ಭ್ರೂಣಲಿಂಗ ಪತ್ತೆಮಾಡುವುದು ಶಿಕ್ಷ್ಯಾರ್ಹ ಅಫರಾದ- ಡಿಎಚ್‌ಓ ಡಾ.ಲಿಂಗರಾಜ.ಟಿ

0

Get real time updates directly on you device, subscribe now.

– ಕೊಪ್ಪಳ ಜಿಲ್ಲೆಯ ಯಾವುದೇ ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಭ್ರೂಣಲಿಂಗ ಪತ್ತೆ ಮಾಡಬಾರದು ಹಾಗೆ ಮಾಡುವುದು ಶಿಕ್ಷ್ಯಾರ್ಹ ಅಫರಾಧವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಲಿಂಗರಾಜ ಟಿ ಹೇಳಿದರು.
ಅವರು ಗುರುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿಯಲ್ಲಿ ಕರೆದ ಪಿ.ಸಿ ಮತ್ತು ಪಿ.ಎನ್.ಡಿ.ಟಿ ಜಿಲ್ಲಾ ಮಟ್ಟದ ಸಲಹಾ ಸಮಿತಿಯ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.

ಭ್ರೂಣಲಿಂಗ ಪತ್ತೆ ಮಾಡುವ ವೈದರು ಮತ್ತು ಇದರಲ್ಲಿ ಭಾಗಿ ಆಗುವ ಸಾರ್ವಜನಿಕರಿಗೂ ಶಿಕ್ಷೆ ಇದೆ. ಹಾಗಾಗಿ ಜಿಲ್ಲೆಯಲ್ಲಿ ಎಲ್ಲೂ ಭ್ರೂಣಲಿಂಗ ಪತ್ತೆಯಂತಹ ಯಾವುದೇ ಪ್ರಕರಣಗಳು ಕಂಡು ಬರಬಾರದು ಹಾಗೇನಾದರೂ ನಡೆಯುತ್ತಿದೆ ಎಂದು ಸಾರ್ವಜನಿಕರ ಗಮನಕ್ಕೆ ಬಂದರೆ ನಮಗೆ ತಿಳಿಸಿ ಎಂದು ಹೇಳಿದರು.
ಇದನ್ನು ಮಾಡುವ ವೈದ್ಯರಿಗೆ ಮೊದಲ ಅಫರಾದಕ್ಕೆ 10 ಸಾವಿರ ರೂ ದಂಡ ಹಾಗೂ 3 ವರ್ಷಗಳ ಜೈಲುಶಿಕ್ಷೆ ಮತ್ತು ಎರಡನೆಯ ಅಫರಾದಕ್ಕೆ 50 ಸಾವಿರ ರೂ. ದಂಡ ಹಾಗೂ 5 ವರ್ಷಗಳ ಜೈಲು ಶಿಕ್ಷೆ ಇದೆ. ಇದಕ್ಕೆ ಸಹಕಾರ ನೀಡುವ ಸಾರ್ವಜನಿಕರಿಗೆ ಮೊದಲ ಅಫರಾದಕ್ಕೆ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ಎರಡನೇ ಅಫರಾದಕ್ಕೆ 1 ಲಕ್ಷ ರೂ ದಂಡ 5 ವರ್ಷಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ರವೀಂದ್ರನಾಥ ಎಮ್. ಎಚ್ ಮಾತನಾಡಿ ಭ್ರೂಣಲಿಂಗ ಹತ್ಯೆ ನಡೆಯದಂತೆ ನಿಗಾ ವಹಿಸಲು ಜಿಲ್ಲಾ ಮಟ್ಟದಲ್ಲಿ ಸಲಹಾ ಸಮಿತಿ ಇದೆ ಈ ಸಮಿತಿಯ ಸದಸ್ಯರು ಆಗಾಗ ಸ್ಕ್ಯಾನಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ ಸಾರ್ವಜನಿಕರಿಂದ ಈ ಕುರಿತು ಯಾವುದೇ ದೂರು ಬಂದರು ಈ ಕುರಿತು ಕ್ರಮ ತೆಗೆದುಕೊಳ್ಳಲಾಗುತ್ತದೆ ಹಾಗೂ ಈ ಸಮಿತಿಯಿಂದ ಗೌಪ್ಯ ಕಾರ್ಯಾಚರಣೆಯನ್ನು ಮಾಡಲಾಗುತ್ತದೆ ಎಂದು ಹೇಳಿದರು.
ಈ ಸಭೆಯಲ್ಲಿ ಪಿ.ಸಿ ಮತ್ತು ಪಿ.ಎನ್.ಡಿ.ಟಿ ಜಿಲ್ಲಾ ಮಟ್ಟದ ಸಲಹಾ ಸಮಿತಿಯ ಅಧ್ಯಕ್ಷರಾದ ಡಾ. ಕೆ.ಹೆಚ್. ತೊಗರಿ. ಸಮಿತಿ ಸದಸ್ಯರಾದ ಡಾ. ಗಿರೀಶ್. ಡಾ. ಸುರೇಶ ಜಿ. ಶಂಕ್ರಪ್ಪ ಬಿ. ಸುರಳ್. ಸಲೀಮ್ ಜಾನ್. ಹರೀಶ್ ಜೋಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!