ಕೊಪ್ಪಳದಲ್ಲಿ ದಿ. 9 ಸ್ವಾತಂತ್ರ್ಯ ಹೋರಾಟಗಾರರ ಜಯಂತೋತ್ಸವ

Get real time updates directly on you device, subscribe now.

 

ಕೊಪ್ಪಳ  :    ಭಾರತ ಕಂಡ ಸ್ವಾತಂತ್ರ್ಯ ಹೋರಾಟಗಾರರ ಜಯಂತೋತ್ಸವ ಕಾರ್ಯಕ್ರಮ ನಗರದ ಸಾಹಿತ್ಯ ಭವನದಲ್ಲಿ ದಿ,7 ರ ಶನಿವಾರ ಬೆಳಿಗ್ಗೆ 10:30 ಕ್ಕೆ ಜರುಗಲಿದೆ ಎಂದು ಕೊಪ್ಪಳ ಯುವ ಮುಸ್ಲಿಂ ಸಮಿತಿ ಸಂಚಾಲಕ ಮೊಹಮ್ಮದ್ ಸಲೀಂ ಮಂಡಲಗೆ eರಿ ಹೇಳಿದರು
ಅವರು ಗುರುವಾರ ಬೆಳಗ್ಗೆ ಇಲ್ಲಿನ ಪತ್ರಿಕಾ ಭವನ ದಲ್ಲಿ   ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಮಾರಂಭದ ದಿವ್ಯ ಸಾನಿಧ್ಯವನ್ನು ಮೈಸೂರಿನ ಶಿವಯೋಗಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ವಹಿಸಿ ವಿಶೇಷ ಉಪನ್ಯಾಸ ಮತ್ತು ಆಶೀರ್ವಚನ ನೀಡಲಿದ್ದಾರೆ, ಮುಸ್ಲಿಂ ಧರ್ಮಗುರು ಮೌಲಾನ ಮುಫ್ತಿ ನಜೀರ್ ಅಹ್ಮದ್ ಖಾದ್ರಿ ತಸ್ಕೀನಿ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ ,ಕಾರ್ಯಕ್ರಮದ ಉದ್ಘಾಟನೆಯನ್ನು ಮುಸ್ಲಿಂ ಸಮಾಜದ ಹಿರಿಯ ನಾಯಕ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ನೆರವೇರಿಸಲಿದ್ದು ಸ್ಥಳೀಯ ಶಾಸಕ ಕೆ ರಾಘವೇಂದ್ರ ಹಿಟ್ನಾಳ್ ರವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ,


ಮುಖ್ಯ ಅತಿಥಿಗಳಾಗಿ ಸಂಸದ ಕೆ ರಾಜಶೇಖರ್ ಹಿಟ್ನಾಳ್ ,ಮಾಜಿ ಸಂಸದ ಸಂಗಣ್ಣ ಕರಡಿ, ಮುನಿರಾಬಾದ್ ಕಾಡಾ ಅಧ್ಯಕ್ಷ ಹಸನ್ ಸಾಬ್ ಡೋಟಿಹಾಳ, ಜೆಡಿಎಸ್ ಮುಖಂಡ ಸಿವಿ ಚಂದ್ರಶೇಖರ್, ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್, ಕೆಪಿಸಿಸಿ ಸಂಯೋಜಕ ಕೆಎಂ ಸೈಯದ್, ನಗರ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಬಾಶುಸಾಬ್ ಖತೀಬ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ ಪಾಷಾ ಕಾಟನ್ ಪಾಲ್ಗೊಳ್ಳಲಿದ್ದಾರೆ ಎಂದು ಕಾರ್ಯಕ್ರಮ ಸಂಘಟಕ ಸಂಚಾಲಕ ಮಹಮ್ಮದ್ ಸಲೀಂ ಮಂಡಲಗೇರಿ ತಿಳಿಸಿದ್ದಾರೆ,
ಕಾರ್ಯಕ್ರಮದ ಬಳಿಕ ಕೊಪ್ಪಳ ನಗರಸಭೆ ಬಳಿ ಇರುವ ಈದ್ಗಾ ಮೈದಾನದಿಂದ ಅಶೋಕ್ ಸರ್ಕಲ್ ಮಾರ್ಗವಾಗಿ ನಗರದ ಪ್ರಮುಖ ಜವಾ ಹಾರ ರಸ್ತೆಯಲ್ಲಿ ಬೃಹತ್ ಮೆರವಣಿಗೆ ನಡೆಯಲಿದೆ ಗಡಿಯಾರ ಕಂಬದ ವರೆಗೆ ಮೆರವಣಿಗೆ ನಡೆದು ಮುಕ್ತಾಯಗೊಳ್ಳಲಿದೆ ಎಂದು ಸಮಿತಿಯ ಸೈಯದ್ ನಾಶೀರುದಿನ್ ಹುಸೇನಿ ವಿವರಿಸಿದರು, ಸಮಾಜದ ಮುಖಂಡ ಬಾಶುಸಾಬ್ ಖತೀಬ್ ಮಾತನಾಡಿ ಸರ್ವ ಜನಾಂಗದ ಸಾರ್ವಜನಿಕರು ಸದರಿ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿಕೊಂಡು ಸರ್ವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದ್ದಾರೆ ಪತ್ರಿಕಾಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಎಂ ಪಾಶಾ ಕಾಟನ್ ,ಹುಸೇನ್ ಪೀರಾ ಮುಜಾವರ್, ಸೈಯದ್ ಮೆಹಮೂದ ಹುಸೇನಿ ಬಲ್ಲೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!