ಜ್ಞಾನವಿಕಾಶ ಕೇಂದ್ರದ ವಾರ್ಷಿಕೋತ್ಸವ
ಕೊಪ್ಪಳ ನ ೨೨:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಭಾಗ್ಯನಗರದ ಶ್ರೀಮಂತಿಕ ಜ್ಞಾನವಿಕಾಸ ಕೇಂದ್ರದಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮವು ಜರುಗಿತು.
ಕಾರ್ಯಕ್ರಮವನ್ನು ಶಂಕರಾಚಾರ್ಯ ಮಠದ ಶ್ರೀಶಿವಶಂಕರಾಚಾರ್ಯ ಸ್ವಾಮಿಗಳು ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಮಹಿಳೆಯರ ಆರೋಗ್ಯ ರಕ್ಷಣೆ ಬಗ್ಗೆ ವೈದ್ಯರಾದ ಮೇಘ ರವರು ಮಾಹಿತಿ ನೀಡಿದರು. ಇನ್ನೋರ್ವ ಅತಿಥಿಗಳಾಗಿ ಕಾಳಮ್ಮ ರವರು ಕಾರ್ಯಕ್ರಮದ ಕುರಿತು ಮಾತನಾಡಿದರು.
ತಾಲೂಕು ವಿಚಕ್ಷಣಾಧಿಕಾರಿ ಲತಾ ಇದ್ದರು. ಕೇಂದ್ರದ ಸದಸ್ಯರಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಗೀತಾ ನಿರೂಪಿಸಿ ಕವಿತಾ ವಂದಿಸಿದರು.
Comments are closed.