ನ್ಯಾಯಾಲಯದಲ್ಲಿ ಸುಳ್ಳು ಸಾಕ್ಷಿ ನೀಡಿದ ಆರೋಪಿಗೆ ಶಿಕ್ಷೆ

Get real time updates directly on you device, subscribe now.

ಕೊಪ್ಪಳ : ನ್ಯಾಯಾಲಯದಲ್ಲಿ ಸುಳ್ಳು ಸಾಕ್ಷಿ ನೀಡಿದ ಆರೋಪಿಗೆ ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಖ್ಯ ಆಡಾಳಿತಧಿಕಾರಿಗಳು, ಮುಖ್ಯ ನ್ಯಾಯಿಕ ದಂಡಧಿಕಾರಿಗಳ ನ್ಯಾಯಾಲಯವು ಶಿಕ್ಷೆ ವಿಧಿಸಿದೆ.
ಸಿ.ಸಿ ಸಂಖ್ಯೆ: 70/2018 ಮುಖ್ಯ ಆಡಾಳಿತ   ಅಧಿಕಾರಿಗಳು ಜಿಲ್ಲಾ ಮತ್ತು ಸತ್ರ ನ್ಯಾಯಲಯ ಕೊಪ್ಪಳ ವಿರುದ್ದ ಚಿದಾನಂದಯ್ಯ ತಂದೆ ರುದ್ರಯ್ಯ ಮುಂಡರಗಿ ಮಠ ಸಾ: ಬಿಸರಳ್ಳಿ ಕೊಪ್ಪಳ ಜಿಲ್ಲೆ ಪ್ರಕರಣದಲ್ಲಿ ಈ ಪ್ರಕರಣದ ಆರೋಪಿಯಾದ ಚಿದಾನಂದಯ್ಯ ಇತನು ಮೂಲ ಪ್ರಕರಣ ವಿಶೇಷ ಸಿ.ಸಿ ಸಂಖ್ಯೆ: 69/2011ದಲ್ಲಿ ಫಿರ್ಯಾದಿದಾರನಾಗಿದ್ದು. ತನ್ನ ಫಿರ್ಯಾದಿದಲ್ಲಿ ಬಿಸರಳ್ಳಿದಲ್ಲಿನ  ಜಮೀನು  ಸರ್ವೆನಂ 20/ಅ ಹಿಸ್ಸಾ 2 ರಲ್ಲಿ 1 ಎಕರೆ ಹೊಲವನ್ನುತನ್ನ ಮತ್ತು ವಿಜಯ ತಂದೆ ಆನಂದಯ್ಯರವರಿಗೆ ಮರಣ ಶಾಸನ ಅನ್ವಯ ವಿರಾಸತ್ ವರ್ಗಾವಣೆ ಮಾಡಲು ಹಾಗೂ ಎಲ್ಲರಿಗೂ ಪ್ರತ್ಯೇಕ ಪಹಣಿ ಪತ್ರಕೆಗಳು ಮಾಡಿಕೊಡುವಂತೆ ಗ್ರಾಮ ಲೆಕ್ಕಧಿಕಾರಿ ರವಿ ಶೆಟ್ಟಿ ಮೂಲಕ ಕೊಪ್ಪಳ ತಹಶೀಲ್ದಾರ ಅವರಿಗೆ ಅರ್ಜಿ ಸಲ್ಲಿಸಿದ್ದು, ಅರ್ಜಿ ಸಲ್ಲಿಸಿದ 6 ತಿಂಗಳಾದರೂ ಹಕ್ಕು ಬದಲಾವಣೆ ಪಹಣೆ ಪತ್ರಿಕೆಗಳಾಗದೇ ಕಾರಣ ಗ್ರಾಮ ಲೆಕ್ಕಧಿಕಾರಿಗಳಿಗೆ ಭೇಟಿಯಾದಗ ಕಾನೂನು ಬಾಹಿರವಾಗಿರೂ 5000 ಗ್ರಾಮ ಲೆಕ್ಕಧಿಕಾರಿ ಬೇಡಿಕೆ ಇಟ್ಟಿದ್ದು ಹಾಗೆ ಹಣವನ್ನು ಕೊಟ್ಟರೇ ಮಾತ್ರ ಪಹಣಿ ಪತ್ರಿಕೆಗಳು ಮಾಡಿಕೊಡಲಾಗುವುದೇಂದು ತಿಳಿಸಿದ ಮೇರೆಗೆ ಚಿದಾನಂದಯ್ಯರವರು ಕೊಪ್ಪಳ ಲೋಕಯುಕ್ತ ಪೋಲಿಸ್ ಠಾಣೆಗೆ ದೂರು ಸಲ್ಲಿಸಿದ್ದು ಆ ಮೇರೆಗೆ ಕೊಪ್ಪಳ ಲೋಕಯುಕ್ತ ಪೋಲಿಸರು ಲಂಚ ಪ್ರತಿಬಂಧಕ ಕಾಯ್ದೆ 1988 ಅಡಿಯಲ್ಲಿ ಗ್ರಾಮ ಲೆಕ್ಕಧಿಕಾರಿ ಲಂಚ ಪಡೆಯುತ್ತಿರುವ ಕುರಿತು ಲೋಕಧಿಕಾರಿ ಪೋಲಿಸರು ಟ್ರಾಪ್ ಮಾಡಿದ್ದು, ತನಿಖೆ ಮುಕ್ತಯವಾದ ನಂತರ ಆರೋಪಿತರಾದ ರವಿ ಶೆಟ್ಟಿ ತಂದೆ ವಿರುಪಾಕ್ಷಪ್ಪ ಗ್ರಾಮಧಿಕಾರಿ ಬಿಸರಳ್ಳಿ  ಮತ್ತು ಆತನ ಸಹಾಯಕನಾದ ಮಲ್ಲಯ್ಯ ತಂದೆ ದೊಡ್ಡ ಬಸಯ್ಯ ಸಾ: ಶಿವಪುರ ಜಿಲ್ಲೆ ಕೊಪ್ಪಳ ರವರ ಮೇಲೆ ದೋಷರೊಪಣ ಪಟ್ಟಿ ಸಲ್ಲಿಸಿದ್ದು ಕಾರಣ ಗೌರವನ್ವಿತ ಜಿಲ್ಲಾ ಮತ್ತು ಸತ್ರ ನ್ಯಾಯಲಯ ಕೊಪ್ಪಳ ನ್ಯಾಯಲಯದಲ್ಲಿ ಫಿರ್ಯಾದಿ ಚಿದಾನಂದಯ್ಯ ಇತನು ಸಾಕ್ಷಿ ವಿಚಾರಣೆ ಸಮಯದಲ್ಲಿ ತಾನು ನೀಡಿದ ಫಿರ್ಯಾದಿಗೆ ತದ್ವವಿರುದ್ದವಾಗಿ ಪ್ರತಿಕೂಲ ಸಾಕ್ಷಿ ನುಡಿದಿದ್ದು ಆ ಕಾರಣ ಆರೋಪಿತರನ್ನು ಬಿಡುಗಡೆ ಮಾಡಿದ್ದು ಇರುತ್ತದೆ. ಈ ಬಿಡುಗಡೆ ಆದೇಶದ ವಿರುದ್ದ ಕೊಪ್ಪಳ ಲೋಕಯುಕ್ತ ಪೋಲಿಸರು ಗೌರವನ್ವಿತ ಘನ ಉಚ್ಚ ನ್ಯಾಯಲಯ ಧಾರವಾಡ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದಾಗ, ಗೌರವನ್ವಿತ ಘನ ಉಚ್ಚ ನ್ಯಾಯಲಯ ಆರೋಪಿತರನ್ನು ತಪ್ಪಿಸ್ಥರೆಂದು ತಿರ್ಮಾನಿಸಿ ಆರೋಪಿತರಿಗೆ ಶಿಕ್ಷೆ ವಿದಿಸಿದ್ದು ಮತ್ತು ಫಿರ್ಯಾದಿದಾರ ಚಿದಾನಂದಯ್ಯ ಇತನು ವಿರುದ್ದ ಸುಳ್ಳು ಸಾಕ್ಷಿ ನೀಡಿದ್ದಕ್ಕೆ ಆತನ ವಿರುದ್ದ ವಿಚಾರಣೆ ಕೈಗೊಂಡು  ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು  ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕೊಪ್ಪಳ ರವರಿಗೆ ಆದೇಶ ನೀಡಿದ್ದು ಇರುತ್ತದೆ. ಗೌರವನ್ವಿತ ಉಚ್ಚ ನ್ಯಾಯಲಯದ ಆದೇಶದ ಮೇರೆಗೆ ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಲಯದ ಮುಖ್ಯ ಆಡಾಳಿತಧಿಕಾರಿಗಳು ಮುಖ್ಯ ನ್ಯಾಯಿಕ ದಂಡಧಿಕಾರಿಗಳು ನ್ಯಾಯಾಲಯ ಕೊಪ್ಪಳದಲ್ಲಿ ದೂರು ಸಲ್ಲಿಸಿದ ಮೇರೆಗೆ ಗೌರವನ್ವಿತ ನ್ಯಾಯಧೀಶರಾದ  ಹಿರಿಯ ಸಿ.ಜೆ. ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿಗಳಾದ ಮಲಕಾರಿ ರಾಮಪ್ಪ ಒಡೆಯರ್ ಅವರು ನ್ಯಾಯಲಯದಲ್ಲಿ ಸುಳ್ಳು ಸಾಕ್ಷಿ ನೀಡಿದ ಆರೋಪಿ ಚಿದಾನಂದಯ್ಯ ವಿರುದ್ದ ಪ್ರಕರಣದ ವಿಚಾರಣೆ ಕೈಗೊಂಡು ಸಾಕ್ಷ್ಯದಾರಗಳ ಮೇಲೆ ಆರೋಪಿಯನ್ನು ದೋಷಿಯೆಂದು ಪರಿಗಣಿಸಿ, ಆರೋಪಿತನಿಗೆ ಸುಳ್ಳು ಸಾಕ್ಷ್ಯ ನೀಡಿದ ಅಪರಾಧಕ್ಕೆ 3 ವರ್ಷ ಕಾರಗೃಹ ವಾಸದ ಶಿಕ್ಷೆ ಮತ್ತು ರೂ. 10000 ದಂಡ ವಿಧಿಸಿದ ಆದೇಶ 2024ರ ಅಕ್ಟೋಬರ್ 21ರಂದು ತೀರ್ಪು ನೀಡಿದ್ದಾರೆ.
ರಾಜ್ಯ ಸರ್ಕಾರದ ಪರವಾಗಿ ಕೊಪ್ಪಳ ಸಿ.ಜೆ.ಎಂ ನ್ಯಾಯಲಯದ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾದ ವಸಂತ ಅವರು ವಾದ ಮಂಡಿಸಿರುತ್ತಾರೆ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!