ವಿಶ್ವ ಏಡ್ಸ್ ನಿಯಂತ್ರಣ ದಿನಾಚರಣೆ ಜನ ಜಾಗೃತಿ ಜಾಥಾ , ರ‍್ಯಾಲಿ
ಅಂಗವಾಗಿ ಜನ ಜಾಗೃತಿ ಜಾಥಾ ಹಾಗೂ ಮಹಿಳಾ ವಿಶೇಷ ದ್ವಿಚಕ್ರ ವಾಹನ ರ‍್ಯಾಲಿ ಮತ್ತು ವೇದಿಕೆ ಕಾರ್ಯಕ್ರಮ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಏಡ್ಸ್ ನಿಯಂತ್ರಣ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕ ಆರೋಗ್ಯ ಅಧಿಕಾರಿಗಳ ಕಛೇರಿ, ಸ್ನೇಹ ಮಹಿಳಾ ಸಂಘ, ಚೈತನ್ಯ ನಗರ ಮತ್ತು ಗ್ರಾಮೀಣ ಅಭಿವೃಧ್ದಿ ಸಂಸ್ಥೆ, ಸುರಕ್ಷ ಸಿ.ಎಸ್.ಸಿ, ಹೊಸ ಬೆಳಕು ಸಂಪರ್ಕ ಕಾರ್ಯಕರ್ತರ ಯೋಜನೆ, ಶ್ರೀ ಗವಿಸಿದ್ದೇಶ್ವರ ಕಲಾ ವಾಣಿಜ್ಯ ಮತ್ತು ವಿಜ್ಙಾನ ಹಾಗೂ ವಿವಿಧ ಸರ್ಕಾರೆತರ ಸಂಘ ಸಂಸ್ಥೆಗಳು ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಗವಿಸಿದ್ದೇಶ್ವರ ಪದವಿ ಕಾಲೇಜಿನ ಸಭಾ ಭವನದಲ್ಲಿ ಬೆಳಗ್ಗೆ ೦೭.೩೦ ಕ್ಕೆ ಜನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಸರಿಯಾದ ಮಾರ್ಗದಲ್ಲಿ ಹಕ್ಕುಗಳನ್ನು ಪಡೆಯೋಣ. ನನ್ನ ಆರೋಗ್ಯ ನನ್ನ ಹಕ್ಕು ಈ ವರ್ಷದ ಘೋಷ ವಾಕ್ಯದೊಂದಿಗೆ ಆಚರಿಸಲಾಯಿತು.
ಜಾಥಾ ಉದ್ಘಾಟನೆಯನ್ನು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳು, ಕುಷ್ಠರೋಗ ನಿರ್ಮೂಲನ ಅಧಿಕಾರಿಗಳು, ತಾಲ್ಲೂಕಾ ಆರೋಗ್ಯ ಅಧಿಕಾರಿಗಳು, ಕೊಪ್ಪಳ ಹಾಗೂ ಪ್ರಾಂಶುಪಾಲರು, ಶ್ರೀ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯ, ಕೊಪ್ಪಳ ಇವರು ನೆರವೇರಿಸಿದರು. ನಂತರ ಬೆಳಗ್ಗೆ ೮.೦೦ ಘಂಟೆಗೆ ಮಹಿಳಾ ವಿಶೇಷ ದ್ವಿಚಕ್ರ ವಾಹನ ರ‍್ಯಾಲಿಯನ್ನು ಡಾ|| ಶಶಿಧರ ಎ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳು, ಹಸಿರು ನಿಶಾನೆ ತೋರಿಸುವ ಮೂಲಕ ರ‍್ಯಾಲಿಯನ್ನು ಮುನ್ನಡೆಸಲಾಯಿತು.
ವೇದಿಕೆ ಕಾರ್ಯಕ್ರಮ , ಡಾ|| ಶಶಿದರ್ ಎ ಜಿಲ್ಲಾ ಏಡ್ಸ ನಿಯಂತ್ರಣಧಿಕಾರಿಗಳು ಕೊಪ್ಪಳ ಇವರು ಪ್ರಸ್ತಾವಿಕವಾಗಿ ಮಾತನಾಡಿ ಜಿಲ್ಲೆಯಲ್ಲಿ ಹೆಚ್.ಐ.ವಿ./ಏಡ್ಸ್ ನಿಯಂತ್ರಣದ ಸ್ಥಿತಿಗತಿ ಕುರಿತು ತಿಳಿಸಿದರು. ೧೪ I.ಅ.ಖಿ.ಅ ಕೇಂದ್ರಗಳು, ೨ ಂಖಖಿ ಕೇಂದ್ರಗಳು ಕೆಲಸ ನಿರ್ವಹಿಸುತಿದ್ದು, ಎಲ್ಲಾ ಕೇಂದ್ರಗಳಲ್ಲಿ ಆಪ್ತ ಸಮಾಲೋಚಕರು ಹಾಗೂ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳು, ವೈಧ್ಯಾಧಿಕಾರಿಗಳು iತ್ತು ಇತರ ಸಿಬ್ಬಂದಿಗಳು ಈ ಕಾಯಿಲೆ ಬಗ್ಗೆ ನಿರಂತರವಾಗಿ ಅರಿವು ಮೂಡಿಸುವುದರ ಜೊತೆಗೆ ಅನುಸರಣೆ ಮಾಡುತ್ತಿದ್ದರೆ ಏಡ್ಸ್ ರೋಗ ತಡೆಗಟ್ಟಲು ಜಿಲ್ಲೆಯಲ್ಲಿ ವಿವಿಧ ರೀತಿಯ Iಇಅ ಚಟುವಟುಕೆಗಳನ್ನು ಹಮ್ಮಿಕೊಂಡು ಅರಿವು ಮೂಡಿಸಲಾಗುತ್ತದೆ. ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ, ಕಾಲೇಜು ವಿದ್ಯಾರ್ಥಿಗಳಿಗೆ ಮ್ಯಾರಥ್ಯನ್/ಕಬ್ಬಡಿ ಪಂದ್ಯಾವಳಿ, ಸೈಕಲ್ ಜಾಥ, ರಂಗೋಲಿ ಸ್ಪರ್ಧೆ ಪೋಸ್ಟರ್ ಮೇಕಿಂಗ್ ಮುಂತಾದ ಕಾರ್ಯಕ್ರಮ ಹಮ್ಮಿಕೊಂಡು ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತದೆ. ೨೦೧೭ ಏಡ್ಸ್ ನಿಯಂತ್ರಣ ತಡೆಗಟ್ಟುವಲ್ಲಿ ಕಾಯ್ದೆ ಪ್ರಕಾರ ಎಚ್..ವಿ ರೋಗಿಗಳಿಗೆ ಸರ್ಕಾರ ಯಾವುದೆ ಸೌಲ್ಯಭ್ಯ ನೀಡುವಲ್ಲಿ ತಾರತಾಮ್ಮ ಮಾಡಬಾರದು ಒಂದು ವೇಳೆ ತಾರತಾಮ್ಮ ಮಾಡಿದರೆ ಕಾನೂನು ಪ್ರಕಾರ ದಂಡ ಮತ್ತು ಜೈಲು ಶಿಕ್ಷೆವಿಧಿಸಲಾಗುತ್ತದೆ ಎಂದು ತಿಳಿಸಿದರು.
ಮಹಾತೇಂಶ ದರಗದ್, ಹಿರಿಯ ಸಿವಿಲ್ ನ್ಯಾಯಧಿಶರು ಹಾಗೂ ಸದಸ್ಯ ಕಾರ್ಯದರ್ಶಗಳು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾದಿಕಾರ ಕೊಪ್ಪಳ ಇವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹೆಚ್.ಐ.ವಿ./ಏಡ್ಸ್ ಅರಿವಿನ ಕೊರತೆಯಿಂದ ಯುವಕರಲ್ಲಿ ರೋಗ ಹೆಚ್ಚಾಗಲು ಕಾರಣವಾಗಿದೆ. ನಮ್ಮ ಭಾರತದಲ್ಲಿ ಪ್ರತಿ ವರ್ಷ ಡಿಸೆಂಬರ್ ೧ ರಂದು ವಿಶ್ವ ಏಡ್ಸ್ ನಿಯಂತ್ರಣ ದಿನಾಚರಣೆ ಕಾರ್ಯಕ್ರಮ ಆಚರಿಸಲಾಗುತ್ತದೆ. ಆದರೂ ಕೂಡ ಅರಿವಿನ ಕೊರತೆಯಿಂದ ಏಡ್ಸ್ ರೋಗಕ್ಕೆ ತುತ್ತಾಗುವವರು ಹೆಚ್ಚಾಗಿದ್ದರೆ ಮದುವೆ ಯಾಗುವ ವರೆಗೂ ಯುವಕ/ಯುವತಿಯರು ಬ್ರಹ್ಮಚರ್ಯ ಮಾಡಬೇಕು. ಮದ್ದಿಲ್ಲದ ಮಾರಕರೋಗ ಇದಾಗಿದ್ದು ಗ್ರಾಮೀಣ ಪ್ರದೇಶದಲ್ಲಿ ಹಾಗೂ ಸಮಸ್ಯಾತ್ಮಕ ಗುಂಪಿನವರಿಗೆ ಅರಿವು ಮುಡಿಸಿ ರೋಗಗಳ ಸಂಖ್ಯೆ ೦ ಸೊನ್ನೆಗೆ ತರಬೇಕಾಗಿದೆ. ನಮ್ಮ ನಮ್ಮ ಕುಟುಂಬಗಳನ್ನ ರಕ್ಷಣೆ ಮಾಡಲು ಪ್ರತಿಯೊಬ್ಬರು ಮೌನ ಮುರಿದು ಮಾತನಾಡಬೇಕು. ಹೆಚ್.ಐ.ವಿ ಹರಡುವ ಮಾರ್ಗಗಳ ಬಗ್ಗೆ ಎಲ್ಲಾ ಯುವಕರು ತಿಳಿದುಕೊಂಡು ಇತರರಿUಗೂ ಜಾಗೃತಿ ಮೂಡಿಸಿ ಏಡ್ಸ್ ಮುಕ್ತ ಕೊಪ್ಪಳ ಜಿಲ್ಲೆ ಮಾಡಲು ಜಾಗೃತಿ ಮೂಡಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಹೆಚ್.ಐ.ವಿ./ಏಡ್ಸ್ ತಡೆಗಟ್ಟುವ ಕಾರ್ಯದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ಸಂಸ್ಥೆಗಳಿಗೆ ಅಧಿಕಾರಿ/ಸಿಬ್ಬಂದಿಗಳಿಗೆ ಸನ್ಮಾನ ಮಾಡಲಾಯಿತು.
ವಿಶ್ವ ಏಡ್ಸ್ ದಿನದ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಸಮುದಾಯ ಆರೋಗ್ಯ ಅಧಿಕಾರಿಗಳು ಇವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದು, ಅಂಜನಾದ್ರಿ ರಕ್ತ ಭಂಡಾರ, ಗಂಗಾವತಿ ಇವರು ಶಿಬಿರವನ್ನು ನಡೆಸಿದ್ದು, ಸದರಿ ಶಿಬಿರದಲ್ಲಿ ಒಟ್ಟು ೨೨ ರಕ್ತ ಸಂಗ್ರಹಣೆಯಾಗಿರುತ್ತದೆ.
ಸದರಿ ಕಾರ್ಯಕ್ರಮದಲ್ಲಿ ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ|| ಪ್ರಕಾಶ, ಗವಿಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ|| ಮಾರೆಗೌಢ, ಪ್ರಾಂಶುಪಾಲರಾದ ಡಾ|| ಕರಿಬಸವೇಶ್ವರ, ಯಲಬುರ್ಗಾ ತಾಲ್ಲೂಕಾ ಅಧಿಕಾರಿಗಳಾದ ಡಾ|| ಅಮರೇಶ, ಡಾ|| ರಚನ, ಆರೋಗ್ಯ ಶಿಕ್ಷಣ ಅಧಿಕಾರಿಗಳು, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಸಿಬ್ಬಂದಿಗಳು ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಸಿಬ್ಬಂದಿಗಳು, ಆಪ್ತ ಸಮಾಲೋಚಕರು, ಸಮುದಾಯ ಆರೋಗ್ಯ ಅಧಿಕಾರಿಗಳು, ಓSS/ಓಅಅ ಅಧಿಕಾರಿಗಳು, ಸಹ ಉಪಾನ್ಯಾಸಕರು, ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು, ಸರ್ಕಾರೆತರ ಸಂಘ ಸಂಸ್ಥೆಯ ಪದಾಧಿಕರಿಗಳು. ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
Comments are closed.