ಭಾವಗಳಿಲ್ಲದ ಜನರ ಬದುಕು – ಕವಿ ಬಿ. ಶ್ರೀನಿವಾಸ್ ಆತಂಕ 

0

Get real time updates directly on you device, subscribe now.

ಗದಗ  27
ಯಾವ ಭಾವ ಗಳಿಲ್ಲದೆ ನಿರ್ಭವುಕರಾಗಿ ಜನ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಅಳು. ನಗು ಸುಖ ದುಃಖ ಪರರ ಸಂಕಟ ತಳಮಳ ಹಸಿವು ಅಸಾಯಕತೆ ಗಳಿಗೆ ಮಾತ್ರವಲ್ಲ ಭಾವನೆಗಳಿಗೂ ಬೆಲೆ ಕೊಡದೆ ಅಣು ಬಾಂಬುಗಳ ರೀತಿಯಲ್ಲಿ ಜನ ಬದಲಾಗು ತ್ತಿರುವದುಜಗತ್ತಿನ  ಅಪಾಯದ ಸಂಕೇತದ ಸೂಚನೆ ಎಂದು ಹಿರಿಯ ಕವಿ ಕತೆಗಾರ ದಾವಣಗೆರೆ  ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದ ಮುಖ್ಯ ಆಡಳಿತಾ ಧಿ ಕಾರಿ ಬಿ. ಶ್ರೀನಿವಾಸ್ ಅವರು ಆತಂಕ ವ್ಯಕ್ತ ಪಡಿಸಿದರು
ಅವರು ಗದಗಿನ ನಿರಂತರ ಪ್ರಕಾಶನ, ಮಕಾನದಾರ ಸಾಹಿತ್ಯ ಪ್ರತಿಷ್ಠಾನ,ಹಾವೇರಿ ಸಾಹಿತಿ ಕಲಾವಿದರ ಬಳಗದ ಆಶ್ರಯ ದಲ್ಲಿ ನೈಸ್ ಅಕಾಡೆಮಿಯಸಭಾಂಗಣ ದಲ್ಲಿ ದಲ್ಲಿ ಜರುಗಿದ ನಿರಂತರ ಸಾಹಿತ್ಯ ಪುರಸ್ಕಾರ 2024 ಸ್ವೀಕರಿಸಿ ಸನ್ಮಾನೋತ್ತರವಾಗಿ ಮಾತನಾಡಿದರು
ಪ್ರತಿ ಕ್ಷೇತ್ರದ ಸಂಸ್ಕೃತಿಕ ಚಹರೆ ಗಳೂ ಬದಲಾವಣೆಯಾಗುತ್ತಿವೆ.ಒಂದು ಪ್ರದೇಶದ ಕಲೆ, ಸಾಹಿತ್ಯ ಸಂಗೀತ ಮಾತ್ರವಲ್ಲ ಬೆಳೆ ನೀರು ಖನಿಜ ಅರಣ್ಯ ಸಂಪನ್ಮೂಲಗಳ ಕುರಿತು ಚಿಂತಿಸ ಬೇಕಾಗಿದ್ದು ಇಂದಿನದ ಅಗತ್ಯ. ಜನರು ಜನರಿಗಾಗಿ ಉಳಿಯಬೇಕು ನಮಗೆ ನಕ್ಷೆ, ಗಡಿ ಗುರುತಿನ ರಾಜ್ಯ ಕ್ಕಿಂತ ಸಂಸ್ಕೃತಿಕ ಕರ್ನಾಟಕ ದ ಅಗತ್ಯತೆ ಇರುವದನ್ನು ಒತ್ತಿ ಹೇಳಿದರು
ಹಿರಿಯ ಬಂಡಾಯ ಸಾಹಿತಿ ಸತೀಶ್ ಕುಲಕರ್ಣಿ ಯವರು ನಿರಂತರ ಪುರಸ್ಕಾರ ಪ್ರದಾನ ಮಾಡಿ ಕವಿ ಶ್ರೀನಿವಾಸ್ ಅವರಿಗೆ ಅಭಿನಂದಿಸುತ್ತ ಕವಿ ಅಳೆದರೂ ಕವಿಯ ಕಾವ್ಯ ಸದಾ ಉಳಿಯುತ್ತದೆ.ಕವಿಯ ನೋವು ನಲಿವು ಗಳನ್ನು ಗುಣಿಸಿ ಭಾಗಿಸಿ ಕಳೆದು ಕೂಡಿಸಿ ಉತ್ತರ ಕಂಡು ಕೊಳ್ಳುವ ಭಾವ ಗಣಿತದ ಲೆಕ್ಕಾಚಾರ ಭಾವ ಪ್ರಧಾನ ಕಾವ್ಯಗಳಲ್ಲಿ ಬಿಂಬಿತ ವಾದಾಗ ಸಾಹಿತ್ಯ ವಲಯಕ್ಕೆ ಪುಷ್ಠಿ ದೊರೆದಂತೆಆಗುತ್ತದೆಂದು ತಿಳಿಸಿ ಶ್ರೀನಿವಾಸ್ ಅವರಿಗೆ ನಿರಂತರ ಪುರಸ್ಕಾರ ದೊರೆತದ್ದು ಅಭಿಮಾನದ ಸಂಗತಿ ಎಂದು ನುಡಿದರು.
ತಸ್ಮಿನ ಪ್ರಕಾಶನ ದಿಂದ ಹಜರೇ ಸಾಬ್ ಬಿ. ನದಾಫ್ ಅವರ ಬದುಕು ಛoದ  ಗೀತ ಮತ್ತು ನಕ್ಷತ್ರ ದಾರಿ ಸಂಕಲನಗಳನ್ನು ಹಿರಿಯ ಜಾನಪದ ವಿದ್ವಾoಸ ಶಂಬು ಬಳಿಗಾರ್ ಸಾಹಿತಿ ಎಚ್ ಉಮೇಶಪ್ಪ ಅವರು ಜನಾ ರ್ಪಣೆ ಗೊಳಿಸಿದರು
ಕವಿ ಪ್ರಕಾಶಕ ಎ ಎಸ್ ಮಕಾನದಾರ ಅವರುಇದೆ  ಸಂದರ್ಭದಲ್ಲಿ ಮಾತನಾಡಿ ಪ್ರಕಾಶನ ಬೆಳೆದು ಬಂದ ಬಗೆ. ಕವಿ ನದಾಫ್ ಅವರ ಒಡನಾಟ ಜೊತೆಗೆ ಶ್ರೀನಿವಾಸ ಅವರ ಬದುಕು ಬರಹ ಸಮಾಜ ಮುಖಿ ಕಾರ್ಯ ಗಳ ಕುರಿತು ಮಾತನಾಡಿ ಸೂಫಿ ಸಂತ, ತತ್ವಪದಕಾರರ ಶರಣ ರ ಆಶಯ ಬಹುತ್ವ ಭಾರತದ ಪರಿಕಲ್ಪನೆ ಯುವ ಬರಹಗಾರರ ಜವಾಬ್ದಾರಿ ಕುರಿತಾಗಿ ಸಭೆಯ ಗಮನ ಸೆಳೆದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ ಹಿರೇಮಠ್ ಅಧ್ಯಕ್ಷ ತೆ ವಹಿಸಿದ್ದರು
ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಡಾ ಪುಷ್ಪ ಶಲವಡಿಮಠ. ಡಾ ಮಹಾದೇವಿ ಕಣವಿ. ಡಾ ಅಂಬಿಕಾ ಹಂಚಾಟೆ. ಪ್ರೊ.ಮಾರುತಿ ಶಿಡ್ಲಾ ಪೂರ.ಸಾಬೀನಾ ಬಾನು ನದಾಫ್. ಲಿಂಗರಾಜ ಸೊಟ್ಟಪ್ಪನವರ್. ಶಿವಕುಮಾರ್ ಚನ್ನಪ್ಪನವರ ಮಾರುತಿ ತಳವಾರ.ನೂರ್ ಅಹ್ಮದ್ ನಾಗನೂರ್. ದೇವರಾಜ್ ಹುಣಸಿ ಕಟ್ಟಿ. ನಾಮದೇವ ಕಾಗದಗಾರ. ಚಂದ್ರ ಶೇಖರ್ ಕುಳೆನೂರ. ಕಲ್ಪಿತ ರಾಣಿ ಶ್ರೀನಿವಾಸ್. ಪ್ರತಿಭಾ ಗಾಂಜಿ.ಈರಣ್ಣ ಬೆಳದಡಿ. ಸಿ ಎಸ್. ಮರಳ ಹಳ್ಳಿ , ಪತ್ರಕರ್ತ ಮಾಲತೇಶ್ಅಂಗುರ್.  ರವಿ. ಹುಚ್ಚನಗೌಡರ ನಿಂಗರಾಜ್  ಸುಳ್ಳಲ್ಲಿ,  ಮೈನುದ್ದಿನ ಮೋರಟಗಿ, ನ್ಯಾಯವಾದಿ ಸಲೀಂ ಜವಳಿ,
ಹಜರೇಸಾಬ ಬಿ. ನದಾಫ್ ಮತ್ತು ಶ್ರೀನಿವಾಸ್ ಅವರ ಕುಟುಂಬದ ಸದಸ್ಯರು , ನ್ಯಾಯಾಲಯದ ಸಿಬ್ಬಂದಿ ವರ್ಗ ಅಭಿಮಾನಿ ಬಳಗ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.
ಶಿಕ್ಷಕ, ಗಾಯಕ ನರಸಿಂಹ ಕೋಮಾರ ಅವರು ನದಾಫ್ ಅವರ ಕವಿತೆಗಳಿಗೆ ರಾಗ ಸಂಯೋಜನೆ ಮಾಡಿ ಪ್ರಸ್ತುತ ಪಡಿಸಿದರು
ಯುವ ಲೇಖಕಿ ಅನಿತಾ ಮಂಜುನಾಥ್ ಮತ್ತು ಗೂಳಪ್ಪ ಅರಳಿಕಟ್ಟಿ  ಕಾರ್ಯಕ್ರಮ ನಿರ್ವಹಿಸಿದರು

Get real time updates directly on you device, subscribe now.

Leave A Reply

Your email address will not be published.

error: Content is protected !!