ಬಂಜಾರ ಸಂಸ್ಕೃತಿ ಭಾರತೀಯತೆಗೆ ಮೂಲವಾಗಿದೆ:ಕುಮಾರ ರಾಠೋಡ್
*ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯಿಂದ ತರಬೇತಿಗೆ ಚಾಲನೆ
*ಭಾಷೆ, ವೇಷ ಹಾಗೂ ಸಂಸ್ಕೃತಿ ಉಳಿಸಬೇಕಿದೆ.
ಗಂಗಾವತಿ: ಬಂಜಾರ ಸಂಸ್ಕೃತಿ ಭಾರತೀಯತೆಗೆ ಮೂಲವಾಗಿದೆ.ಬಂಜಾರ ಸಂಸ್ಕೃತಿ ,ಭಾಷೆ ಜೀವನ ಶೈಲಿಯನ್ನು ಆಧುನೀಕತೆ ಸಮ್ಮಿಳಿತಗೊಳಿಸಬೇಕೆಂದು ಬಂಜಾರ ಸಂಸ್ಕೃತಿ ಮತ್ತು ಭಾಷೆ ಅಕಾಡೆಮಿ ಸದಸ್ಯ ಕುಮಾರ ರಾಠೋಡ್ ಹೇಳಿದರು.
ಅವರು ನಗರದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಹಾಗೂ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿರುವ ಬಂಜಾರ ಕಥೆ,ಕಾವ್ಯ ಮತ್ತು ನಾಟಕ ರಚನಾ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಕಾಡೆಮಿ ಯಿಂದ ಮುಂಬರುವ ರಾಜ್ಯದಾದ್ಯಂತ ಬಂಜಾರ ಭಾಷೆ,ಸಂಸ್ಕೃತಿ ಮತ್ತು ಕಲೆ ಜನಾಂಗೀಯ ಮೆರಗು ನೀಡುವ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ತಾಂಡ ಅಭಿವೃದ್ಧಿ,ಜನಾಂಗೀಯ ಶೈಕ್ಷಣಿಕ ಪ್ರಗತಿಗೆ ಅಕಾಡೆಮಿ ಜನಾಂಗದ ಸಲಹೆ,ಸೂಚನೆ ಪಡೆದು ಅನುಷ್ಠಾನಕ್ಕೆ ಯೋಜನೆ ರೂಪಿಸಲಾಗುತ್ತದೆ. ಬಂಜಾರ ಸಮುದಾಯದವರು ಶೈಕ್ಷಣಿಕವಾಗಿ ಮುಂದುವರಿಯಬೇಕು.ಸರಕಾರದ ಯೋಜನೆ ಸದುಪಯೋಗಪಡಿಸಿಕೊಂಡು ಮುಖ್ಯ ವಾಹಿನಿಗೆ ಬರಬೇಕೆಂದರು.
ಕನಕಗಿರಿ ತಹಸೀಲ್ದಾರ್ ವಿಶ್ವನಾಥ ಮುರಡಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಕೆ.ನಿಂಗಜ್ಜ, ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ಪಿ.ಲಕ್ಷ್ಮಣ ನಾಯಕ ರಾಂಪೂರ, ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಸಂಯೋಜಕಿ ದೀಪಾ ರಾಠೋಡ್,ಡಾ.ರವಿ ಚವ್ಹಾಣ,ಕೃಷಿ ಅಧಿಕಾರಿ ಪ್ರಕಾಶ ರಾಠೋಡ್,ಪಾಂಡು ನಾಯಕ್,ರಾಜು ರಾಠೋಡ್,
ಛತ್ರಪ್ಪ ತಂಬೂರಿ ಇದ್ದರು.
ಪೊಟೋ08-gvt-06
ಗಂಗಾವತಿ: ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ತರಬೇತಿ ಕಾರ್ಯಗಾರಕ್ಕೆ ಚಾಲನೆ ನೀಡಲಾಯಿತು
Comments are closed.