ಅಂಜನಾದ್ರಿ ಆಂಜನೇಯ ದೇವಸ್ಥಾನ ಹುಂಡಿಯಲ್ಲಿ ರೂ. ೨೬೬೦೯೧೭ ಸಂಗ್ರಹ

Get real time updates directly on you device, subscribe now.


ಗಂಗಾವತಿ : ಶ್ರೀ ಆಂಜನೇಯ ದೇವಸ್ಥಾನ ಅಂಜನಾದ್ರಿ ಬೆಟ್ಟ ಆನೆಗುಂದಿ (ಚಿಕ್ಕರಾಂಪುರ)ದಲ್ಲಿ ಎಂ ಹೆಚ್ ಪ್ರಕಾಶ ರಾವ್ ಕಾರ್ಯನಿರ್ವಾಹಣಾಧಿಕಾರಿಗಳು ಇವರ ಆದೇಶದ ಪ್ರಕಾರ ಶ್ರೀ ಆಂಜನೆಯ ದೇವಸ್ಥಾನ ಚಿಕ್ಕರಾಂಪೂರ ಅಂಜನಾದ್ರಿ ಬೆಟ್ಟದಲ್ಲಿ ಹುಂಡಿ ತೆರೆಯಲಾಗಿದ್ದು. (ದಿ.೨೪-೧೦-೨೦೨೪ ರಿಂದ ೨-೧೨-೨೦೨೪ ರವರೆಗೆ ಒಟ್ಟು ೪೦ ದಿನಗಳ ಅವಧಿಯಲ್ಲಿ) ಒಟ್ಟು ರೂ.೨೬೬೦೯೧೭/- ರೂ ಗಳು ಸಂಗ್ರಹವಾಗಿರುತ್ತದೆ. ೯ವಿದೇಶಿ ನಾಣ್ಯಗಳು( * ೩ ಯು ಎಸ್ ಎ ,೧ ಯು ಎಇ,೧ ನೇಪಾಲ್,೧ ಸೌದಿ ಅರೇಬಿಯಾ,೧ಹಾಂಗ್ ಕಾಂಗ್,೧ ಸಿಂಗಾಪುರ್,೧ ರಷ್ಯಾ ನಾಣ್ಯ)*ಹುಂಡಿಯಲ್ಲಿ ಸಂಗ್ರಹವಾಗಿದೇ

ಈ ಸಂದರ್ಭದಲ್ಲಿ ಮಹಾಂತಗೌಡ ತಹಶೀಲ್ದಾರರು ಗಂಗಾವತಿ ಗ್ರೇಡ್ -೨ , ಶಿರಸ್ತೇದಾರಾದ ಕೃಷ್ಣವೇಣಿ ,ರವಿಕುಮಾರ್ ನಾಯಕವಾಡಿ , ತಹಶೀಲ್ ಕಾರ್ಯಾಲಯದ ಸಿಬ್ಬಂದಿಗಳಾದ ಶ್ರೀಕಂಠ, ಗುರುರಾಜ, ಇಂದಿರಾ, ಮಂಜುನಾಥ ಹಿರೇಮಠ, ಪ್ರ.ದ.ಸ, , ಮಹಮ್ಮದ್ ರಫಿ, ಗಾಯತ್ರಿ, ಶ್ರೀರಾಮ ಜೋಶಿ , ಪವನ ನಿಲೋಗಲ್ ದ್ವಿ.ದ.ಸ. ಹನುಮೇಶ್ ಪೂಜಾರ್, ಪ್ರಿಯಾಂಕ, ಚೈತ್ರ ,ಜ್ಯೋತಿ, ಸಂಗೀತ, ನಾಗಬಿಂದು ,ಅಮರೇಶ್ ನಾಗವೇಣಿ ,ಪೂಜಾ, ರಘು ನಾಯಕ್ ,ರಾಜು ಭಜಂತ್ರಿ ,ಮಂಜುನಾಥ ದುಮ್ಮಾಡಿ ಗ್ರಾಮ ಆಡಳಿತ ಅಧಿಕಾರಿಗಳು , ಹಾಗೂ ಪಿ ಕೆ ಜಿ ಬಿ ಸಣಾಪೂರ ಬ್ಯಾಂಕ್ ಸಿಬ್ಬಂದಿಗಳಾದ ಮ್ಯಾನೇಜರ್ ನವೀನ್ ಕುಮಾರ , ಸತೀಶ್, ಪ್ರವೀಣ್ ಕುಮಾರ ವಿನೋದ್ ,ಶ್ರೀಮಂತ .ಹನುಮೇಶ್ ಡಿ ಊಅ ಪೋಲಿಸ್ ಸಿಬ್ಬಂದಿ , ಹನುಮಂತಪ್ಪ, ನಿರುಪಾದಿ ಪ್ರವಾಸಿ ಮಿತ್ರರು ಹಾಗೂ ವೆಂಕಟೇಶ ದೇವಸ್ಥಾನದ ಸಿಬ್ಬಂದಿವರ್ಗ ಹಾಜರಿದ್ದರು

ಸದ್ರಿ ಕಾರ್ಯವು ಸಂಪೂರ್ಣವಾಗಿ ಪೊಲೀಸ್ ಬಂದೊಬಸ್ಥ ಹಾಗೂ ಸಿಸಿ ಟಿವಿ ಕ್ಯಾಮೆರಾ ಹಾಗೂ ವಿಡಿಯೋ ಕಣ್ಗಾವಲಿನಲ್ಲಿ ನಡೆಯಿತು. ಕಳೆದ ಬಾರಿ ದಿ .೨೪/೧೦/೨೦೨೪ ರಂದು ಹುಂಡಿ ತೆರೆಯಲಾಗಿತ್ತು ಮೊತ್ತ ರೂ ರೂ.೩೩,೭೯,೯೧೦/- ಸಂಗ್ರಹವಾಗಿತ್ತು.

Get real time updates directly on you device, subscribe now.

Comments are closed.

error: Content is protected !!