ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ

Get real time updates directly on you device, subscribe now.

ಕೊಪ್ಪಳ:ತಾಲ್ಲೂಕಿನ ಬಹದ್ದೂರಬಂಡಿಯ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿ.೦೩ರ ಬೆಳಿಗ್ಗೆ ೧೧:೩೦ ಕ್ಕೆ ವಿಕಲಚೇತನರ ನೌಕರರ ಸಂಘ ತಾಲ್ಲೂಕು ಘಟಕದ ವತಿಯಿಂದ ವಿಶ್ವ ವಿಕಲ ಚೇತನರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಮಾಜಿ ಗೃಹ ಸಚಿವರು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಆಯುಕ್ತರಾದ ಪಿ.ಜಿ.ಆರ್.ಸಿಂಧ್ಯಾ ಉದ್ಘಾಟಣೆ ನೇರವೇರಿಸಲ್ಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಮಂಜುನಾಥ ಕುರಿ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ನಾಟಕ ಅಕಾಡೆಮಿಯ ಸದಸ್ಯರಾದ ಚಾಂದ ಪಾಷಾ ಕಿಲ್ಲೇದಾರ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಯೋಗಾನಂದ ಲೇಬಗೇರಿ, ಸದಸ್ಯರಾದ ದಾದಾಪೀರ ಮಂಡಲಗೇರಿ, ಮೆಹಬೂಬಿ ಹಿರೇಮಸೂತಿ, ಹುಸೇನಬಿ ಸಣ್ಣಮಸೂತಿ, ಪಾರ್ವತ್ಯಮ್ಮ ಕುರಿ, ಮಂಜುನಾಥ ನಡಲಮನಿ, ಮಹಮ್ಮದ ರಫಿ, ಕೆಂಚಮ್ಮ ನಡಲಮನಿ, ವಿಕಲಚೇತನ ನೌಕರರ ಸಂಘದ ರಾಜ್ಯ ಖಚಾಂಚಿ ಮಂಜುನಾಥ ಹಿಂಡಿಹುಳಿ, ತಾಲ್ಲೂಕು ಅಧ್ಯಕ್ಷರಾದ ಅಂದಪ್ಪ ಇದ್ಲಿ, ಬಹದ್ದೂರಬಂಡಿ ಕ್ಲಸ್ಟರ್‌ನ ಸಿ.ಆರ್.ಪಿ ಹನುಮಂತಪ್ಪ ಕುರಿ ಸೇರಿದಂತೆ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ಬೀರಪ್ಪ ಅಂಡಗಿ ಚಿಲವಾಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!