ಒಳ ಮೀಸಲಾತಿ ಜಾರಿ ಮಾಡಿ ಇಲ್ಲ ರಾಜೀನಾಮೆ ಕೊಡಿ : ಗಣೇಶ್ ಹೊರತಟ್ನಾಳ
ಕೊಪ್ಪಳ : ಸದಾಶಿವ ಆಯೋಗ ವರದಿಯ ಮಾದಿಗರ ಒಳ ಮೀಸಲಾತಿ ಜಾರಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ, ರಾಜ್ಯ ಸಿಎಂ ಸಿದ್ದರಾಮಯ್ಯ ಸರ್ಕಾರ ವಿಳಂಬ ಮಾಡುತ್ತಿದೆ.
ಮೂರು ದಶಕಗಳ ನಿರಂತರ ಹೋರಾಟದ ಫಲವಾಗಿ ನ್ಯಾಯಾಲಯದಲ್ಲಿ ಮಾದಿಗರಿಗೆ ನ್ಯಾಯಸಿಕ್ಕರೂ ರಾಜ್ಯ ಸಿಎಂ ಸಿದ್ದರಾಮಯ್ಯ ಅವರು ಮಾತ್ರ ಸಂಪುಟ ಸಭೆಲ್ಲಿ ಒಳಮೀಸಲಾತಿ ಜಾರಿಗೆ ಆಯೋಗ ರಚಿಸುವುದಾಗಿ ಕಣ್ಣೊರೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಗಣೇಶ್ ಹೊರತಟ್ನಾಳ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅವರು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತ್ನಾಡಿ, ಸದಾಶಿವ ಆಯೋಗ ವರದಿ ಪರಿಶೀಲಿಸಿ ಸುಪ್ರೀಂ ಕೋರ್ಟ್ ಜಾರಿ ಮಾಡಲು ತಿಳಿಸಿದೆ, ಎಲ್ಲಾ ಓಕೆ ಇದ್ರೂ, ಸಿಎಂ ಸಿದ್ದರಾಮಯ್ಯ ವಿಳಂಬ ಯಾಕೆ ಮಾಡುತ್ತಿದ್ದಾರೆ. ಪರಿಶಿಷ್ಟ ಜಾತಿಯ 101 ಒಳಪಂಡಗಡಗಳಲ್ಲಿ ಮಾದಿಗರ ಸಂಖ್ಯೆ ಹೆಚ್ಚಿದೆ. ಕೆಲ ಪರಿಶಿಷ್ಟ ಜಾತಿ ಒಳ ಪಂಗಡಗಳ ಒಲೈಕೆಗೆ ಸಿದ್ದರಾಮಯ್ಯ ಅವರು ಒಳ ಮೀಸಲಾತಿ ಜಾರಿಗೆ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದ ಸಿದ್ದರಾಮಯ್ಯ ಸರ್ಕಾರ ಆಯೋಗ ರಚನೆ ಹೆಸರಿನಲ್ಲಿ ಮಾದಿಗರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಆಗಸ್ಟ್ 1 ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರವೂ ಕರ್ನಾಟಕದಲ್ಲಿ ನಿರಂತರ ಹೋರಾಟಗಳು ನಡೆದಿವೆ. ಮೀಸಲಾತಿ ಜಾರಿಗೆ ಹೊಸದೊಂದು ಆಯೋಗ ರಚಿಸುವ ಪ್ರಸ್ತಾಪ ಎಲ್ಲಿ ಕೂಡ ಆಗಿಲ್ಲ. ಯಾವೊಬ್ಬ ಮಾದಿಗ ಸಂಘಟನೆ ಮುಖಂಡರು ಪ್ರಸ್ತಾಪಿಸಿಲ್ಲ ಬೇಡಿಕೆ ಇಟ್ಟಿಲ್ಲ, ಕೊಪ್ಪಳದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಮುಂಚೂಣಿಯಲ್ಲಿದ್ದು ಒಳ ಮೀಸಲಾತಿ ಜಾರಿಗೆ ಕೆಲವು ತಕರಾರುಗಳನ್ನು ಮಾಡುತ್ತಿದ್ದು, ಸಿಎಂ ಸಿದ್ದರಾಮಯ್ಯ ಅವರು ಒಳ ಮೀಸಲಾತಿ ಜಾರಿ ಮಾಡದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಹೊಸ ಆಯೋಗ ರಚಿಸುವ ಹಿಂದೆ ಪರಿಶಿಷ್ಟ ಜಾತಿಯ ಕೆಲ ಒಳಪಂಗಡ ನಾಯಕರ ದೊಡ್ಡ ಹುನ್ನಾರವಿದೆ ಕಾಲಹರಣ ಮಾಡಿ, ಮೂಲ ದಲಿತರನ್ನು ವಂಚಿಸುವ ಕುತಂತ್ರ ನಡೆಯುತ್ತಿದೆ. ಆಯೋಗ ರಚಿಸುವ ನಾಟಕ ನಡೆಯುತ್ತಿದೆ ಸುಪ್ರೀಂಕೋರ್ಟಿನ ತೀರ್ಪು ಬಂದು ಮೂರು ತಿಂಗಳಾದರೂ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿಯನ್ನು ಜಾರಿ ಮಾಡಲು ನಿರ್ಲಕ್ಷ್ಯ ಮಾಡುತ್ತಿರುವುದು ಮಾದಿಗರಿಗೆ ಅನ್ಯಾಯ ಮಾಡುವ ಕೆಲಸ ಮಾಡುತ್ತಿದೆ ಎಂದು ಆಕ್ರೀಶ ವ್ಯಕ್ತಪಡಿಸಿದರು.
ಸರ್ಕಾರದ ಈ ನಿರ್ಧಾರವನ್ನು ನಾವು ಒಪ್ಪುವುದಿಲ್ಲ, ಜನಸಂಖ್ಯೆಯ ದತ್ತಾಂಶದ ಬಗ್ಗೆ ಖ್ಯಾತಿ ತೆಗೆಯುವವರು ಸುಪ್ರೀಂಕೋರ್ಟಿನ ತೀರ್ಪು ಬರುವವರೆಗೆ ಏನ್ ಮಾಡ್ತಾ ಇದ್ರು, ತಕರಾರು ಮಾಡುತ್ತಿರುವ ಸಚಿವ ಶಿವರಾಜ್ ತಂಗಡಗಿ, ಮಾಜಿ ಸಚಿವ ಮಾಧುಸ್ವಾಮಿ ದತ್ತಾಂಶದ ಬಗ್ಗೆ ಸಮಿತಿಗೆ ಅಂದು ಮನವಿ ಸಲ್ಲಿಸಬಹುದಿತ್ತು,ಈಗ ಯಾಕೆ ತಕರಾರು ಮಾಡುತ್ತಿದ್ದಾರೆ. ಇನ್ನು ಸಚಿವರಾದ ಡಾ. ಮಹದೇವಪ್ಪ ಹಾಗೂ ಪ್ರಿಯಾಂಕ ಖರ್ಗೆ ಅವರ ತಾಳಕ್ಕೆ ತಕ್ಕಂತೆ ಮುಖ್ಯಮಂತ್ರಿಗಳು ಕುಣಿಯುತ್ತಿದ್ದಾರೆ. ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಒಳ ಮೀಸಲಾತಿ ಶೀಘ್ರದಲ್ಲೇ ಜಾರಿ ಮಾಡದಿದ್ದರೆ, ಉಪಚುನಾವಣೆ ಹಾಗೂ ಮುಂಬರುವ ದಿನಗಳಲ್ಲಿ ಚುನಾವಣೆಗಳನ್ನು ಮಾದಿಗ ಸಮುದಾಯ ಬಹಿಷ್ಕರಿಸಬೇಕಾಗುತ್ತೆ ಎಂದು ಎಚ್ಚರಿಸಿದರು.
ಈಗಾಗಲೇ ರಾಜ್ಯಾದ್ಯಂತ ಮಾದಿಗ ಸಮುದಾಯದಿಂದ ಹೋರಾಟಗಳು ನಡೆಯುತ್ತಿವೆ, ಜಾರಿ ಮಾಡದಿದ್ದರು ಉಗ್ರಹೋರಾಟಗಳು ನಡೆಯುತ್ತವೆ. ಮುಖ್ಯಮಂತ್ರಿಗಳು ಇವುಗಳಿಗೆ ಅವಕಾಶ ಮಾಡಿಕೊಡದೆ ಒಳ ಮೀಸಲಾತಿ ಜಾರಿ ಮಾಡಲಿ ಎಂದು ಒತ್ತಾಯಿಸಿದರು.
ಆಗಸ್ಟ್ 1 ಸುಪ್ರೀಂ ಕೋರ್ಟ್ ಆದೇಶ ನಂತರ ಆಗಸ್ಟ್ 28 ವರಿಗೆ ಸುಮಾರು 36000 ಉದ್ಯೋಗಗಳ ನೇಮಕಾತಿ ಅನುಮೋದನೆ ಕಾಂಗ್ರೆಸ್ ಸರಕಾರ ಕೊಟ್ಟಿದೆ, ಈ ನೇಮಕಾತಿ ರದ್ದು ಮಾಡಬೇಕು, ಕಾರಣ ಒಳಮೀಸಲಾತಿ ಜಾರಿ ನಂತರ ನೇಮಕಾತಿ ಆದೇಶ ನೀಡಲಿ ಎಂದು ಒತ್ತಾಯಿಸಿದರು.
ದಿ. ಧರ್ಮ ಸಿಂಗ್ ಅವರ ಆಡಳಿತದಲ್ಲಿ 2005 ರಲ್ಲಿ ಸದಾಶಿವ ಆಯೋಗ ರಚನೆ ಮಾಡಿದ್ದಾರೆ , 2012 ಬಿಜೆಪಿ ಸರಕಾರ ಇದನ್ನು ಸ್ವೀಕಾರ ಮಾಡಿದೆ,
2022 ಕ್ಕೆ ಬಿಜೆಪಿ ಸರಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. 2023 ಚುನಾವಣೆ ನಂತರ ಕಾಂಗ್ರೆಸ್ ಸಿದ್ದರಾಮಯ್ಯ ಸರ್ಕಾರ ಮತ್ತೆ ಸದಾಶಿವ ವರದಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. ಇದೀಗ ಕಾಂಗ್ರೆಸ್ ಸರ್ಕಾರ ಇದೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ ಒಳಮೀಸಲಾತಿ ಜಾರಿ ಮಾಡಲಿ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾದಿಗ ಸಮುದಾಯದ ಮುಖಂಡರಾದ ನಾಗಲಿಂಗ ಮಾಳೆಕೊಪ್ಪ, ಮಂಜುನಾಥ ಮುಸಲಾಪುರ, ಮರಿಸ್ವಾಮಿ ಬೇವೂರು, ಸುಭಾಷ್ ಕನಕಗಿರಿ, ದೇವರಾಜ್ ಹುಣಸಿಹಾಳ, ವಿನಾಯಕ ಕಿಡದಾಳ ಇತರ ಮುಖಂಡರು ಇದ್ದರು.