ಅ. 24ನೇ ತಾರಿಖೀನ ಅಧಿವೇಶನದಲ್ಲಿ ಒಳಮೀಸಲಾತಿಯನ್ನು ಜಾರಿ ಮಾಡಿ

Get real time updates directly on you device, subscribe now.

ಕೊಪ್ಪಳ. ಅ. 21. ಕರ್ನಾಟಕ ರಾಜ್ಯದಲ್ಲಿ ತಕ್ಷಣವೇ ಪರಿಶಿಷ್ಟ ಜಾತಿಯಲ್ಲಿನ ಒಳಮೀಸಲಾತಿಯನ್ನು ಅಕ್ಟೋಬರ 24ನೇ ತಾರಿಖೀನ ಅಧಿವೇಶನದಲ್ಲಿ ಜಾರಿ ಮಾಡಬೇಕೆಂದು ಘನ ಸರಕಾರಕ್ಕೆ ವೈ ಜಯರಾಜ್ ವಕೀಲರು ನಗರದಲ್ಲಿ ಸೋಮುವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

“ಮಾನ್ಯ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಆಗಸ್ಟ್-1, 2024 ರ ಪ್ರಕಾರ ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳು ಒಳಗೊಂಡಿದ್ದು ಇರುತ್ತದೆ, ಅತ್ಯಂತ ಹಿಂದುಳಿದ ಜಾತಿಯಾದ ಮಾದಿಗ, ಮತ್ತು ಛಲುವಾದಿ ಮತ್ತು ಇವುಗಳ ಉಪಜಾತಿಗಳು ಅಸ್ಪೃಶ್ಯ ಸಮುದಾಯ ವಾಗಿರುತ್ತದೆ. ಈಗಿರುವ ಮೀಸಲಾತಿಯಲ್ಲಿ ಸದರಿ ನಮ್ಮ ಜನಾಂಗಕ್ಕೆ ಸರಿಯಾದ ರೀತಿಯ ಸೌಲಭ್ಯಗಳು ದೊರಕದೇ ಇರುವುದರಿಂದ 30 ವರ್ಷಗಳಿಂದ ನಿರಂತರವಾಗಿ ಸಾಕಷ್ಟು ಹೋರಾಟಗಳನ್ನು ಮಾಡಿದ್ದು ಇರುತ್ತದೆ, ಹಲವಾರು ಜನ ಪ್ರಾಣ ತೆತ್ತಿದ್ದಾರೆ, ಎಷ್ಟೋ ಕುಟುಂಬಗಳು ತಮ್ಮ ಮಕ್ಕಳನ್ನು ಕಳೆದುಕೊಂಡಿವೆ..ಆಯಾ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ವರ್ಗೀಕರಣ ಮಾಡುವುದಾಗಿ ಮಾನ್ಯ ಎಸ್.ಎಂ.ಕೃಷ್ಣ ಮಾಜಿ ಮುಖ್ಯಮಂತ್ರಿಯವರು ಕಾಂಗ್ರೆಸ್ ಸರಕಾರದಲ್ಲಿ ನಿವೃತ್ತ ನ್ಯಾಯಮೂರ್ತಿ ಸದಾಶಿವ ಆಯೋಗ ರಚಿಸಿ ಸದರಿ ಆಯೋಗವು ರಾಜ್ಯಾದ್ಯಂತ ಪರಿಶಿಷ್ಟ ಜಾತಿಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ ರಾಜ್ಯ ಸರಕಾರಕ್ಕೆ ಸದಾಶಿವ ಆಯೋಗದ ವರದಿ ಸಲ್ಲಿಸಿ ಅವರಲ್ಲಿ ಅತ್ಯಂತ ಸರಕಾರಿ ಸೌಲಭ್ಯ ವಂಚಿತ ಸಮುದಾಯವಾದ ಮಾದಿಗರಿಗೆ /ಮಾದರ(ಅಸ್ಪೃಶ್ಯ) ಮತ್ತು ಮಾದರ ಮತ್ತು ಅದರ ಉಪ ಸಮುದಾಯಕ್ಕೆ ಚಲವಾದಿ ಮತ್ತು ಅದರ ಉಪ ಸಮುದಾಯಕ್ಕೆ ಶೇ.6. ಹಾಗೂ ಚಲುವಾದಿ ಸಮುದಾಯಕ್ಕೆ ಶೇ.5 ಹಾಗೂ ಸ್ಪರ್ಶ ಸಮುದಾಯಗಳಾದ ಭೋವಿ, ಲಂಬಾಣಿ ಮುಂತಾದ ಸಮುದಾಯಗಳಿಗೆ ಶೇ.3 ಹಾಗೂ ಇನ್ನಿತರ ಅಲೆಮಾರಿ ಸಮುದಾಯಗಳಿಗೆ ಶೇ.1ನ್ನು ನಿಗದಿ ಮಾಡಿ ರಾಜ್ಯ ಸರಕಾರಕ್ಕೆ ಸದಾಶಿವ ಆಯೋಗದ ಸಮಿತಿ ವರದಿ ನೀಡಿದೆ.
ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಸ್ತಿತ್ವದಲ್ಲಿ ಇದೆ. ಈಗ ಭಾರತ ಸರ್ವೋಚ್ಚ ನ್ಯಾಯಾಲಯವು ಒಳ ಮೀಸಲಾತಿಯನ್ನು ಅಧ್ಯಯನ ಮಾಡಿ ಒಳ ಮೀಸಲಾತಿಯು ಕಾನೂನು ಬದ್ಧ ಎಂದು ಹೇಳಿ ಆದೇಶ ಹೊರಡಿಸಿ ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ನೀಡಬೇಕೆಂದು ಅದೇಶಿಸಿ ಅದನ್ನು ಆಯಾ ರಾಜ್ಯ ಸರಕಾರಗಳು ಜಾರಿಗೊಳಿಸುವ ಸಂಪೂರ್ಣ ಅಧಿಕಾರ ಮತ್ತು ಜವಾಬ್ದಾರಿ ಆಯಾ ರಾಜ್ಯ ಸರ್ಕಾರಕ್ಕೆ ಇರುತ್ತದೆ ಎಂದು ಆಗಸ್ಟ್-1, 2024 ರಂದು ಆದೇಶ ನೀಡಿದೆ. ಹೀಗಿದ್ದಾಗೂ ರಾಜ್ಯದ ಕರ್ನಾಟಕ ಕಾಂಗ್ರೆಸ್ ಸರಕಾರವು ವಿಳಂಬ ನೀತಿ ಧೋರಣೆ ಅನುಸರಿಸಿ ಅಸ್ಪೃಶ್ಯ ಸಮುದಾಯಗಳಿಗೆ ವಂಚನೆ ಎಸಗುತ್ತಿದೆ. ಹಿಗಾಗಿ ಮಾನ್ಯ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ತೀರ್ಪುಗೆ ತಾವು ಗೌರವ ಕೊಟ್ಟು ಜಾರಿ ಮಾಡಬೇಕು.
ರಾಜ್ಯದಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ತಕ್ಷಣವೇ ಸುಗ್ರೀವಾಜ್ಞೆಯ ಮೂಲಕ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿಗೊಳಿಸಬೇಕು. ಹಾಗೂ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿಯಾಗುವವರೆಗೆ ಯಾವುದೇ ನೇಮಕಾತಿಗಳನ್ನು ಮಾಡದಂತೆ ತಕ್ಷಣದಿಂದ ಸ್ಥಗಿತಗೊಳಿಸಬೇಕು. ಸುಪ್ರೀಂ ಕೋರ್ಟಿನ ಆದೇಶದ ಹೊರಡಿಸಿ ಒಂದು ತಿಂಗಳ ಗತಿಸಿದ ನಂತರ ಸಲ್ಲಿಕೆಯಾದ ಕ್ಯೂರೆಟಿವ್ ಅರ್ಜಿಯನ್ನು ಕೂಡ ವಜಾ ಗೊಳಿಸಿ ಹಿಂದಿನ ಆದೇಶ ಮತ್ತು ನಿರ್ದೇಶನ ನೀಡಿದ್ದು ಈ ಕೂಡಲೇ ಒಳ ಮೀಸಲಾತಿ ಜಾರಿಯಾಗಬೇಕೆಂದು ಒತ್ತಾಯಿಸಿದರು.ಸುದ್ದಿ ಗೋಷ್ಟಿಯಲ್ಲಿ,ಶಿವಾನಂದ ಹೊಸಮನಿ, ವಕೀಲರು D M ಪೂಜಾರ, ವಕೀಲರು V G ಕಟ್ಟಿಮನಿ, ವಕೀಲರು ಪ್ರಕಾಶ ಹಾದಿಮನಿ, ವಕೀಲರು ಸಂತೋಷ ಕವಲೂರ, ವಕೀಲರು ಶಿವುಕುಮಾರ ದೊಡ್ಡಮನಿ, ವಕೀಲರು ಕುಷ್ಟಗಿ ಮಾರುತಿ ಚಾಮಲಾಪುರ, ವಕೀಲರು ರಮೇಶ ಗಾಯಕವಾಡ, ವಕೀಲರು ಕುಷ್ಟಗಿ ಉಪಸ್ಥಿತರಿದ್ದರು.

 

Get real time updates directly on you device, subscribe now.

Comments are closed.

error: Content is protected !!