ನಾಳೆ ಕಿನ್ನಾಳ್‌ರಾಜ್ ನಿರ್ದೇಶನದ ಚಿತ್ರ ’ಸಿಂಹರೂಪಿಣಿ’

0

Get real time updates directly on you device, subscribe now.

ತೆಲುಗು ನಟ ಸುಮನ್ ಜೊತೆ ಇಂಗಳಗಿ ನಾಗರಾಜ್ ನಟನೆ

ಗಂಗಾವತಿ: ಶ್ರೀ ಚಕ್ರಫಿಲಮ್‌ಸನ, ನಿರ್ಮಾಪಕ ಕೆ.ಎಮ್.ನಂಜುಂಡೇಶ್ವರ ಕಥೆ ಹೆಣೆದಿರುವ, ಕೆಜಿಎಫ್ ಲಿರೀಕ್ಸ್ ಖ್ಯಾತಿಯ ಕೊಪ್ಪಳದ ಕಿನ್ನಾಳ್‌ರಾಜ್ ನಿರ್ದೇಶಿಸಿರುವ, ಬಹು ಭಾಷಾ ಭರ್ಜರಿ ತಾರಾಗಣದ ಕಮರ್ಷಿಯಲ್ ಟಚ್‌ನ ’ಸಿಂಹರೂಪಿಣಿ’ ಅದ್ಧೂರಿ ಚಲನಚಿತ್ರ ರಾಜ್ಯದಾದ್ಯಂತ ತೆರೆಕಾಣಲಿದ್ದು ಗಂಗಾವತಿಯ ಅಮರಚಿತ್ರ ಮಂದಿರದಲ್ಲಿ ನಾಳೆ ಅಕ್ಟೋಬರ್ ೧೭ ಶುಕ್ರವಾರ ಪ್ರದರ್ಶನಗೊಳ್ಳಲಿದೆ. ಪ್ರತಿದಿನ ನಾಲ್ಕು ಆಟಗಳ ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ.
ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಹಾಗು ನಿರ್ದೇಶನ ಕಿನ್ನಾಳ್ ರಾಜ್‌ರವರದಾಗಿದ್ದು, ಪ್ರಮುಖ ಪಾತ್ರಗಳಲ್ಲಿ ತೆಲುಗು ನಟ ಸುಮನ್, ಹರಿಷ್‌ರೈ, ನಿನಾಸಂ ಅಶ್ವಥ್ ಇದ್ದಾರೆ. ನಾಯಕನಾಗಿ ಸಾಗರ್, ನಾಯಕಿಯಾಗಿ ಅಂಕಿತಾ ಗೌಡ, ವಿಶೇಷ ಪಾತ್ರದಲ್ಲಿ ಯಶಸ್ವಿನಿ, ಎಸ್.ಶೆಟ್ಟಿ, ದಿನೇಶ್ ಮಂಗಳೂರು, ಮಲ್ಲಿಕಾರ್ಜುನ ಕ್ಯಾದಿಗುಪ್ಪ, ರಂಗಭೂಮಿ ಕಲಾವಿದ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗಂಗಾವತಿ ತಾಲೂಕು ಅಧ್ಯಕ್ಷ ಗಂಗಾವತಿ ನಾಗರಾಜ್ ಇಂಗಳಗಿ ನಟಿಸಿದ್ದಾರೆ.
ಮಲ್ಲಿಕಾರ್ಜುನ್ ಕ್ಯಾದಿಗುಪ್ಪಾ, ದಿನೇಶ್ ಹೆಚ್.ಡಿಕೋಟೆ, ರಾಜಶೇಖರ್ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದು
ಆಕಾಶ ಪರ್ವ ಸಂಗೀತ ನೀಡಿದ್ದು, ಕಿರಣ ಕುಮಾರ್ ಛಾಯಾಗ್ರಹಣ, ಸಂಕಲನ ವೆಂಕಿ ಡಿಯುವಿ, ಅರುಣ್ ರೈ ಹರಿಕೃಷ್ಣ ನೃತ್ಯ ಸಂಯೋಜನೆ ಮಾಡಿದ್ದಾರೆ. ಥ್ರಿಲ್ಲರ್ ಮಂಜು ಸಾಹಸವಿದೆ. ನೂರಾರು ಕಲಾವಿದರಿಗೆ ಚಿತ್ರದಲ್ಲಿ ಅವಕಾಶ ಒದಗಿಸಲಾಗಿದೆ.
ಜೆಸ್ಕರಣ ಸಿಂಗ್, ನಾ ಡ್ರೈವರಾ ಸಾಂಗ್ ಖ್ಯಾತಿಯ ಮಾಳು ನಿತ್ನಾಳ್, ರಾಜೇಶ್ ಕೃಷ್ಣನ್, ರವಿ ಬಸೂರು, ಸಂತೋಷ್ ವೆಂಕಿ ಹಾಗು ಸಚಿನ್ ಅರಬಳ್ಳಿ ಸೇರಿ ಉತ್ತರ ಕರ್ನಾಟಕದ ಅನೇಕರಿಗೆ ಚಿತ್ರದಲ್ಲಿ ಅವಕಾಶ ಒದಗಿಸಲಾಗಿದ್ದು, ನಿರ್ಮಾಪಕರು ಯಾವುದೇ ಸನ್ನಿವೇಶಕ್ಕೆ ರಾಜೀಯಾಗದೆ ಆಸಕ್ತಿಯಿಂದ ಚಿತ್ರ ನಿರ್ಮಿಸಿದ್ದು, ಕರ್ಮಷಿಯಲ್ ಟಚ್ ಈ ಚಿತ್ರವು, ರೋಮಾಂಚನಕಾರಿ ಸನ್ನವೇಶಗಳ ಮೂಲಕ ಪ್ರೇಕ್ಷಕರ ಮನಗೆಲ್ಲಲಿದೆ.

 
ವಾಸ್ತವ ಬಿಂಬಿಸಿದ್ದೇವೆ: ಕಿನ್ನಾಳ್‌ರಾಜ್
ದೇವಿಯ ಆಶೀರ್ವಾದದಿಂದ ಚಿತ್ರವನ್ನು ನಡೆಸಿಕೊಂಡು ಹೋಗಿದೆ. ದೇವರನ್ನು ನಂಬಿಸುವ ಪ್ರಯತ್ನ ಮಾಡಿಲ್ಲ. ನಿಜವಾದ ಘಟನೆಗಳನ್ನು ತೋರಿಸಿದ್ದೇವೆ. ಅನೇಕ ರಂಗಭೂಮಿ ನಟ್ರು ಸೇರಿ ಖ್ಯಾತ ನಟರು ಚಿತ್ರದಲ್ಲಿ ಇದ್ದಾರೆ. ಎಲ್ಲ ಚಿಕ್ಕಪುಟ್ಟ ಪಾತ್ರಗಳು ಗುಣದಿಂದಾಗಿ ಚಿತ್ರದುದ್ದಕ್ಕೂ ಎದ್ದು ಕಾಣುತ್ತವೆ, ಮೈ ನವಿರೇಳೆಸುವ ಚಿತ್ರವಾಗಿದ್ದು, ರೋಮಾಂಚನ ಘಟನೆಗಳಿವೆ ಎಂದು ಚಿತ್ರದ ಬಗೆಗೆ ನಿರ್ದೇಶಕ ಕಿನ್ನಾಳ್‌ರಾಜ್ ವಿಶ್ವಾಸ ವ್ಯಕ್ತಪಡಿಸುತ್ತಾರೆ.

 

Get real time updates directly on you device, subscribe now.

Leave A Reply

Your email address will not be published.

error: Content is protected !!