ಮಧ್ಯಾಹ್ನದ ಬಿಸಿಯೂಟದ ಜವಾಬ್ದಾರಿ ಮುಖ್ಯಗುರುಗಳಿಂದ ಮುಕ್ತಿಗೊಳಿಸಲು ಒತ್ತಾಯಿಸಿ ಮನವಿ
.
ಕೊಪ್ಪಳ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ಕೊಪ್ಪಳ ನೇತೃತ್ವದಲ್ಲಿ ಮಧ್ಯಾಹ್ನದ ಬಿಸಿಯೂಟದ ಜವಾಬ್ದಾರಿಯನ್ನು ಮುಖ್ಯ ಗುರುಗಳಿಂದ ಮುಕ್ತಿಗೊಳಿಸಬೇಕೆಂದು ಒತ್ತಾಯಿಸಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಪಂಚಾಯ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಯಿತು.
ಮುಖ್ಯೋಪಾಧ್ಯಾಯರ ಬಹುದಿನದ ಸಮಸ್ಯೆಯಾದ ಬಿಸಿಯೂಟ ನಿರ್ವಹಣೆ, ಮೊಟ್ಟೆ ವಿತರಣೆ, ಮೊಟ್ಟೆಯ ಮಾರುಕಟ್ಟೆ ಬೆಲೆ ಹಾಗೂ ಸರ್ಕಾರ ನಿಗದಿಪಡಿಸಿದ ಬೆಲೆಗೂ ಬಹಳಷ್ಟು ವ್ಯತ್ಯಾಸವಾಗುತ್ತಿದ್ದು ಮುಖ್ಯೋಪಾಧ್ಯಾಯರಿಗೆ ಮೊಟ್ಟೆ ಖರೀದಿಯಲ್ಲಿ ಆಗುತ್ತಿರುವ ತೊಂದರೆ, ಮೊಟ್ಟೆಯ ಬದಲಾಗಿ ಹಳ್ಳಿಗಳಲ್ಲಿ ಬಾಳೆಹಣ್ಣಿನ ಆಲಭ್ಯತೆ, ಅಡುಗೆ ದಿನಸಿ ಹಾಗೂ ತರಕಾರಿ ರಖರೀದಿಗಳಲ್ಲಿ ಉಂಟಾಗುತ್ತಿರುವ ಅನಾನುಕೂಲತೆ ಮತ್ತು ಎದುರಿಸುತ್ತಿರುವ ಸಮಸ್ಯೆ ಹಾಗೂ ಬಿಸಿಯೂಟದ ಪ್ರತ್ಯೇಕ ಖರೀದಿ ವಹಿ,ವಿತರಣಾ ವಹಿ ಮಕ್ಕಳಿಂದ ಸ್ವೀಕೃತಿ ವಹಿ, ಫಲಾನುಭಾವಿಗಳ ಸಂಪೂರ್ಣ ಮಾಹಿತಿಯನ್ನು ಆನ್ ಲೈನ್ ನಲ್ಲಿ ಅಂದೇ ಇಂದಿಕರಿಸುವುದು. ನಿಗಧಿತ ಗುಣಮಟ್ಟದ ತೂಕದ ಮೊಟ್ಟೆಗಳನ್ನು ವಿತರಿಸಲು ಪೂರೈಕೆದಾರರು ನಿರಾಕರಿಸುತ್ತಿದ್ದಾರೆ.ಜಿಲ್ಲಾ ಕೇಂದ್ರ ದಂತಹ ನಗರಗಳನ್ನು ಹೊರತುಪಡಿಸಿ ಗ್ರಾಮೀಣ ಭಾಗದಲ್ಲಿ ಪ್ರತಿನಿತ್ಯವೂ ಮೊಟ್ಟೆ, ಬಾಳೆಹಣ್ಣು,ಶೇಂಗಾ ಚಕ್ಕಿ ಖರೀದಿಗೆ ಲಭ್ಯವಿಲ್ಲದೇ ಇರುವುದು ಹೀಗೆ ಮೇಲಿನ ಎಲ್ಲಾ ಅಂಶಗಳನ್ನು ಮಾನ್ಯರಾದ ತಾವುಗಳು ಗಮನಿಸಿ ಮುಖ್ಯಗುರುಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕು. ಕೆಲಸದ ಒತ್ತಡಗಳ ನಡುವೆ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಮಾನಸಿಕವಾಗಿ ಕುಗ್ಗಿದ್ದು ಸರಿಯಾಗಿ ಶಾಲಾ ಕರ್ತವ್ಯವನ್ನು ನಿರ್ವಹಿಸಲಾಗುತ್ತಿಲ್ಲ.ಮತ್ತು ಇದರಿಂದ ಮಕ್ಕಳ ಗುಣಾತ್ಮಕ ಕಲಿಕೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ.
ಆದಕಾರಣ ಮುಖ್ಯಗುರುಗಳನ್ನು ಮದ್ಯಾಹ್ನದ ಬಿಸಿಯೂಟದಿಂದ ಮುಕ್ತಗೊಳಿಸುವಂತೆ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಶರಣಬಸನಗೌಡ ಪಾಟೀಲ,ಪ್ರಧಾನಕಾರ್ಯದರ್ಶಿ ಮಂಜುನಾಥ ಬಿ.ಜಿಲ್ಲಾ ಗೌರವಾಧ್ಯಕ್ಷ ಈರಪ್ಪಬಳ್ಳೋಳ್ಳಿ,ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪೂರ್ಣಿಮಾ ತುಪ್ಪದ,ತಾಲ್ಲೂಕಾ ಉಪಾಧ್ಯಕ್ಷರಾದ ಸುಮತಿ ಸಿ.ಕುಕನೂರು ಪ್ರಧಾನ ಕಾರ್ಯದರ್ಶಿ ಮಹಾವೀರ ಕಲಬಾವಿ,ಪತ್ತಿನಅಧ್ಯಕ್ಷರಾದ ವಿರೇಶ ಅರಳಿಕಟ್ಟಿ,ಉಪಾಧ್ಯಕ್ಷರಾದ ಪೂರ್ಣಿಮಾ ಪಟ್ಟಣಶೆಟ್ಟಿ,ಸಂಘದ ನಿರ್ದೆಶಕರಾದ ಕೊಟ್ರಪ್ಪ ಗಡಗಿ.ಮಹೇಶ ಟಂಕಸಾಲಿ,ಗವಿಸಿದ್ದಪ್ಪಕೇರಿ.ರಮೇಶ ಬುಡ್ಡನಗೌಡ್ರ.ಗೀತಾ ಚಕ್ಕಡಿ,ಹಿರಿಯ ಮುಖ್ಯಗುರುಗಳಾದ ದೇವೆಂದ್ರಪ್ಪ ಕುರುಡಗಿ ರಂಗನಾಥ ಪಾಟೀಲ,ಸುಭಾಸರಡ್ಡಿ.ನಾರಾಯಣಪ್ಪ ಚಿತ್ರಗಾರ.ಲಕ್ಷ್ಮಣ,ಕೊಟ್ಟರೇಶಪ್ಪ. ವಿರುಪಾಕ್ಷಪ್ಪ ವರದ.ಶರಣು ಜವಳಿ, ಉಪಸ್ಥಿತರಿದ್ದರು ಎಂದು ಶಿಕ್ಷಕರ ಸಂಘದ ಜಿಲ್ಲಾಸಹಕಾರ್ಯದರ್ಶಿ ಬಸವರಾಜ ಕಮಲಾಪುರ ತಿಳಿಸಿದ್ದಾರೆ.
Comments are closed.