ಜಾತಿ ಗಣತಿ ವರದಿ ಬಿಡುಗಡೆಯಾಗಲಿ -ಸಿಎಂ ಆರ್ಥಿಕ ಸಲಹೆಗಾರ ರಾಯರಡ್ಡಿ ಆಗ್ರಹ

Get real time updates directly on you device, subscribe now.


ವರದಿ ಜಾರಿಯಾದರೇ ಎಲ್ಲ ಸಮುದಾಯಗಳಿಗೂ ಅನುಕೂಲ

ಕೊಪ್ಪಳ: ಸರಕಾರದ ಮುಂದಿರುವ ಜಾತಿ ಗಣತಿ ವರದಿಯನ್ನು ಸಿಎಂ ಸಿದ್ದರಾಮಯ್ಯ ವಾರದೊಳಗೆ ಬಿಡುಗಡೆ ಮಾಡಲಿ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ತಾಲೂಕಿನ ಗಿಣಗೇರಾ ವಿಮಾನ ನಿಲ್ದಾಣದ ಬಳಿ ಶುಕ್ರವಾರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು.
ಸಿಎಂ ಸಿದ್ದರಾಮಯ್ಯ ಅವರು ಹಿಂದೆ ನಮ್ಮದೇ ಸರಕಾರದಲ್ಲಿ ಸಮೀಕ್ಷೆ ಮಾಡಿಸಿದ ಸಾಮಾಜಿಕ, ಆರ್ಥಿಕ ಗಣತಿ ವರದಿ ಜಾರಿ ಮಾಡಲಿ ಎಂದು ಈಚೆಗೆ ಭೇಟಿಯಾಗಿ ಮನವಿ ಮಾಡಿರುವೆ. ಅವರು ನೋಡೋಣ, ಮಾಡೋಣ ಎಂದಿದ್ದಾರೆ.
ಇದೇ ವಾರದಲ್ಲಿ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ನವೆಂಬರ್ 01 ರಂದು ಅನುಷ್ಠಾನ ಮಾಡಲಿ ಎನ್ನುವುದು ನನ್ನ ಬೇಡಿಕೆಯಾಗಿದೆ.  ರಾಜ್ಯದಲ್ಲಿ ಅನವಶ್ಯಕ ವಿಚಾರ ಚರ್ಚೆ ಆಗುತ್ತಿವೆ, ಅವೆಲ್ಲ ಬಂದ್ ಆಗಬೇಕು. ಕರ್ನಾಟಕ ಸಂಸ್ಕಾರ, ಸಾಮಾಜಿಕ ನ್ಯಾಯ ಇರುವಂತ ಪ್ರದೇಶವಿದು. ಬಸವೇಶ್ವರ ನಡೆದಾಡುವ ನೆಲವಿದು. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅಭಿವೃದ್ಧಿ ಚರ್ಚೆ ಮಾಡಿರುವೆ. ಇದರಲ್ಲಿ 2013-18 ರಲ್ಲಿ ಸಿಎಂ ಸಿದ್ದರಾಮಯ್ಯ ಸರಕಾರ ರಾಜ್ಯದ ಎಲ್ಲ ಧರ್ಮ, ಜಾತಿಗಳು ಒಳಗೊಂಡ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಿಂದುಳಿದವರ ಸಮೀಕ್ಷೆ ಮಾಡಿಸಿದೆ.
ಆ ಸಮೀಕ್ಷೆಗೆ ಒಟ್ಟು 165 ಕೋಟಿ ರೂ. ಕೊಟ್ಟು ಸರ್ವೆ ಮಾಡಲಾಗಿದೆ. ಅದರಂತೆ ಕಾಂತರಾಜ ಅವರು ರಾಜ್ಯದ ಜನರ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡಿದ್ದಾರೆ.
2013-18 ರ ಅವಧಿಯಲ್ಲಿ ಆಗ ಸಿಎಂಗೆ ಕೊನೆಯ ಅವಧಿಯಲ್ಲಿ ವರದಿ ತಲುಪಲಿಲ್ಲ.
ನಂತರ ಕುಮಾರಸ್ವಾಮಿ ಸಿಎಂ ಆದಾಗಲೂ ವರದಿ ಬಿಡುಗಡೆ ಮಾಡಲಿಲ್ಲ. ನಂತರ ಬಂದ
ಬೊಮ್ಮಾಯಿ ಸರಕಾರ ವರದಿ ಬಿಡುಗಡೆ ಮಾಡಲಿಲ್ಲ. ಬಳಿಕ ನಮ್ಮ ಸರಕಾರ ಬಂತು. ಅದರಂತೆ  ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ನೇಮಕವಾಗಿದ್ದ ಜಯಪ್ರಕಾಶ್ ಹೆಗಡೆ ಅವಧಿ ಹೆಚ್ಚು ಮಾಡಿದೆವು. ಅವರು ಸಾಮಾಜಿಕ ಗಣತಿ ವರದಿಯನ್ನ 2024ರ ಫೆ.29 ಕ್ಕೆ ಸರಕಾರಕ್ಕೆ ತಲುಪಿಸಿದ್ದಾರೆ.
ಈಗಾಗಲೇ ವರದಿ ಕೊಟ್ಟು ಎಂಟು ತಿಂಗಳಾಗಿದೆ. ಹೀಗಾಗಿ ಜಾರಿ ಮಾಡಿ ಎಂದಾಗ ಸಿಎಂ ಸಿದ್ದರಾಮಯ್ಯ ಅವರು ವರದಿ ಬಗ್ಗೆ ಯೋಚನೆ ಮಾಡುವೆ ಎಂದಿದ್ದಾರೆ.
ಬಡವರ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಕಾಳಜಿ ಇದೆ. ಹೀಗಾಗಿ ಮುಂದಿನ ವಾರವೇ ಸಂಪುಟದಲ್ಲಿ ಒಪ್ಪಿಗೆ ಕೊಟ್ಟು ಜಾರಿ ಮಾಡಲು ನಾನು ಸಿಎಂ ಆರ್ಥಿಕ ಸಲಹೆಗಾರ ನಾಗಿ ಒತ್ತಾಯ ಮಾಡಿರುವೆ.
ಮುಂದಿನ ಬಜೆಟ್ ನಲ್ಲಿ ಈ ವರದಿ ಅನುಸಾರ ಯೋಜನೆ ರೂಪಿಸಲು ಅನುಕೂಲ ಆಗಲಿದೆ.
ಸಿಂಧನೂರಿನ ಕಾರ್ಯಕ್ರಮದಲ್ಲೇ ಸಿಎಂ ವರದಿ ಜಾರಿ ಮಾಡುವುದಾಗಿ ಘೋಷಣೆ ಮಾಡಲು ಒತ್ತಾಯ ಮಾಡುವೆ ಎಂದರು.
ರಾಜ್ಯದಲ್ಲಿ ಯಾವ ಜಾತಿ ಏಷ್ಟಿದ್ದಾರೆ ಎನ್ನುವುದು ಈವರೆಗೆ ನಿಖರವಾಗಿ ಗೊತ್ತಿಲ್ಲ.
ಈಗ ಶೇ.50 ಮೀಸಲಾತಿ ಇದೆ. ವರದಿ ಜಾರಿಯಾಗುವುದರಿಂದ ಇದನ್ನು ಶೇ.75ರ ವರೆಗೂ ಮೀಸಲಾತಿ ಕೊಡಲು ಸಾಧ್ಯವಿದೆ.
ಜತೆಗೆ ಸೌಲಭ್ಯ ವಂಚಿತ ಬೇರೆ ಹಿಂದುಳಿದ ವರ್ಗಕ್ಕೆ ಆ ಮೀಸಲಾತಿ ಕೊಡಲು ಅವಕಾಶವಿದೆ.
ಅಲ್ಲದೆ, ವರದಿಯಲ್ಲಿ ತಪ್ಪು ಮಾಡಿದ್ದರೆ ಸರಿಪಡಿಸಲು ಅವಕಾಶ ಕೂಡ ದೊರೆಯಲಿದೆ. ಹೀಗಾಗಿ ಜಾತಿ ಗಣತಿ ವರದಿ ಬಿಡುಗಡೆಯಾಗಲಿ ಎಂದು ಒತ್ತಾಯಿಸುತ್ತಿರುವೆ ಎಂದರು.
ಮುಡಾ ವಿಚಾರಕ್ಕೂ ಇದಕ್ಕೂ ಸಂಬಂಧ ಇಲ್ಲ. ಸಿಎಂ ಇದರಲ್ಲಿ ಭಾಗಿಯಾಗಿಲ್ಲ, ಅವರಿಗೆ ಶಿಕ್ಷೆ ಆಗಲ್ಲ.
ಹೈಕೋರ್ಟ್ ಪ್ರಾಶಿಕ್ಯೂಶನ್ ಗೆ ಅನುಮತಿ ಕೊಟ್ಟಿಲ್ಲ, ಪ್ರಾಥಮಿಕ ತನಿಖೆ ಮಾಡಲು ಹೇಳಿದೆ.
ಮೂರುವರೆ ಸಿಎಂ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ. ಕೇಂದ್ರ ಸರಕಾರವೂ ಜಾತಿ ಗಣತಿ, ಆರ್ಥಿಕ ಗಣತಿ ಮಾಡಲಿ.
ಸಿಎಂ ಸ್ಥಾನದಿಂದ ಕೆಳಗಿಳಿಸಲು ಹೈಕಮಾಂಡ್ ಹಾಗೂ ಶಾಸಕಾಂಗ ನಾವು ಹೇಳಬೇಕು. ಆದರೆ, ಅವರೇ ಸಿಎಂ ಆಗಿ ಮುಂದುವರೆಯಲು ನಾವು ಒತ್ತಾಯಿಸುತ್ತಿದ್ದೇವೆ.
ಮೈಸೂರಿನ ಕಾರ್ಯಕ್ರಮವೊಂದರಲ್ಲಿ
ಅವರು ಒಂದು ವರ್ಷ ಅವಕಾಶ ಕೊಡಿ ಅಭಿವೃದ್ಧಿ ಮಾಡಿ ತೋರಿಸುವೆ ಎಂದಿದ್ದಾರೆ. ಹಾಗಂತ ಇನ್ನೊಂದು ವರ್ಷಕ್ಕೆ ಸಿಎಂ ಸ್ಥಾನದಿಂದ ಕೆಳಗೆ ಇಳಿಯುತ್ತಾರೆ ಎಂದರ್ಥವಲ್ಲ ಎಂದರು.

Get real time updates directly on you device, subscribe now.

Comments are closed.

error: Content is protected !!