೫ ನೇಯ ಮಹಾಸಮ್ಮೇಳನ ಯಶಸ್ವಿ
ಬ್ಯಾಂಕ್‌ಗಳ ಮೂಲಕ ಎಲ್‌ಐಸಿ ಪಾಲಿಸಿಗಳ ಮಾರಾಟ ಗ್ರಾಹಕರಿಗೆ ಮಾರಕ:ಎಲ್.ಮಂಜುನಾಥ
*ಖಾಸಗಿ ವಿಮಾ ಕಂಪನಿಗಳ ತಾಳಕ್ಕೆ ಐಆರ್‌ಡಿಎ ಕುಣಿಯಬಾರದು
*೫೦ ಸಾವಿರ, ಲಕ್ಷ ರೂ.ಗಳ ಪಾಲಿಸಿ ಮರಳಿ ಜಾರಿಗೆ ಆಗ್ರಹು
ಗಂಗಾವತಿ: ಬ್ಯಾಂಕುಗಳು ಹಾಗೂ ಖಾಸಗಿ ಹಣಕಾಸು(ಮೈಕ್ರೋಫೈನಾನ್ಸ್‌ಗಳು) ಸಂಸ್ಥೆಗಳ ಮೂಲಕ ಎಲ್‌ಐಸಿ ಪಾಲಿಸಿಗಳ ಮಾರಾಟ ಗ್ರಾಹಕರಿಗೆ ಮಾರಕವಾಗಿದ್ದು ಒಂದೇ ವರ್ಷದಲ್ಲಿ ಪಾಲಿಸಿಗಳು ಶೇ.೪೦ ರಷ್ಟು ಗ್ರಾಹಕರ ಪಾಲಿಸಿಗಳು ರದ್ದಾಗಿದ್ದು ಎಲ್‌ಐಸಿ ಪ್ರತಿನಿಧಿಗಳ ಮೂಲಕ ಮಾಡಿದ ಪಾಲಿಸಿಗಳ ರದ್ದಾಗುವಿಕೆ ಪ್ರಮಾಣ ಶೇ.೧೦ ರಷ್ಟಿದ್ದು ಗ್ರಾಹಕರು ಬ್ಯಾಂಕುಗಳು ಮತ್ತು ಫೈನಾನ್ಸ್ ಕಂಪನಿಗಳ ಸಾಲದ ಆಸೆಗೆ ಬಲಿಯಾಗಿ ಪಾಲಿಸಿಗಳಲ್ಲಿ ಹಣ ಕಳೆದುಕೊಳ್ಳದಂತೆ ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳ ಸಂಘದ(ಲಿಖೈ) ರಾಷ್ಟ್ರೀಯ ಕಾಯಾಧ್ಯಕ್ಷ ಎಲ್ .ಮಂಜುನಾಥ ಹೇಳಿದರು.
ಅವರು ನಗರದ ಕನ್ನಡ ಜಾಗೃತಿ ಭವನದ ಆವರಣದಲ್ಲಿ ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳ ಸಂಘದ(ಲಿಖೈ) ೫ ನೇ ಮಹಾಸಮ್ಮೇಳನಕ್ಕೆ ಜ್ಯೋತಿ ಬೆಳಗಿಸಿ ಚಾಲನೆ ನೀಡಿ ಮಾತನಾಡಿದರು.
ಪ್ರಸ್ತುತ ಎಲ್‌ಐಸಿ ೫೪ ಲಕ್ಷ ಕೋಟಿಗಳ ಆಸ್ತಿ ಮತ್ತು ವ್ಯವಹಾರ ನಡೆಸುತ್ತಿದ್ದು ಕೇಂದ್ರ ಸರಕಾರ ಹಾಗೂ ಎಲ್‌ಐಸಿ ಆಡಳಿತ ಮಂಡಳಿ ಪ್ರತಿನಿಧಿಗಳ ಕಮೀಷನ್ ಹಾಗೂ ಗ್ರಾಹಕರ ಬೋನಸ್ ಹೆಚ್ಚು ಮಾಡುತ್ತಿಲ್ಲ. ದೇಶದಲ್ಲಿರುವ ಖಾಸಗಿ ವಿಮಾ ಕಂಪನಿಗಳ ಒತ್ತಡಕ್ಕೆ ಮಣದು ವಿಮಾ ನಿಯಂತ್ರಣ ಮಂಡಳಿ ರಚನೆ ಮಾಡಿ ಪದೇ ಪದೇ ಎಲ್‌ಐಸಿ ಮೇಲೆ ಗಧಾ ಪ್ರಹಾರ ಮಾಡುವ ಮೂಲಕ ಎಲ್‌ಐಸಿ ಪ್ರತಿನಿಧಿಗಳು ಮತ್ತು ಗ್ರಾಹಕರನ್ನು ಶೋಷಣೆ ಮಾಡಲಾಗುತ್ತಿದೆ. ಡಿಜಿಟಲೀಕರಣ ಹಾಗೂ ಇತರೆ ಕೆಲ ನೆಪದಲ್ಲಿ ೫೦ ಸಾವಿರ ಮತ್ತು ಒಂದು ಲಕ್ಷ ರೂ.ಗಳ ಪಾಲಿಸಿ ತೆಗೆದು ಎರಡು ಲಕ್ಷ ಪಾಲಿಸಿಗಳನ್ನು ಉಳಿಸಲಾಗಿದೆ. ಕಡ್ಡಾಯವಾಗಿ ಮೇಲ್, ಆಧಾರ, ಬ್ಯಾಂಕ್ ದಾಖಲಾತಿ ಮತ್ತು ಪಾನಕಾರ್ಡ ನಿಯಮ ರೂಪಿಸಿ ಜನಸಾಮಾನ್ಯರು ಮತ್ತು ಅನಕ್ಷರಸ್ಥರಿಗೆ ವಿಮಾ ಸೌಕರ್ಯ ಇಲ್ಲದಂತೆ ಮಾಡುವ ಹುನ್ನಾರು ನಡೆಸಿ ಖಾಸಗಿ ವಿಮಾ ಕಂಪನಿಗಳ ತಾಣಕ್ಕೆ ಕುಣಿದು ದೇಶದ ಜನರ ಹಣ ಕಾಪಾಡುವ ಎಲ್‌ಐಸಿಯನ್ನು ಶಕ್ತಿ ಹೀನ ಮಾಡುವ ಕೇಂದ್ರ ಸರಕಾರದ ವಿರುದ್ಧ ಲಿಖೈ ಸಂಗಟನೆ ನಿರಂತರವಾಗಿ ಹೋರಾಟ ನಡೆಸುತ್ತಿದೆ. ಮಾರಕ ವಿಮಾ ಬಿಲ್ ಪಾರ್ಲಿಮೆಂಟಿನಲ್ಲಿ ಮಂಡನೆಗೆ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿದಂತೆ ಈಗ ಎಲ್‌ಐಸಿ ಉಳಿಸಲು ಹೋರಾಟ ನಡೆಸುವ ಅಗತ್ಯವಿದೆ. ಕೇರಳ ಮಾದರಿಯಲ್ಲಿ ಎಲ್‌ಐಸಿ ಪ್ರತಿನಿಧಿಗಳಿಗೆ ಮಾಶಾಸನ ಕೊಡುವ ಕುರಿತು ರಾಜ್ಯ ಸರಕಾರ ಸ್ಪಂದಿಸಿದ್ದು ಶೀಘ್ರ ಕಾಯ್ದೆ ಜಾರಿಯಾಗುವ ಸಾಧ್ಯತೆ ಇದ್ದು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ್ ಅಂತಿಮ ಸಭೆ ನಡೆಸಲಿದ್ದಾರೆಂದರು.
ಕಾರ್ಯಕ್ರಮದಲ್ಲಿ ಲಿಖೈ ಸಂಘಟನೆಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಎಲ್.ಮಂಜುನಾಥ, ವಿಭಾಗೀಯ ಅಧ್ಯಕ್ಷ ಶ್ರೀನಿವಾಸ,ವ್ಯವಸ್ಥಾಪಕ ಕಲೀಲ್ ಆಹಮದ್,ವಿಶ್ವನಾಥ ಹೂಗಾರ,ಫಣಿರಾಜ್,ರಾಮಣ್ಣ ಕುರಿ,
ಪದಾಧಿಕಾರಿಗಳಾದ ಕುಬೇರಪ್ಪ, ಬಷೀರ್,ಭಾರತಿ,ಸರಸ್ವತಿ, ವಿಜಯಲಕ್ಷ್ಮಿ,ಬಸವರಾಜ ಸಜ್ಜನ್,ಕೆ.ನಿಂಗಜ್ಜ, ಎಂ.ನಿರುಪಾದಿ ಬೆಣಕಲ್, ತಬರೀಶ,ಕಾಜವಲಿ ಸೇರಿ ಎಲ್ಲಾ ಪ್ರತಿನಿಧಿಗಳು,ಅಧಿಕಾರಿಗಳು, ವಿಮಾ ನೌಕರರು ಸೇರಿ ಅನೇಕರಿದ್ದರು.
ನೂತನ ಪದಾಧಿಕಾರಿಗಳ ಆಯ್ಕೆ:ಲಿಖೈ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಸ್ಥಳೀಯ ಕಾರ್ಯಕಾರಿ ಮಂಡಳಿಯ ಶಿಫಾರಸ್ಸಿನ ಮೇರೆಗೆ ರಾಯಚೂರು ವಿಭಾಗೀಯ ಮಂಡಳಿ ಘೋಷಣೆ ಮಾಡಿದೆ. ಗೌರವಾಧ್ಯಕ್ಷರು: ?ಡಕ್ಷರಿ ಸುಂಕದ, ಅಧ್ಯಕ್ಷರಾಗಿ ಎ.ಎಂ. ಮಂಜುನಾಥ ಸ್ವಾಮಿ, ಕಾರ್ಯದರ್ಶಿಯಾಗಿ ಹುಸೇನ್ ಭಾ? ಜೆ,
ಖಜಾಂಚಿಯಾಗಿ ಪಂಪಣ್ಣ ಪಟ್ಟಣ ಶೆಟ್ಟಿ, ಉಪಾಧ್ಯಕ್ಷರಾಗಿ ವಿರೂಪಾಕ್ಷಗೌಡ ಆರಾಳ, ಶಂಕ್ರಪ್ಪ ಗದ್ದಿಗೇರಿ, ಜೋಶಿ ಕನಕಗಿರಿ,ಮೆಹಬೂಬ್ ಹುಸೇನ್ ಕನಕಗಿರಿ, ಸಹ ಕಾರ್ಯದರ್ಶಿಯಾಗಿ ಮೈಲಾರಪ್ಪ ವಾಲಿಕರ್. ಹುಸೇನ್ ಬಾ?, ವೀರೇಶ್ ಕಾಂಬಳೆ, ವೀರನಗೌಡ ಸಿದ್ದಾಪುರ, ಸಂಘಟನಾ ಕಾರ್ಯದರ್ಶಿಯಾಗಿ ಭಾರತಿ,ವಿಜಯಲಕ್ಷ್ಮಿ ಕೇಸರಟ್ಟಿ
ಹಾಗೂ ಸಲಹಾ ಸಮಿತಿಗೆ ಕುಬೇರಪ್ಪ, ಬಸವರಾಜ್ ಸಜ್ಜನ್, ನಿರುಪಾದಿ ಬೆಣಕಲ್,ಕೆ.ನಿಂಗಜ್ಜ, ದುರ್ಗಾ ಪ್ರಸಾದ್, ಶ್ರೀನಿವಾಸ್ ರಾವ್ ಕುಲಕರ್ಣಿ,ಖಾಜಾವಲಿ
ಹೆಚ್ ಈಶ್ವರ್, ಆಂತರಿಕ ಲೆಕ್ಕಪರಿಶೋಧಕರಾಗಿ ರಾಘವೇಂದ್ರ ದೇಸಾಯಿ ಇವರನ್ನು ಆಯ್ಕೆ ಮಾಡಲಾಗಿದೆ.
Comments are closed.