ದಾಖಲಾತಿ ಪರಿಶೀಲನೆ ಅವಧಿ ವಿಸ್ತರಣೆ : ಸ್ಥಿರಾಸ್ತಿಗಳ ನೋಂದಣಿಗೆ ಇ-ಆಸ್ತಿ ಖಾತಾ ಕಡ್ಡಾಯ

Get real time updates directly on you device, subscribe now.

  ಜಿಲ್ಲಾ ಸರ್ವೇಕ್ಷಣಾ ಘಟಕದ ಎನ್.ಪಿ.-ಎನ್.ಸಿ.ಡಿ. ಮತ್ತು ಎನ್.ಪಿ.ಪಿ.ಸಿ. ಕಾರ್ಯಕ್ರಮಗಳಡಿಯಲ್ಲಿ ಶುಶ್ರೂಷಕಾಧಿಕಾರಿಗಳ ಹುದ್ದೆಗೆ ಎರಡನೇ ಸುತ್ತಿನ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ಅವರು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದ ದಾಖಲಾತಿಗಳ ಮೂಲ ದಾಖಲಾತಿ ಪರಿಶೀಲನೆಯನ್ನು ಅಕ್ಟೋಬರ್ 10ರವರೆಗೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


 ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಗೆ ಇ-ಆಸ್ತಿ ತಂತ್ರಾAಶವನ್ನು ಕಾವೇರಿ-2.0 ತಂತ್ರಾAಶದೊAದಿಗೆ ರಾಜ್ಯದ 8 ಜಿಲ್ಲೆಗಳಾದ ಬಳ್ಳಾರಿ, ಬೀದರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೇರಿ, ಹಾಸನ, ಹಾವೇರಿ ಸೇರಿದಂತೆ ಕೊಪ್ಪಳ ಜಿಲ್ಲೆಗೂ ಸಹ ವಿಸ್ತರಿಸಿ ಸೆಪ್ಟಂಬರ್ 23 ರಿಂದ ಸಂಯೋಜಿಸಿ ಹಾಗೂ ಇ-ಆಸ್ತಿ ತಂತ್ರಾAಶದಿAದ ಮಾತ್ರ ಮಾಹಿತಿ ಪಡೆದು ನೋಂದಾಯಿಸಲು ಸರ್ಕಾರವು ಆದೇಶಿಸಿರುತ್ತದೆ.
ಇನ್ನು ಮುಂದೆ ಕೊಪ್ಪಳ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವತ್ತುಗಳು, ಇ-ಆಸ್ತಿ ಖಾತಾ ಇದ್ದಲ್ಲಿ ಮಾತ್ರ ಕಾವೇರಿ-2.0 ತಂತ್ರಾAಶದೊAದಿಗೆ ಸಂಯೋಜನೆಗೊಳಿಸಿ ನೋಂದಾಯಿಸಲಾಗುತ್ತದೆ. ಸಾರ್ವಜನಿಕರು ಯಾವುದೇ ಸ್ವತ್ತು ನೋಂದಣಿಗಾಗಿ ಇ-ಆಸ್ತಿ ಖಾತಾ ಕಡ್ಡಾಯವಾಗಿರುವುದರಿಂದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಯನ್ನು ಇ-ಆಸ್ತಿ ತಂತ್ರಾAಶದಿAದ ಮಾಹಿತಿ ಪಡೆಯದೇ ಬೇರೆ ಯಾವುದೇ ವಿಧಾನದಲ್ಲಿ ಸ್ಥಿರಾಸ್ತಿಗಳ ನೋಂದಣಿ ಮಾಡಿಕೊಳ್ಳಲು ಅವಕಾಶವಿರುವುದಿಲ್ಲ. ಸಾರ್ವಜನಿಕರು ಸಹಕರಿಸಿ ಯೋಜನೆಯ ಸದುಪಯೋಗಪಡಿಸಿಕೊಳ್ಳಲು ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಾರ್ಯಾಲಯ ಪ್ರಕಟಣೆ ತಿಳಿಸಿದೆ.
ಅಕ್ಟೋಬರ್ 07 ರಂದು ಶಿಶುಕ್ಷÄ ಮೇಳ ಕಾರ್ಯಕ್ರಮ
 ): ಕೊಪ್ಪಳದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅಕ್ಟೋಬರ್ 07 ರಂದು ಬೆಳಿಗ್ಗೆ 9 ಗಂಟೆಗೆ “ಶಿಶುಕ್ಷÄ ಮೇಳ ಕಾರ್ಯಕ್ರಮ”ವನ್ನು ಹಮ್ಮಿಕೊಳ್ಳಲಾಗಿದೆ.
ಹೊಸಪೇಟೆ ಸ್ಟೀಲ್ಸ್ ಲಿಮಿಟೆಡ್ ಗಿಣಿಗೇರಾ ಮತ್ತು ಅಲ್ಟಾçಟೇಕ ಸಿಮೆಂಟ್ಸ್ ಗಿಣಿಗೇರಾ ಇವರಿಂದ ನಡೆಯುವ ಕಾರ್ಯಕ್ರಮದಲ್ಲಿ ಎಲೆಕ್ಟಿçÃಷಿಯನ್, ಪಿಟ್ಟರ್, ಟರ್ನರ್, ವೆಲ್ಡರ್ ಮತ್ತು ಅಡ್ವಾನ್ಸ÷್ಡ ಸಿ.ಎನ್.ಸಿ ಮಷಿನಿಂಗ್ ಟೆಕ್ನಿಷಿಯನ್ ವೃತ್ತಿಯ ತರಬೇತಾರ್ಥಿಗಳು ಭಾಗವಹಿಸಿ ಸದುಪಯೋಗಪಡಿಸಿಕೊಳ್ಳಬೇಕು. ಭಾಗವಹಿಸುವವರು ಮೂಲ ದಾಖಲಾತಿಗಳಾದ ರೆಸ್ಯೂಮ್, ಪೋಟೋ, ಮಾರ್ಕ್ಸ್ ಕಾರ್ಡ್, ಎನ್.ಟಿ.ಸಿ ಮತ್ತು 2 ಝರಾಕ್ಸ್ ಪ್ರತಿಗಳೊಂದಿಗೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು, (ಟಣಕನಕಲ್, ಕುಷ್ಟಗಿ ರಸ್ತೆ, ಕೊಪ್ಪಳ) ಮೊಬೈಲ್ ಸಂಖ್ಯೆ: 9448813422, 9742532353, 9945577155, 9945672606, 9008536895 ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಾಚಾರ್ಯರಾದ ಗವಿಶಂಕರ್ ಕೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿವಿಧ ತರಬೇತಿಗೆ ಅರ್ಜಿ ಆಹ್ವಾನ
 ಬೆಂಗಳೂರಿನ ರುಡ್‌ಸೆಟ್ ಸಂಸ್ಥೆಯಲ್ಲಿ ಅಕ್ಟೋಬರ್ 18 ರಿಂದ ನವೆಂಬರ್ 30 ರವರೆಗೆ 13-ದಿನಗಳವರೆಗೂ ಸಿ.ಸಿ.ಟಿ.ವಿ.ಅಳವಡಿಕೆ, ಸ್ಮೋಕ್ ಡಿಟೆಕ್ಟರ್ ಸರ್ವಿಸಿಂಗ್ ತರಬೇತಿ ಇರುತ್ತದೆ. ನವೆಂಬರ್ 06 ರಿಂದ ಡಿಸೆಂಬರ್ 05 ವರೆಗೆ 30 ದಿನಗಳ ಕಾಲ ಮೋಟಾರ್ ರಿವೈಂಡಿAಗ್ ಮತ್ತು ಸರ್ವಿಸಿಂಗ್ ತರಬೇತಿ ಇರುತ್ತದೆ.
ಅರ್ಜಿ ಸಲ್ಲಿಸ ಬಯಸುವವರು ಗ್ರಾಮೀಣ ಅಭ್ಯರ್ಥಿಗಳಾಗಿದ್ದು 18 ರಿಂದ 45 ವಯೋಮಾನದವರಾಗಿರಬೇಕು. ಕಡ್ಡಾಯವಾಗಿ ಬಿ.ಪಿ.ಎಲ್/ಪಿ.ಹೆಚ್.ಹೆಚ್/ಅಂತ್ಯೋದಯ/ಎA.ಜಿ.-ನರೇಗಾ ಯೋಜನೆಯಡಿಯಲ್ಲಿ ಜಾಬ್ ಕಾರ್ಡನ್ನು ಹೊಂದಿರುವ ಕುಟುಂಬದ ಸದಸ್ಯರಾಗಿರಬೇಕು. ಹೆಚ್ಚಿನ ಮಾಹಿತಿಗಾಗಿ ರುಡ್ ಸೆಟ್ ಸಂಸ್ಥೆಯ ನಿರ್ದೇಶಕರು ಅರಿಶಿನಕುಂಟೆ, ನೆಲಮಂಗಲ ತಾ||, ಬೆಂಗಳೂರು ಗ್ರಾಮಾಂತರ ಜಿಲ್ಲೆ ಮೊಬೈಲ್ ಸಂಖ್ಯೆ : 8105526792, 9241482541, 911388032 ಗೆ ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫಾಸ್ಟ್ಫುಡ್ ತಯಾರಿಕಾ ಉಚಿತ ತರಬೇತಿಗೆ ಅರ್ಜಿ ಆಹ್ವಾನ
  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್‌ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್ ಸಂಸ್ಥೆಯಿAದ ಹಮ್ಮಿಕೊಂಡಿರುವ ಫಾಸ್ಟ್ಫುಡ್ ತಯಾರಿಕೆ ಕುರಿತ 10 ದಿನಗಳ ಉಚಿತ ತರಬೇತಿಯು ಅಕ್ಟೋಬರ್ 21 ರಿಂದ ಆರಂಭವಾಗಲಿದ್ದು, ಆಸಕ್ತ ಗ್ರಾಮೀಣ ನಿರುದ್ಯೋಗಿ ಯುವಕ-ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ.
ಆಸಕ್ತರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಆಧಾರ್ ಕಾರ್ಡ್ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ತರಬೇತಿಯು ಕಡ್ಡಾಯ ವಸತಿಯುತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರ ವಿತರಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ರುಡ್‌ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೊಬೈಲ್ ಸಂಖ್ಯೆ: 9740982585 ಗೆ ಸಂಪರ್ಕಿಸಬಹುದಾಗಿದೆ ಎಂದು ರುಡ್‌ಸೆಟ್ ಸಂಸ್ಥೆಯ ಬೆಂಗಳೂರು ಶಾಖೆಯ ನಿರ್ದೇಶಕರಾದ ರವಿಕುಮಾರ  ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!