ದತ್ತು ಪೋಷಕರ ಸಮಾವೇಶ
ಬೆಂಗಳೂರು : ಮಕ್ಕಳನ್ನು ಕಾನೂನು ಬದ್ಧವಾಗಿ ದತ್ತು ಪಡೆದುಕೊಂಡು ,ಮಗುವಿಗೆ ಪೋಷಕತ್ವ ಹಾಗೂ ಕೌಟುಂಬಿಕ ವಾತಾವರಣ ಕಲ್ಪಿಸುವ ಕಾರ್ಯವನ್ನು ನಿರ್ವಹಿಸಲಾಗುತ್ತಿದೆ
ಎಂದು ಮಹಿಳಾ ಮತ್ತು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ.ಶಾಮ್ಲಾ ಇಕ್ಬಾಲ್ ಹೇಳಿದರು.
ಮಕ್ಕಳ ರಕ್ಷಣಾ ನಿರ್ದೇಶನಾಲಯವು ದತ್ತು ಮಾಸಾಚರಣೆ ಅಂಗವಾಗಿ ರಾಜ್ಯ ಬಾಲಭವನ ಸೊಸೈಟಿಯಲ್ಲಿ ಇಂದು (ಶನಿವಾರ) ಆಯೋಜಿಸಿದ್ದ ದತ್ತು ಪೋಷಕರ ಸಮಾವೇಶವನ್ನು ಶಿಶುಮಂದಿರದ ಮಕ್ಕಳಿಗೆ ನಾಮಕರಣ ಮಾಡುವ ಮೂಲಕ ಉದ್ಘಾಟಿಸಿದರು.
2023-24 ರಾಜ್ಯದಲ್ಲಿ 284 ಆರೈಕೆ ಮತ್ತು ಪೋಷಣೆಯ ಅಗತ್ಯವಿರುವ ಮಕ್ಕಳನ್ನು ಪೋಷಕರಿಗೆ ದತ್ತು ನೀಡಲಾಗಿದೆ ಎಂದರು.
ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕ ಡಾ.ಎಂ.ಆರ್.ರವಿ ಮಾತನಾಡಿ,ಮಕ್ಕಳಿಲ್ಲದ ದಂಪತಿಗಳು ಪೋಷಕತ್ವ ಹಾಗೂ ದತ್ತು ಪಡೆದು ಮಕ್ಕಳನ್ನು ಬೆಳೆಸುವ ಮನೋಭಾವ ಬೆಳೆಸಿಕೊಳ್ಳಬೇಕು.
ಬಹುತೇಕವಾಗಿ ಭಾರತೀಯರು ವಿಶೇಷ ಚೇತನ ಮಕ್ಕಳನ್ನು ದತ್ತು ಪಡೆಯಲು ಹಿಂದೇಟು ಹಾಕುತ್ತಾರೆ,ಆದರೆ ಹಾಸನದ ದಂಪತಿಗಳು ವಿಶೇಷ ಚೇತನ ಮಗುವೊಂದನ್ನು ದತ್ತು ಪಡೆದು ಆರೈಕೆ ಮಾಡುತ್ತಾ, ಫಿಸಿಯೋಥೆರಪಿ ನೀಡಿ ಶಿಕ್ಷಣ ನೀಡುತ್ತಿದ್ದಾರೆ , ಇದೀಗ ಅದೇ ದಂಪತಿಗಳು ಮತ್ತೊಂದು ವಿಶೇಷ ಚೇತನ ಹೆಣ್ಣು ಮಗುವೊಂದನ್ನು ದತ್ತು ಪಡೆದಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಲ್.ರಘುನಾಥ್ ಮಾತಮಾಡಿದರು.ಸಂಭವನೀಯ ದತ್ತು ಪೋಷಕರು ಹಾಗೂ ದತ್ತು ಪೋಷಕರೊಂದಿಗೆ ಸಂವಾದ, ಶಿಶುಮಂದಿರ , ಬಾಲಕರ,ಬಾಲಕಿಯರ ಬಾಲಮಂದಿರ ಹಾಗೂ ಬುದ್ಧಿಮಾಂದ್ಯ ಬಾಲಕರ ಬಾಲಮಂದಿರದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ದತ್ತು ವಿಷಯಗಳಿಗೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಆಯೋಜಿಸಿರುವ ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳಿಗೆ, ಪೋಷಕತ್ವ ಯೋಜನೆಯಡಿ ಅತಿ ಹೆಚ್ಚು ಮಕ್ಕಳನ್ನು ದತ್ತು ನೀಡಿದ ಉತ್ತರ ಕನ್ನಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕ,ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ಬಾಲಮಂದಿರದ ಮಕ್ಕಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಉಪನಿರ್ದೇಶಕಿ ಅರುಂಧತಿ ಟಿ.ಎಸ್.ಸ್ವಾಗತಿಸಿದರು,ಗರೀಮಾ ಸಿಂಗ್,ಸಿಂಧೂ ನಾಯಕ್,ಉಷಾ ಕಿರಣ್ ಮತ್ತಿತರರು ಇದ್ದರು.
Comments are closed.