ದಲಿತ ಯುವಕನ ಮೇಲೆ ಹಲ್ಲೆ ಮಾಡಿದ ಅಪರಾಧಿಗೆ 5 ವರ್ಷಗಳ ಜೈಲು ಶಿಕ್ಷೆ
ಶಂಕ್ರಪ್ಪ ತಂದೆ ಶಿವಪ್ಪ ಹಳ್ಳಿ ಎಂಬ ಅಪರಾಧಿಯು ಪರ‍್ಯಾದಿದಾರ/ಬಾಧಿತ ರಾಜಪ್ಪ ತಂದೆ ಹುಲಿಗೆಪ್ಪ ಚೆನ್ನದಾಸರ ಈತನ ಮೇಲೆ ಬಿದಿರು ಬಡಿಗೆಯಿಂದ ಮೊಣಕಾಲಿಗೆ ಎರಡು ಸಲ ಹೊಡೆದು ಭಾರಿ ಒಳಪೆಟ್ಟು ಮಾಡಿ ಜೀವದ ಬೆದರಿಕೆ ಹಾಕಿರುವ ಆರೋಪ ಸಾಬಿತಾಗಿದೆ ಎಂದು ಕೊಪ್ಪಳ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಅಪರಾಧಿ ಶಂಕ್ರಪ್ಪ ತಂದೆ ಶಿವಪ್ಪ ಹಳ್ಳಿ ಈತನಿಗೆ ಶಿಕ್ಷೆ ವಿಧಿಸಿರುತ್ತಾರೆ.
ಬೇವೂರು ಪೋಲಿಸ್ ಠಾಣೆ ವ್ಯಾಪ್ತಿಯ ವಟಪರವಿ ಗ್ರಾಮದಲ್ಲಿ 2016ರ ಮೇ 24ರಂದು ಸಾಯಂಕಾಲ 6 ಗಂಟೆ ಸುಮಾರಿಗೆ ಪರ‍್ಯಾದಿ/ಬಾಧಿತನಾದ ರಾಜಪ್ಪ ಈತನು ಅಪರಾಧಿ ಶಂಕ್ರಪ್ಪ ತಂದೆ ಶಿವಪ್ಪ ಹಳ್ಳಿ ಈತನ ಅಂಗಡಿಗೆ ಹೋಗಿ ತನಗೆ ಎಲೆ ಅಡಿಕೆ ಮತ್ತು ಒಂದು ಸೊಂಡಿಗೆ ಪಾಕೇಟ್ಟು ತೆಗೆದುಕೊಂಡು ಅದರ ರೊಕ್ಕ ಕೊಡಲು ತನ್ನಲ್ಲಿದ್ದ 500 ರೂಪಾಯಿ ನೋಟನ್ನು ಕೊಟ್ಟಾಗ ಅಪರಾಧಿಯು ಪರ‍್ಯಾದಿ/ಬಾಧಿತನಿಗೆ ಚಿಲ್ಲರೆ ಕೊಡು ಅಂತಾ ಅಂದಾಗ ಪರ‍್ಯಾದಿದಾರನು ನನ್ನ ಹತ್ತಿರ ಚಿಲ್ಲರೆ ಇರುವುದಿಲ್ಲ ಅಂತಾ ಹೇಳಿದಾಗ ಅಪರಾಧಿ ಪರ‍್ಯಾದಿಯೊಂದಿಗೆ ವಿನಾಕಾರಣ ಜಗಳ ತೆಗೆಯುವ ಉದ್ದೇಶದಿಂದ ಒಮ್ಮಿಂದೊಮ್ಮೆಲೆ ಸಿಟ್ಟಿಗೆದ್ದು ತನ್ನ ಅಂಗಡಿಯಿAದ ಹೊರಗೆ ಬಂದವನೆ ಪರ‍್ಯಾದಿದಾರನಿಗೆ ಅವಾಚ್ಯ ಶಬ್ದಗಳಿಂದ ಬೈದಾಡಿ ಅಲ್ಲೇ ಇದ್ದ ಒಂದು ಬಿದಿರು ಬಡಿಗೆಯಿಂದ ಬಾಧಿತನ ಬಲ ಮೊಣಕಾಲಿಗೆ ಎರಡು ಸಲ ಹೊಡೆದು ಅವನಿಗೆ ಭಾರಿ ಒಳಪೆಟ್ಟು ಮಾಡಿ ಜೀವದ ಬೆದರಿಕೆ ಹಾಕಿರುವುದು ಆರೋಪ ಸಾಬೀತಾಗಿದ್ದು, 2016ರ ಮೇ 27ರಂದು ಬೇವೂರು ಪೋಲಿಸ್ ಠಾಣಾ ಗುನ್ನೆ ನಂ: 37/2016 ಕಲಂ: 326, 504, 506 ಐಪಿಸಿ & 3[1], [ಆರ್] [ಎಸ್], 3[2][V ][ಎ] ಎಸ್‌ಸಿ/ಎಸ್‌ಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಅಂದಿನ ತನಿಖಾಧಿಕಾರಿ ಕೊಪ್ಪಳ ಡಿವೈ.ಎಸ್.ಪಿ ಕಟ್ಟಿಮನಿ ಎಸ್.ಬಿ ಅವರು ತನಿಖೆ ಮಾಡಿ ಪರಾಧಿಯ ಮೇಲೆ ದೋಷಾರೋಪಣೆಪಟ್ಟಿ ಸಲ್ಲಿಸಿರುತ್ತಾರೆ.
ಈ ಪ್ರಕರಣದಲ್ಲಿ ವಟಪರವಿ ಗ್ರಾಮದ ಶಂಕ್ರಪ್ಪ ತಂದೆ ಶಿವಪ್ಪ ಹಳ್ಳಿ ಇತನ ಮೇಲಿರುವ ಆರೋಪಗಳು ಸಾಬೀತಾಗಿವೆ ಎಂದು ಕೊಪ್ಪಳ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿ. ಚಂದ್ರಶೇಖರ ಅವರು ಅಪರಾಧಿಗೆ 05 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ. 14,000 ಗಳ ದಂಡ ವಿಧಿಸಿ 2024ರ ನವೆಂಬರ್ 19ರಂದು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಬಂಡಿ ಅಪರ್ಣಾ ಮನೋಹರ ಅವರು ಪ್ರಕರಣ ನಡೆಸಿ ವಾದ ಮಂಡಿಸಿದ್ದರು ಎಂದು ಕೊಪ್ಪಳ ಪ್ರಧಾನ ಸರ್ಕಾರಿ ಅಭಿಯೋಜಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

Comments are closed.