ಬಿ.ಎಲ್ ಬುಲ್ಸ್ ಕರಾಟೆ ಸಂಸ್ಥೆಯ ಕರಾಟೆ ವಿದ್ಯಾರ್ಥಿಗಳ ಅಮೋಘ ಸಾಧನೆ
೮ನೇ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ
.
ಗಂಗಾವತಿ: ನವೆಂಬರ್-೨೪ ಭಾನುವಾರ ನಡೆದ ೮ನೇ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್ ಲಯನ್ ಮಾ?ಲ್ ಆರ್ಟ್ಸ್ ಸಂಸ್ಥೆ ವತಿಯಿಂದ ಶ್ರೀಯುತ ಪ್ರಕಾಶ್‌ರವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಈ ಒಂದು ಸ್ಪರ್ಧೆಯಲ್ಲಿ ಬಿ.ಎಲ್ ಬುಲ್ಸ್ ಕರಾಟೆ ಡು ಸ್ಪೋರ್ಟ್ಸ್ ಅಸೋಸಿಯೇ?ನ್ (ರಿ) ಗಂಗಾವತಿ ಸಂಸ್ಥೆವತಿಯಿಂದ ೨೩ ಕರಾಟೆ ಕ್ರೀಡಾಪಟುಗಳು ಭಾಗವಹಿಸಿ ಅಮೋಘವಾದ ಸಾಧನೆ ಮಾಡಿದ್ದಾರೆ ಎಂದು ಸಂಸ್ಥೆಯ ಕರಾಟೆ ಶಿಕ್ಷಕರಾದ ಮಂಜುನಾಥ ರಾಠೋಡ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳಾದ ಅವೇಜ್, ಚಿನ್ನು, ಅಂಬಿಕ, ಆಲಿಯಾ, ಶರತ್ ಕುಮಾರ್, ಅಮಿತ್, ಮನೋಜ್, ಮಣಿಕಂಠ, ಮುತ್ತುರಾಜ್, ಅಹಂನ್, ಕಲ್ಯಾಣ ಕುಮಾರ್, ಅಬುಬಕರ್ ಮತ್ತು ಕುಮುಟೆ ವಿಭಾಗದಲ್ಲಿ ಪ್ರಥಮ ಸ್ಥಾನ, ದಿಲೀಪ್‌ಕುಮಾರ್ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಮತ್ತು ಕುಮುಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ, ಮಹೇಶ್, ರಜತ್, ಕಿಶೋರ್, ಚೇತನ್, ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಮತ್ತು ಕುಮುಟೆ ವಿಭಾಗದಲ್ಲಿ ತೃತೀಯ ಸ್ಥಾನ, ಪ್ರಜ್ಞಾ ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಮತ್ತು ಕುಮುಟೆ ವಿಭಾಗದಲ್ಲಿ ತೃತೀಯ ಸ್ಥಾನ, ವರುಣ್, ಗೌರೀಶ್, ಪ್ರಣವ್, ವಾಣಿಕುಮಾರ, ಕಟಾ ವಿಭಾಗದಲ್ಲಿ ದ್ವಿತೀಯ ಮತ್ತು ಕುಮುಟೆ ವಿಭಾಗದಲ್ಲಿ ತೃತೀಯ ಸ್ಥಾನ, ಶಶಾಂಕ್ ಕಟಾ ಮತ್ತು ಕುಮುಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದು, ಒಟ್ಟಾರೆಯಾಗಿ ಕಟಾ ವಿಭಾಗದಲ್ಲಿ ೧೭ ಪ್ರಥಮ ಸ್ಥಾನ, ೬ ದ್ವಿತೀಯ ಸ್ಥಾನ, ೨ ತೃತೀಯ ಸ್ಥಾನ ಹಾಗೂ ಕುಮುಟೆ ವಿಭಾಗದಲ್ಲಿ ೧೨ ಪ್ರಥಮ, ೪ ದ್ವಿತೀಯ, ೭ ತೃತಿಯ ಸ್ಥಾನ ಪಡೆದಿದ್ದಾರೆ.
ಸಂಸ್ಥೆಯ ಅಧ್ಯಕ್ಷರಾದ ಚಂದ್ರೇಗೌಡ ಪೊಲೀಸ್ ಪಾಟೀಲ್ ಮಾತನಾಡಿ, ಈ ವಿದ್ಯಾರ್ಥಿಗಳಿಗೆ ಪ್ರಶಂಸನೆ ವ್ಯಕ್ತಪಡಿಸಿದರು.
ಕರಾಟೆ ಶಿಕ್ಷಕರಾದ ಮೀನಾಕ್ಷಿ, ಫಯಾಜ್, ಪ್ರಜ್ವಲ್ ನಿಂಗರಾಜ್, ಆಂಜನೇಯ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
Comments are closed.