ಮಣಿಪುರದ ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ದೌರ್ಜನ್ಯಕ್ಕೆ ಖಂಡನೆ

Get real time updates directly on you device, subscribe now.


– ಆರ್. ಚನ್ನಬಸವ

ಗಂಗಾವತಿ: ಮಣಿಪುರದಲ್ಲಿ ದಲಿತ ಬುಡಕಟ್ಟು ಆದಿವಾಸಿ ಇಬ್ಬರು ಮಹಿಳೆಯರ ಮೇಲೆ ಕಾಂಗ್‌ಪೊಕ್ಷಿ ಜಿಲ್ಲೆಯ ಕಾಮುಕರ ಗುಂಪೊಂದು ದಲಿತ ಬುಡಕಟ್ಟು ಆದಿವಾಸಿ ಅಮಾಯಕ ಇಬ್ಬರು ಮಹಿಳೆಯರ ಮೇಲೆ ಕಾಮುಕ ಗುಂಪೊಂದು ಅತ್ಯಾಚಾರ ಮಾಡಿದ್ದಲ್ಲದೆ, ಹಾಡುವಾಗಲೇ ಮಹಿಳೆಯರನ್ನು ಬೆತ್ತಲೆ ಮಾಡಿ ರಸ್ತೆಗಳ ಉದ್ದಗಲಕ್ಕೂ ಎಳೆದೊಯ್ಯುತ್ತಿದ್ದಾಗ ಮಹಿಳೆಯರು ನಮ್ಮನ್ನು ಬಿಟ್ಟುಬಿಡಿ ಎಂದು ಕಾಮುಕರ ಕಾಲಿಗೆ ಬಿದ್ದು ಪರಿಪರಿಯಾಗಿ ಬೇಡಿಕೊಂಡರು ಸಹ ಕಾಮುಕ ಆರೋಪಿಗಳ ಗುಂಪೊಂದು ಬಿಡಲಾರದೆ ಇಂಥ ದೃಶ್ಯವನ್ನು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುತ್ತಾರೆ ಎಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಕೊಪ್ಪಳ ಜಿಲ್ಲಾ ಪತ್ರಿಕಾ ಮಾದ್ಯಮ ಸಲಹೆಗಾರರಾದ ಆರ್. ಚನ್ನಬಸವ ಪ್ರಕಟಣೆಯಲ್ಲಿ ಖಂಡಿಸಿದ್ದಾರೆ.
ಅವರು ಇಂದು ಮಣಿಪುರದಲ್ಲಿ ನಡೆದಿರುವ ಅಮಾನವೀಯ ಘಟನೆ ಖಂಡಿಸಿ ಗಂಗಾವತಿ ತಹಶೀಲ್ದಾರರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಮಾತನಾಡುತ್ತಿದ್ದರು. ಈ ಘಟನೆ ನೋಡಿದರೆ ಭಾರತ ದೇಶದ ಇಡೀ ೧೪೦ ಕೋಟಿ ನಾಗರಿಕರು ತಲೆತಗ್ಗಿಸುವಂಥಹದ್ದಲ್ಲದೆ ಇಡೀ ಮನುಕುಲವೇ ನಾಚಿಕೆಪಡುವಂತಾಗಿದೆ. ದಲಿತ ಬುಡಕಟ್ಟು ಸಮುದಾಯದ ಇಬ್ಬರು ಮಹಿಳೆಯರು ಅನುಭವಿಸಿದ ನರಕಯಾತನೆ, ಅವಮಾನಕ್ಕೆ ಕಾರಣರಾದ ಎಲ್ಲಾ ಕಾಮುಕರನ್ನು ಕೂಡಲೇ ಪತ್ತೆಹಚ್ಚಿ ಬಂಧಿಸಿ, ಅವರಿಗೆ ಜೀವಾವಧಿ ಅಥವಾ ಮರಣದಂಡನೆ ಶಿಕ್ಷೆ ವಿಧಿಸಿ ಹಾಗೂ ಆರೋಪಿಗಳ ಆಸ್ತಿಪಾಸ್ತಿಯನ್ನು ಸರಕಾರ ಕೂಡಲೇ ವಶಕ್ಕೆ ತೆಗೆದುಕೊಳ್ಳಬೇಕು ಹಾಗೂ ಅನ್ಯಾಯಕ್ಕೆ ಒಳಗಾದಂತಹ ದಲಿತ ಮಹಿಳೆಯರಿಗೆ ಸರಕಾರಿ ಉದ್ಯೋಗ ನೀಡಬೇಕೆಂದು ಕರ್ನಾಟಕ ದಲಿತ ರಕ್ಷಣ ವೇದಿಕೆ ಜಿಲ್ಲಾ ಸಮಿತಿ ಕೊಪ್ಪಳ ರಾಷ್ಟ್ರಪತಿಗಳಲ್ಲಿ ವಿನಂತಿಸಿ, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕಾಯ್ದೆಗಳನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಕೊಪ್ಪಳ ಉಸ್ತುವಾರಿಗಳಾದ ಶಂಕರ ನಂದಿಹಾಳ, ಕೊಪ್ಪಳ ಜಿಲ್ಲಾಧ್ಯಕ್ಷರಾದ ವಸಂತಕುಮಾರ ಕಟ್ಟಿಮನಿ, ಪದಾಧಿಕಾರಿಗಳಾದ ಯಮನೂರ ಭಟ್, ಹುಲ್ಲೇಶ ಕೊಜ್ಜಿ, ಅಜಯಕುಮಾರ, ಜಂಬುನಾಥ, ಬಸವರಾಜ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: