ಉಪ್ಪಾರ ಓಣಿ ಶ್ರೀ ಗಜಾನನ ಗೆಳೆಯರ ಬಳಗದಿಂದ ಅಪ್ಪು ಸಂಸ್ಮರಣೆ: ನುಡಿನಮನ

Get real time updates directly on you device, subscribe now.


ಗಂಗಾವತಿ: ನಗರದ ಶ್ರೀ ಭಗೀರಥ ಸರ್ಕಲ್ ಬಳಿ ಇರುವ ಉಪ್ಪಾರ ಓಣಿಯಲ್ಲಿ ಶ್ರೀ ಗಜಾನನ ಗೆಳೆಯರ ಬಳಗದಿಂದ ಅಭಿಮಾನಿಗಳ ಪ್ರೀತಿಯ ದೇವರು ಅಪ್ಪು ಅವರ ಮೂರನೇ ಸಂಸ್ಮರಣೆ, ನುಡಿನಮನ ಕಾರ್ಯಕ್ರಮವು ಗೀತಾಗಾಯನ, ನೃತ್ಯ, ಪೌರಾಣಿಕ ನಾಟಕಗಳ ಸಂಭಾಷಣೆಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಡಾ. ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು ಬಳಿಕ ಮೇಣದ ಬತ್ತಿ ಬೆಳಗಿಸಿ ಅಪ್ಪುಗೆ ಭಾವಪೂರ್ಣ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ರೇವಣ ಸಿದ್ದಯ್ಯತಾತನವರು ಮಾತನಾಡಿ, ಇನ್ನೊಬ್ಬರ ಕಷ್ಟ ಅರಿತು ಅವರಿಗೆ ಸಹಾಯ ಹಸ್ತ ಚಾಚುವವನೆ ದೇವರು ಈ ನಿಟ್ಟನಲ್ಲಿ ಅಪ್ಪು ಅವರು ಅನೇಕ ಅನಾಥಾಶ್ರಮಗಳು, ಶಾಲೆಗಳು, ವೃದ್ಧಾಶ್ರಮಗಳು ಸೇರಿದಂತೆ ಬಡ ಸಮುದಾಯದ ಅನೇಕರಿಗೆ ಸಹಾಯ ಹಸ್ತ ಚಾಚಿ ತಮ್ಮ ವ್ಯಕ್ತಿತ್ವದ ಮೂಲಕ ದೈವತ್ವ ಸ್ವರೂಪ ಪಡೆದರು. ಅವರಿಗಾಗಿ ದೇವಾಲಯಗಳನ್ನು ನಿರ್ಮಿಸಿ ಪೂಜಿಸಲಾಗುತ್ತಿದೆ ಎಂದರು. ಚಲನಚಿತ್ರ ನಟ ನಾಗರಾಜ್ ಇಂಗಳಗಿ ಶ್ರೀ ವಿಘ್ನೇಶ್ವರನ ಉತ್ಸವವನ್ನು ಅದ್ಧೂರಿಯಾಗಿ ಮಾಡುವುದರ ಜೊತೆಗೆ ಅಪ್ಪು ಕಾರ್ಯಕ್ರಮವನ್ನು ಆಚರಿಸುತ್ತಿರುವುದು ಮುಖ್ಯಸ್ಥರಾದ ಮುಕ್ಕಣ್ಣ ಮಾನಳ್ಳಿ, ರಾಜಪ್ಪ ಹುಲಿಗಿ ಹಾಗು ಗೌಳಿ ಮಾಣಿಕಪ್ಪ ಇವರ ಬದ್ಧತೆಗೆ ಸಾಕ್ಷಿ ಎಂದರು.
ಈ ಸಂದರ್ಭದಲ್ಲಿ ವಿಐಪಿ ಮೆಲೋಡಿಸ್‌ನಿಂದ ಸಂಗೀತ ರಸಸಂಜೆ ಕಾರ್ಯಕ್ರಮವೂ ಜರುಗಿತು. ಗಾಯಕ, ಮೆಲೋಡಿಸ್ ಮಾಲಿಕ ಪಂಪಾಪತಿ ಇಂಗಳಗಿ ಹಾಗು ರಂಗಭೂಮಿ ಕಲಾವಿದ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗಂಗಾವತಿ ತಾಲೂಕಾ ಅಧ್ಯಕ್ಷ ನಾಗರಾಜ್ ಇಂಗಳಗಿಯವರನ್ನು ಈ ಸಂದರ್ಭದಲ್ಲಿ ಗೆಳೆಯರ ಬಳಗದಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಷಣ್ಮುಖ ಸ್ವಾಮಿ ವಕೀಳರು ಕವನ ವಾಚನ ಮಾಡಿದರು.
ಅಕಾಲಿಕ ಮರಣಹೊಂದಿದ ಶಿವಪುರದ ನವೀನ್ ಕುಮಾರ್ ವರಗಪ್ಪನವರ್ ಹಾಗು ಸಿಂಧನೂರಿನ ಗಾಯಕ ದಿವಂಗತ ರುದ್ರಮುನಿ ಸ್ವಾಮಿಯವರ ಅಗಲೀಕೆಗೆ ಈವೇಳೆ ಮೌನಾಚರಣೆ ಸಲ್ಲಿಸಲಾಯಿತು.
ವೇದಿಕೆಯಲ್ಲಿ ಕಾರ್ಯಕ್ರಮದ ರೋವಾರಿ ಹಾಗು ಗೆಳೆಯರ ಬಳಗದ ಪ್ರಮುಖರಾದ ಮುಕ್ಕಣ್ಣ ಮಾನಳ್ಳಿ, ರಾಜಪ್ಪ ಹುಲಿಗಿ, ಮಾಣಿಕಪ್ಪ ಗೌಳಿ, ಸಿದ್ರಾಮ್ ಗೌಳಿ, ಮಂಜುನಾಥ ಬುಕ್ಕಸಾಗರ, ಕೊಟ್ರಯ್ಯಸ್ವಾಮಿ, ಚನ್ನಪ್ಪ ವಣಗೇರಿ, ಮೌನೇಶ್ ಇಂಗಳಗಿ, ಮಂಜುನಾಥ್ ಮಡಿವಾಳರು, ಖಾಜಾಸಾಬ್, ಈರಣ್ಣ ಮಡಿವಾಳರು ಇತರರಿದ್ದರು.
ಅನೇಕ ಮಕ್ಕಳು ನೃತ್ಯ ಪ್ರದರ್ಶಿಸಿದರು. ಗಾಯಕರಾದ ಪಂಪಾಪತಿ ಇಂಗಳಗಿ ಹಾಗು ಮಧುಶ್ರೀ, ಗುರುಪ್ರಸಾದ ಬೆಂಗಳೂರು, ಪೊಲೀಸ್ ಇಲಾಖೆಯ ಗೌಳಿ ಸುಬ್ರಮಣ್ಯ, ನಗರಸಭೆಯ ಷಣ್ಮುಖಪ್ಪ, ಅಮರೇಗೌಡ ಜಿನ್ನೂರು, ವೀರಭದ್ರಪ್ಪ, ವೀರೇಶ್‌ಸ್ವಾಮಿ ಚೂಡಾಮಣಿ, ಶ್ರೀನಿವಾಸ್ ಮರಾಠಿ ಸೇರಿದಂತೆ ಹವ್ಯಾಸಿ ಗಾಯಕರು ತಮ್ಮ ಗಾಯನದ ಮೂಲಕ ಜನಮನ ರಂಜಿಸಿದರು,

Get real time updates directly on you device, subscribe now.

Comments are closed.

error: Content is protected !!