ಮಾರ್ಚ್ ಅಂತ್ಯದವರೆಗೆ ಎರಡನೇ ಬೆಳೆಗೆ ನೀರು ಒದಗಿಸಲು ತೀರ್ಮಾನ: ಸಚಿವ ಶಿವರಾಜ್ ತಂಗಡಗಿ
ಬೆಂಗಳೂರು: ನ.21 : ಕುಡಿಯುವ ನೀರು ಸೇರಿದಂತೆ ಹಿಂಗಾರು ಹಂಗಾಮಿನ ಬೆಳೆಗಳಿಗೆ ಮಾರ್ಚ್ ಅಂತ್ಯದವರೆಗೆ ನೀರು ಒದಗಿಸಲು ತುಂಗಭದ್ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ನೀರಾವರಿ ಸಲಹಾ ಸಮಿತಿ ಅಧ್ಯಕ್ಷರೂ ಆಗಿರುವ ಸಚಿವ ಶಿವರಾಜ್ ತಂಗಡಗಿ ಅವರು ತಿಳಿಸಿದ್ದಾರೆ.
ವಿಕಾಸಸೌಧಲ್ಲಿ ಗುರುವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಎರಡನೇ ಬೆಳೆಗೆ ಮಾರ್ಚ್ ತಿಂಗಳ ಅಂತ್ಯದವರೆಗೆ ನೀರು ಒದಗಿಸಲು ಸಭೆಯಲ್ಲಿ ತೀರ್ಮಾನ ಮಾಡಲಾಗಿದ್ದು, ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಡಿ.1ರಿಂದ ಡಿಸೆಂಬರ್ 15 ರವರೆಗೆ 1500 ಡಿ. 16 ರಿಂದ 31ರವರೆಗೆ 2000 ಕ್ಯೂಸೆಕ್ಸ್ ನಂತೆ ನೀರು ಹರಿಸಲಾಗುವುದು. ಜ.1ರಿಂದ 31 ವರೆಗೆ 3800 ಕ್ಯೂಸೆಕ್ಸ್ ನಂತೆ, ಫೆ.1ರಿಂದ 28 ರವರಿಗೆ 3800 ಕ್ಯೂಸೆಕ್ಸ್ ಹಾಗೂ ಮಾರ್ಚ್ 1ರಿಂದ 31ರವರೆಗೆ 3800 ಕ್ಯೂ ಸೆಕ್ಸ್ ನಂತೆ ಮತ್ತು ಕುಡಿಯುವ ನೀರಿಗಾಗಿ ಏ. ಒಂದರಿಂದ ಹತ್ತರವರೆಗೆ 1650 ಕ್ಯೂಸೆಕ್ಸ್ ನಂತೆ ನೀರು ಹರಿಸಲಾಗುವುದು ಎಂದು ತಿಳಿಸಿದರು.
ಎಡದಂಡೆ ವಿಜಯನಗರ ಕಾಲುವೆಗೆ ಏಪ್ರಿಲ್ 11 ರಿಂದ ಮೇ 10ರವರೆಗೆ 150 ಕ್ಯು ಸೆಕ್ಸ್ ನಂತೆ ವಿತರಣಾ ಕಾಲುವೆ ಒಂದರಿಂದ 11 ಎ ವರೆಗೆ ಅಥವಾ ಈ ಕಾಲುವೆಗೆ ನೀರಿನ ಲಭ್ಯತೆ ಇರುವವರೆಗೆ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ.
ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆ: ಈ ಕಾಲುವೆಗೆ ಡಿ.1ರಿಂದ 10ರವರೆಗೆ ನೀರು ನಿಲುಗಡೆ, 11ರಿಂದ 31ರವರೆಗೆ 800 ಕ್ಯೂ ಸೆಕ್ಸ್ ನಂತೆ, ಜ.1ರಿಂದ ಹತ್ತರವರೆಗೆ ನೀರು ನಿಲುಗಡೆ ಮತ್ತು 11 ರಿಂದ 31 ರವರೆಗೆ 800 ಕ್ಯೂಸೆಕ್ಸ್ ನಂತೆ ನೀರನ್ನು ಹರಿಸಲಾಗುತ್ತದೆ.
ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಡಿಸೆಂಬರ್ 1ರಿಂದ 15ರವರೆಗೆ 400 ಕ್ಯೂ ಸೆಕ್ಸ್ ನಂತೆ, 16 ರಿಂದ 31ರವರೆಗೆ 600 ಕ್ಯೂ ಸೆಕ್ಸ್ ನಂತೆ, ಜ.1 ರಿಂದ ಫೆ. 28ರವರೆಗೆ 650 ಕ್ಯೂಸೆಕ್ಸ್ ನಂತೆ ಹಾಗೂ ಮಾರ್ಚ್ ಒಂದರಿಂದ 31 ರವರೆಗೆ ಬಲದಂಡೆ ಕೆಳಮಟ್ಟದ ಕಾಲುವೆಗೆ ನೀರು ಬಿಡಲಾಗುವುದು. ಉಳಿದಂತೆ ರಾಯಬಸವಣ್ಣ ಕಾಲುವೆಗೆ ಡಿಸೆಂಬರ್ 10 ರಿಂದ ಜನವರಿ 10ರವರೆಗೆ ನೀರು ನಿಲುಗಡೆ ಮತ್ತು ಜನವರಿ 11 ರಿಂದ ಮೇ 31ರವರೆಗೆ 250 25ನಂತೆ ನೀರು ಹರಿಸಲಾಗುವುದು. ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಡಿ.1ರಿಂದ ನೀರು ಹರಿಸಲಾಗುತ್ತದೆ. ಇದರಲ್ಲಿ ಕಾಲುವೆನಿನ ಲಭ್ಯತೆಯು ಇರುವ ತನಕ ಮಾತ್ರ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ ಎಂದು ಸಚಿವರು ವಿವರಿಸಿದರು.
19ನೇ ಟ್ರಸ್ಟ್ ಗೇಟ್ ಮುರಿದು ಹೋಗಿ ಬಳಿಕ ಎರಡನೇ ಬಾರಿ ಅಣೆಕಟ್ಟು ಭರ್ತಿಯಾಗಿರುವುದು ಇತಿಹಾಸ. ಈ ಹಿಂದೆ ಸಿದ್ದರಾಮಯ್ಯನವರು ಅಣೆಕಟ್ಟೆಗೆ ಭೇಟಿ ನೀಡಿದ ವೇಳೆ ಡ್ಯಾಮ್ ಮತ್ತೆ ತುಂಬಲಿದ್ದು ರೈತರಿಗೆ ಎರಡನೇ ಬೆಳೆಗೆ ನೀರು ಒದಗಿಸಲಾಗುವುದು ಎಂದು ಭರವಸೆ ನೀಡಿದ್ದರು. ಅದರಂತೆ ಮಳೆರಾಯನ ಕೃಪೆಯಿಂದ ಇಂದು ಎರಡನೇ ಬೆಳೆಗೆ ನೀರು ಒದಗಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ರೈತರು
ಅಣೆಕಟ್ಟೆಯ ಕ್ರಸ್ಟ್ ಗೇಟ್ ಮುರಿದುಹೋದ ಸಂದರ್ಭದಲ್ಲಿ ಸರ್ಕಾರ ತ್ವರಿತಗತಿಯಲ್ಲಿ ಮರುಗೇಟ್ ಅಳವಡಿಕೆಗೆ ಸ್ಪಂದಿಸಿದ ರೀತಿಗೆ ರೈತರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರಿಗೆ ಇದೆ ವೇಳೆ ಅಭಿನಂದನೆ ಸಲ್ಲಿಸಿದರು.
ಸಭೆಯಲ್ಲಿ ಸಣ್ಣ ನೀರಾವರಿ ಸಚಿವ ಬೋಸರಾಜ್, ಕಾ.ಡಾ.ಅಧ್ಯಕ್ಷ ಹಸನಸಾಬ್ ದೋಟಿಹಾಳ್,
ಶಾಸಕರಾದ ಹಂಪನಗೌಡ ಬಾದರ್ಲಿ, ಶಿವರಾಜ್ ಎಸ್.ಪಾಟೀಲ್, ಬಸನಗೌಡ ದದ್ದಲ್, ಬಿ.ಎನ್.ನಾಗರಾಜ್, ಎಚ್.ಆರ್.ಗವಿಯಪ್ಪ, ಬಸನಗೌಡ ತೂರ್ವಿಹಾಳ್, ಪರಿಷತ್ ಸದಸ್ಯರಾದ ವಸಂತ್ ಕುಮಾರ್, ಶರಣೇಗೌಡ ಬಯ್ಯಾಪುರ ಹಾಗೂ ಇನ್ನಿತರರು ಹಾಜರಿದ್ದರು.
ನೀರಾವರಿ ವಿಚಾರದಲ್ಲಿ ಬಿಜೆಪಿ ರಾಜಕೀಯ ಸಲ್ಲ:
ನೀರಾವರಿ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಬಿಜೆಪಿ ಶಾಸಕರು ತುಂಗಭದ್ರಾ ಅಣೆಕಟ್ಟು ಯಾರ ನಿಯಂತ್ರಣದಲ್ಲಿದೆ ಎಂಬುದನ್ನು ತಿಳಿದು ಮಾತನಾಡಲಿ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು ಆದ ಟಿ ಬಿ ಡ್ಯಾಮ್ ನ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್ ತಂಗಡಗಿ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
19ನೇ ಕ್ರಸ್ಟ್ ಗೇಟ್ ಮುರಿದು ಹೋದ ಸಂದರ್ಭದಲ್ಲಿ ವಿಪಕ್ಷದ ನಾಯಕರು ಇಲ್ಲ ಸಲ್ಲದ ಆರೋಪ ಮಾಡಿದ್ದರು. ಆದರೆ ಇಂದಿನ ಸರ್ಕಾರದ ಅವಧಿಯಲ್ಲಿ ಅಣೆಕಟ್ಟೆಯ ಗೇಟ್ ಗಳನ್ನ ಬದಲಾಯಿಸಬೇಕು ಎಂದು ಪರಿಣಿತರು ವರದಿ ನೀಡಿದರು. ಆದರೆ ಆ ಕೆಲಸವನ್ನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಲಿಲ್ಲ. ಈಗ ನಮ್ಮ ಮೇಲೆ ಆರೋಪ ಮಾಡುತ್ತಾರೆ ಎಂದು ಛೇಡಿಸಿದರು.
ಗೇಟ್ ಮರು ಜೋಡಣೆಗೆ ಒಪ್ಪದ ಬೋರ್ಡ್:
19ನೇ ಟ್ರಸ್ಟ್ ಗೇಟ್ ಮುರಿದು ಹೋದಾಗ ಬದಲಿ ಗೇಟ್ ಅಳವಡಿಸಲು ಟಿಬಿ ಬೋರ್ಡ್ ನವರು ಒಪ್ಪಲಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವರು ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೂಚನೆಯಂತೆ ನಾವೇ ಖುದ್ದು ಜಿಂದಾಲ್ ಕಂಪನಿ ಅವರನ್ನು ಸಂಪರ್ಕಿಸಿ ಗೇಟ್ ನ ಡಿಸೈನ್ ಸಿದ್ಧಪಡಿಸುವಂತೆ ಕೇಳಿಕೊಂಡೆವು. ಆ ಬಳಿಕವೂ ಬೋರ್ಡ್ ನವರು ಒಪ್ಪದಿದ್ದಾಗ ಅವರನ್ನು ಮನವೊಲಿಸಿ ಹರಿದು ಹೋಗುತ್ತಿದ್ದ 35 ಟಿಎಂಸಿ ನೀರನ್ನು ಗೇಟ್ ಅಳವಡಿಸುವ ಮೂಲಕ ತಡೆಯಲಾಯಿತು ಎಂದು ಹೇಳಿದರು.
ಡ್ಯಾಮ್ ನ ಸಂಪೂರ್ಣ ನಿರ್ವಹಣೆ ಬೋರ್ಡ್ ನವರಾಗಿದ್ದ ಕಾರಣ ಗೇಟ್ ಅಳವಡಿಕೆಯ ವೆಚ್ಚವನ್ನು ಅವರೇ ಭರಿಸಬೇಕಿತ್ತು. ಆದರೆ ರಾಜ್ಯ ಸರ್ಕಾರವೇ ಹಣವನ್ನು ತತ್ತಕ್ಷಣವೇ ಬಿಡುಗಡೆ ಮಾಡಿದೆ. ಇದೆಲ್ಲವನ್ನೂ ಬದಿಗೊತ್ತಿ ಬಿಜೆಪಿಯವರು ಈ ಬಗ್ಗೆ ಜನರಿಗೆ ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡಿದ್ದರು. ಕೆಲವರಂತೂ ಗೇಟ್ ಕಿತ್ತುಹೋದ ವೇಳೆ ಅಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ರಾಜೀನಾಮೆ ನೀಡಬೇಕೆಂದು ಪರಿಜ್ಞಾನವೇ ಇಲ್ಲದವರಂತೆ ವರ್ತಿಸಿದ್ದರು. ಆದರೆ ಇಂದು ಸಲಹಾ ಸಮಿತಿ ಸಭೆ ವೇಳೆ ಬಿಜೆಪಿ ಶಾಸಕರಾದ ಶಿವರಾಜ್ ಪಾಟೀಲ್ ಅವರು ಮಾಡಿದ ಆರೋಪಕ್ಕೆ ತಿರುಗೇಟು ನೀಡಿದೆನು ಎಂದು ಮಾಧ್ಯಮದವರ ಪ್ರಶ್ನೆಗೆ ಸಚಿವ ಶಿವರಾಜ್ ತಂಗಡಗಿ ಉತ್ತರಿಸಿದರು.
Comments are closed.