ಹೆಚ್.ಆರ್.ಶ್ರೀರಾಮುಲು ಕಾಲೇಜ್ ಸುವರ್ಣ ಮಹೋತ್ಸವ ಸಭೆ

Get real time updates directly on you device, subscribe now.

oplus_0

ಜಂಟಿ ಸಮಿತಿ ಸಭೆ ಬಳಿಕ ಉಪಸಮಿತಿ ರಚನೆ: ಎನ್.ಜಿ.ಕಾರಟಗಿ
ಗಂಗಾವತಿ: ನಗರದ ವಿದ್ಯಾಗಿರಿಯಲ್ಲಿರುವ ಹೆಚ್.ಆರ್.ಶ್ರೀರಾಮುಲು ಪದವಿ ಕಾಲೇಜು ಹಳೇ ವಿದ್ಯಾರ್ಥಿಗಳ ಸಭೆ ಶನಿವಾರ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎನ್.ಜಿ.ಕಾರಟಗಿಯವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯಲ್ಲಿ ಕೆಲ ನಿರ್ಣಗಳನ್ನು ಕೈಗೊಳ್ಳಲಾಯಿತು. ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಹಳೇ ವಿದ್ಯಾರ್ಥಿಗಳು ಹಾಗು ಕಾಲೇಜು ಆಡಳಿತ ಮಂಡಳಿ ಸಭೆಯನ್ನು ಕರೆದು ರೂಪರೇಶ ಚರ್ಚಿಸುವುದು, ಕಾರ್ಯಚಟುವಟಿಕೆಗಾಗಿ ಉಪ ಸಮಿತಿಗಳನ್ನು ರಚಿಸಿ ಜವಬ್ದಾರಿ ನೀಡುವುದು, ಕಾರ್ಯಕ್ರಮದ ಶೇ ೨೫ರಷ್ಟು ಖರ್ಚನ್ನು ಹಳೇವಿದ್ಯಾರ್ಥಿಗಳ ಸಂಘದಿಂದ ಭರಿಸುವುದು, ಹಳೇ ವಿದ್ಯಾರ್ಥಿಗಳು ತಮ್ಮ ಶಕ್ತಿ ಅನುಸಾರ ದೇಣಿಗೆಯನ್ನು ಸಂಘದ ಖಾತೆಗೆ ಹಾಕುವುದು, ಹೆಚ್ಚಿನ ನಿರ್ಧಾರವನ್ನು ಅಧ್ಯಕ್ಷ ಎನ್.ಜಿ.ಕಾರಟಗಿಯವರಿಗೆ ನೀಡುವ ಕುರಿತು ಒಮ್ಮತದಿಂದ ತೀರ್ಮಾನಿಸಲಾಯಿತು.
ವೇದಿಕೆಯನ್ನು ಇಂಜಿನೀಯರ್ ಕಾಲೇಜ್ ಬಳಿಯ ಮೈದಾನದಲ್ಲಿ ಹಾಕುವುದು, ರಾಜ್ಯದ ಪ್ರಮುಖರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವುದು, ಕಾರ್ಯಕ್ರಮವನ್ನು ಒಂದು ದಿನಕ್ಕೆ ಸೀಮಿತಗೊಳಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲರಾದ ಲಲಿತಾನಾಯಕ ಬಾವಿಕಟ್ಟಿ, ಉದ್ಯಮಿ ಕನಕಮೂರ್ತಿ ಹಾಸಮುದ್ದೀನ ವಕೀಲ ದಂಪತಿಗಳು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗು ಚಲನಚಿತ್ರ ನಟ ನಾಗರಾಜ್ ಇಂಗಳಗಿ, ಪ್ರಮುಖರಾದ ಸೈಯ್ಯದ್ ಅಲಿ, ಗಿರೀಶ್ ಬಳ್ಳಾರಿ, ಹೇರೂರು ಶ್ರೀನಿವಾಸ್, ಪಿ.ದಶರಥ, ರುದ್ರಪ್ಪ, ಕೆ.ಬಸಪ್ಪ ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!