ಪರಿಷತ್ತಿನ ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಆಕಾಶವಾಣಿ ಕಲಾವಿದ ಮೇಘರಾಜ ಜಿಡಗಿ ಅವರು ಭಾವಗೀತೆ ಹಾಡಿದರು. ಕಾರ್ಯಕ್ರಮವನ್ನು,ಕವಿ, ಬರಹಗಾರ ಕಲ್ಲಪ್ಪ ಕವಳಕೇರಿ ಅವರು ನಿರೂಪಿಸಿದರು.

Get real time updates directly on you device, subscribe now.

Comments are closed.

error: Content is protected !!