ಗೋಕಾಕ ಚಳವಳಿಯ ಹಿನ್ನೋಟ-ಮುನ್ನೋಟ, ಬನ್ನಿ ಕನ್ನಡ ೫೦ ರ ಸಂಭ್ರಮಕ್ಕೆ ಸಾಕ್ಷೀಕರಿಸೋಣ…!!

Get real time updates directly on you device, subscribe now.


ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ, ರಾಯಚೂರು
ಇವರು ಕೃಷಿ ಮತ್ತು ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ
ಆಯೋಜಿಸಿರುವ ಕರ್ನಾಟಕ ಸಂಭ್ರಮ–೫೦ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ
ಗೋಕಾಕ್ ಚಳವಳಿ ಹಿನ್ನೋಟ – ಮುನ್ನೋಟ
ಸಶಕ್ತ, ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ದಿಕ್ಕೂಚಿ ನಡೆ
ಕಾರ್ಯಕ್ರಮ
ಅಕ್ಟೋಬರ್ ೦೫-೨೦೨೪ ರ ಶನಿವಾರ ಬೆಳಗ್ಗೆ: ೧೦-೦೦ ರಿಂದ ರಾತ್ರಿ: ೦೮-೦೦ ರವರೆಗೆ ಜರುಗಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ  ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್  ಗೌರವ ಉಪಸ್ಥಿತಿಯಲ್ಹಿ ಕಾರ್ಯಕ್ರಮ ನಡೆಯಲಿದೆ ಸಚಿವರಾದ ಶಿವರಾಜ ಎಸ್ ತಂಗಡಗಿ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರು ಆಶಯ ನುಡಿಗಳನ್ನಾಡಲಿದ್ದಾರೆ
ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರು, ಕಲಾತಂಡಗಳ ಮೆರವಣಿಗೆಗೆ ಚಾಲನೆಯನ್ನು ನೀಡಲಿದ್ದಾರೆ ಎನ್.ಎಸ್.ಭೋಸರಾಜು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು,
ಡಾ. ಪುರುಷೋತ್ತಮ ಬಿಳಿಮಲೆ ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಘನ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಲಿದೆ
ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಡಾ. ಎಸ್.ಶಿವರಾಜ ಪಾಟೀಲ್ ಶಾಸಕರು (ವಿಧಾನಸಭೆ), ರಾಯಚೂರು ನಗರ. ವಹಿಸಲಿದ್ದಾರೆ
ಇದೆ ಸಂದರ್ಭದಲ್ಲಿ
ಗೋಕಾಕ್ ಚಳವಳಿ ಹಿರಿಯ ಹೋರಾಟಗಾರರಿಗೆ ಹಾಗೂ ಸಂಸ್ಥೆಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ
ಕೋಣಂದೂರು ಲಿಂಗಪ್ಪ ಕನ್ನಡ ಚಳವಳಿ ಪ್ರವರ್ತಕರು, ಶಿವಮೊಗ್ಗ.
ಶಿವಶರಣಪ್ಪ ವಾಲಿ ಕನ್ನಡ ಹಿರಿಯ ಹೋರಾಟಗಾರರು, ಬೀದರ್. ರು ಬಸಪ್ಪ
ಕನ್ನಡ ಹಿರಿಯ ಹೋರಾಟಗಾರರು, ಬೆಂಗಳೂರು.
ನಿಂಗಣ್ಣ ಕುಂಟಿ ಕನ್ನಡ ಹಿರಿಯ ಹೋರಾಟಗಾರರು, ಧಾರವಾಡ.
ಸಾ.ರಾ. ಗೋವಿಂದು ಕನ್ನಡ ಹಿರಿಯ ಹೋರಾಟಗಾರರು, ಬೆಂಗಳೂರು.
ಜೆ. ಕಲೀಂ ಬಾಷ ಕನ್ನಡ ಹಿರಿಯ ಹೋರಾಟಗಾರರು, ದಾವಣಗೆರೆ.
ಸಂಸ್ಥೆ : ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಇವರಿಗೆ ಸನ್ಮಾನ ಜರುಗಿದೆ.

ಗೋಕಾಕ್ ಚಳವಳಿಯ ರೋಚಕ ಹಿನ್ನೆಲೆ
—————————————–
ಅಂದಿನ ಕಾಲ ಘಟ್ಟದ ದಯನೀಯ ಸಂದರ್ಭದಲ್ಲಿ
ಕರ್ನಾಟಕದಲ್ಲಿ ಅಧೀಕೃತ ಭಾಷೆಯೇ ಇರದಿರುವುದು ಶಾಲಾ ಶಿಕ್ಷಣದಲ್ಲಿ ಕನ್ನಡ ಭಾಷಾ ಅನುಷ್ಠಾನಕ್ಕೆ ಹಿನ್ನಡೆಯಾಗಲು ಮುಖ್ಯ ಕಾರಣವಾಯಿತು. ಕನ್ನಡವನ್ನು ಕರ್ನಾಟಕದಲ್ಲಿ ಅಧೀಕೃತ ಭಾಷೆಯಾಗಿಯೂ ಹಾಗು ಆಡಳಿತ ಭಾಷೆಯಾಗಿಯೂ ಘೋಷಿಸದ ಹೊರತು ಶಾಲಾ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಅನುಷ್ಠಾನ ಕಷ್ಟ ಸಾಧ್ಯವೆನ್ನುವುದು ಎಲ್ಲರಿಗೂ ತಿಳಿದ ವಿಚಾರವಾಗಿತ್ತು. ಆದ ಕಾರಣದಿಂದಲೇ ಕರ್ನಾಟಕದಲ್ಲಿ ಎಷ್ಟೋ ಶಾಲೆಗಳು ಕನ್ನಡ ಭಾಷೆಯೇ ಇಲ್ಲದಂತೆ ಸಂಸ್ಕೃತ ಮತ್ತಿತರ ಭಾಷೆಗಳನ್ನು ಕಲಿಸುತ್ತಿದ್ದವು. ಸಾಲದೆಂಬಂತೆ ಆ ಸಮಯದಲ್ಲಿ ಶಾಲಾ ಶಿಕ್ಷಣದಲ್ಲಿ ಸಂಸ್ಕೃತ ಎಲ್ಲ ಭಾಷೆಗಳಿಗಿಂತ ಹೆಚ್ಚಿನ ಬೇಡಿಕೆಯಲ್ಲಿದ್ದ ಭಾಷೆಯಾಗಿತ್ತು. ಎಷ್ಟೋ ಮಕ್ಕಳು ಕನ್ನಡವನ್ನು ಒಂದು ಭಾಷೆಯಾಗಿ ಅಭ್ಯಸಿಸದೆ ಶಾಲಾ ಶಿಕ್ಷಣವನ್ನು ಮುಗಿಸುತ್ತಿದ್ದರು. ಇವುಗಳಿಗೆಲ್ಲ ಇತಿಶ್ರೀ ಹಾಡಲು ಕನ್ನಡದ ಕವಿ ವಿ.ಕೃ ಗೋಕಾಕ್ ವಿಸ್ಮೃತ ವರದಿಯೊಂದನ್ನು ಸಿದ್ಧಪಡಿಸಿದರು. ಈ ವರದಿಯ ಅನುಷ್ಠಾನಕ್ಕಾಗಿ ನಡೆದ ಕನ್ನಡ ನೆಲದಲ್ಲಿ ಚಿರಸ್ಥಾಯಿಯಾಗಿ ಉಳಿಯುವ ಆ ಚಳವಳಿಯೇ ಗೋಕಾಕ್ ಚಳವಳಿ.
ವಿ.ಕೃ ಗೋಕಾಕ್ ತಂಡಕೆ ಹಲವಾರು ಭಾಷಾ ವ್ಯಾಸಂಗರವರು ವಿರೋಧ ಮಾಡಿದರು. ಈ ಸಮಯದಲ್ಲಿ ನಾಯಕತ್ವ ಹುಡುಕುವ ಸಂದರ್ಭ ಕನ್ನಡಿಗರ ಮೇಲಿತ್ತು ಡಾ|| ರಾಜಕುಮಾರ್ ಸೂಕ್ತ ಎನ್ನುವ ಭಾವನೆ ಎಲ್ಲರದಾಗಿತ್ತು
ಕನ್ನಡ ಕವಿಗಳ ಕರೆಗೆ ಡಾ ||ರಾಜ್ ಒಪ್ಪಿದರು. ಡಾ|| ರಾಜಕುಮಾರ್ ಅವರು ಬೆಂಗಳೂರಿನಿಂದ ಬೆಳಗಾವಿವರೆಗೂ ಪ್ರಯಾಣ ಮಾಡಿದರು. ಡಾ|| ರಾಜ್ ಅವರು ,”ಕನ್ನಡ ಭೂಮಿ ಮತ್ತು ಭಾಷೆಯ ಸಲುವಾಗಿ ಯಾವುದೇ ತ್ಯಾಗಕ್ಕೆ ನಾನು ಸಿದ್ಧ”. ಎಂದು ಹೇಳಿದರು” ಕನ್ನಡದ ಭಾಷೆಗಾಗಿ ಶ್ರಮಿಸಿದವರಲ್ಲಿ ಪ್ರಮುಖರು
ಕರ್ನಾಟಕ 1956 ರಿಂದಲೇ ಶಾಲಾ ಶಿಕ್ಷಣದಲ್ಲಿ ತ್ರಿಭಾಷಾ ಸೂತ್ರವನ್ನು ಅಳವಡಿಸಿಕೊಂಡಿತ್ತು. 1967 ರಲ್ಲಿ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಆಡಳಿತ ಭಾಷೆಗಳನ್ನಾಗಿ ಸಾಂವಿಧಾನಿಕ ತಿದ್ದುಪಡಿ ಮಾಡಿದರು.
ಹಿಂದಿ ಪ್ರಾಬಲ್ಯವಿರದಿದ್ದ ಪ್ರದೇಶಗಳಲ್ಲಿ ಹಿಂದಿ ಭಾಷೆಗೆ ವಿರೋಧ ವ್ಯಕ್ತವಾದ್ದರಿಂದ ಹಿಂದಿಯೊಡನೆ ಇಂಗ್ಲಿಷ್ ಭಾಷೆಯನ್ನೂ ಸೇರಿಸಲಾಯಿತು. ಇದು ಮುಂದುವರೆದು ಶಾಲಾ ಶಿಕ್ಷಣದಲ್ಲಿಯೂ ಇಂಗ್ಲಿಷ್ ಹಾಗು ಹಿಂದಿ ಕಡ್ಡಾಯವೆನ್ನುವಂತಾಯಿತು.

ಅತಿ ದೊಡ್ಡ ಮಟ್ಟದಲ್ಲಿ ನಡೆದ ಚಳವಳಿಯನ್ನು ಕನ್ನಡದ ರಾಜಕೀಯ ಪಕ್ಷಗಳು, ಕನ್ನಡ ಭೋದಕ ವರ್ಗದವರು, ವಿದ್ಯಾರ್ಥಿಗಳು, ಕವಿಗಳು, ನಾಟಕಕಾರರು,ಚಿತ್ರರಂಗದ ಗಣ್ಯರು, ವಿಮರ್ಶೆಕಾರರಾದಿಯಾಗಿ ಅನೇಕರು ಪ್ರೋತ್ಸಾಹಿಸಿದರು. ಹಲವಾರು ದಿನಗಳು ನಡೆದ ಬೃಹತ್ ಚಳವಳಿ ಸರ್ಕಾರವನ್ನು ಆಗ್ರಹಿಸುವುದರಲ್ಲಿ ಸಫಲವಾಯಿತು. ಅದರ ಫಲವಾಗಿ ಕರ್ನಾಟಕ ಸರ್ಕಾರ ಜುಲೈ 5, 1980 ರಲ್ಲಿ ಶಾಲಾ ಶಿಕ್ಷಣದ ಭಾಷಾ ನೀತಿ ಮರುಯೋಜನೆಗೆ ಸಮಿತಿಯೊಂದನ್ನು ರಚಿಸಿತು ಹಾಗು ವಿ.ಕೃ ಗೋಕಾಕರನ್ನೇ ಆ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಿಸಿತು.

ಗೋಕಾಕ್ ವರದಿ ಕನ್ನಡ ಭಾಷೆಗೆ ಕರ್ನಾಟಕದಲ್ಲಿ ಪ್ರಥಮ ಭಾಷಾ ಸ್ಥಾನಮಾನ ಕೊಡುವ ವಿಚಾರಕ್ಕೆ ಕರ್ನಾಟಕ ಸರ್ಕಾರ ಸಮಿತಿಯೊಂದನ್ನು ರಚಿಸಿ ಆ ಸಮಿತಿಗೆ ಕರ್ನಾಟಕ ವಿಶ್ವ ವಿದ್ಯಾಲಯದ ಮಾಜಿ ಕುಲಪತಿಗಳು ಜ್ಞಾನಪೀಠ ಹಾಗು ಪದ್ಮಶ್ರೀ ಪ್ರಶಸ್ತಿ ಪಡೆದ ಹಿರಿಯ ಸಾಹಿತಿಯಾದ ಶ್ರೀ ವಿನಾಯಕ ಕೃಷ್ಣ ಗೋಕಾಕ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸುತ್ತದೆ. ಕನ್ನಡಕ್ಕೆ ಪ್ರಮುಖ ಸ್ಥಾನಮಾನ ಕೊಡುವುದರ ಜೊತೆಗೆ ಇನ್ನಿತರ ಭಾಷೆಗಳು ಎಂದರೆ ಕರ್ನಾಟಕ ರಾಜ್ಯದೊಳಗೆ ಚಾಲ್ತಿಯಲ್ಲಿದ್ದ ಭಾಷೆಗಳಾದ ಹಿಂದಿ, ಮರಾಠಿ, ತೆಲುಗು, ತಮಿಳು, ಇಂಗ್ಲಿಷ್ ಹಾಗು ಉರ್ದು ಭಾಷೆಗಳ ಸ್ಥಾನ ಮಾನವನ್ನು ನಿಗದಿಪಡಿಸಲು ಗೋಕಾಕ್ ಸಮಿತಿಯು ವಿಸ್ಮೃತ ವರದಿ ಸಿದ್ಧಪಡಿಸಿತು
ಅತೀ ದೊಡ್ಡ ಸ್ವರೂಪದಲ್ಲಿ ನಡೆದ ಚಳುವಳಿಗೆ ಕರ್ನಾಟಕ ಸರ್ಕಾರ ಧನಾತ್ಮಕವಾಗಿ ಸ್ಪಂದಿಸಿತು.ಆಗಿನ ಕರ್ನಾಟಕದ ಮುಖ್ಯಮಂತ್ರಿಗಳಾದ ಆರ್.ಗುಂಡೂರಾವ್ ಚಳವಳಿಯ ಆಗಾಧತೆಯನ್ನು ಕಂಡು ಗೋಕಾಕ್ ಸಮಿತಿ ಸಲ್ಲಿಸಿದ್ದ ವರದಿಯನ್ನು ಪುರಸ್ಕರಿಸಿದರು. ವರದಿಯಲ್ಲಿ ಉಲ್ಲೇಖಿಸಿದ್ದ ಪ್ರಕಾರ ಕನ್ನಡ ಭಾಷೆಗೆ ವಿಶೇಷ ಸ್ಥಾನ ಮಾನಗಳ ಜೊತೆಗೆ ಮೊದಲ ಭಾಷೆಯ ಸ್ಥಾನವನ್ನು ಕೊಡಲಾಯಿತು.
ಕರ್ನಾಟಕದ ಜನತೆಗೆ ಭಾಷಾ ನೀತಿಯಲ್ಲಿ ಕನ್ನಡಕ್ಕೆ ಮೊದಲ ಆದ್ಯತೆಯ ಹಕ್ಕಿಗಾಗಿ ೧೯೮೦ರ ದಶಕದಲ್ಲಿ ನಡೆದ ಒಂದು ಚಳವಳಿಯ
ಆಂದೋಲನವೇ ಈ ಗೋಕಾಕ್ ಚಳವಳಿಯಾಗಿದೆ.
ತ್ರಿಭಾಷಾ ಸೂತ್ರದಡಿಯಲ್ಲಿ ಕರ್ನಾಟಕದ ಶಾಲೆಗಳಲ್ಲಿ ಕನ್ನಡವನ್ನು ಮುಖ್ಯ ಭಾಷೆಯನ್ನಾಗಿ ಪರಿಗಣಿಸಬೇಕು ಎನ್ನವ ಬೇಡಿಕೆಯೂ ಸೇರಿದಂತೆ ಹಲವಾರು ಬೇಡಿಕೆಗಳನ್ನೊಳಗೊಂಡ ವರದಿಯೊಂದನ್ನು ಕನ್ನಡದ ಕವಿ ವಿ.ಕೃ ಗೋಕಾಕ್ ರು ಸಿದ್ಧಪಡಿಸಿದ್ದರು ಆದ ಕಾರಣ ಚಳವಳಿಗೆ ಅವರದೇ ಆದ ಹೆಸರು ಇಂದಿಗೂ ಚಿರಸ್ಥಾಯಿಯಾಗಿ ಉಳಿದಿದೆ.
ತಾಯ್ತುಡಿಯ ಮಾತೆಂದರೆ ಅದು ಅದಮ್ಯ ಚೇತನ, ಅಡಿಗಡಿಗೂ ನುಡಿಯುವ, ಅಡಿಗಡಿಗೂ ಬೆರೆಯುವ ಸಿಹಿ ಜೇನ ನುಡಿಯಂತೆ
ಕನ್ನಡದ ಭಾಷೆ.
ಇಂಥ ಅಪರೂಪದ, ಕನ್ನಡ ಕಂಪಿನ
ಮಹತ್ವವನ್ನು ಸಾರುವ ಕೆಲಸ ತನ್ಮೂಲಕ ಕನ್ನಡ ಭಾಷೆಯನ್ನು ಎಲ್ಲೆಡೆಯೂ ಪಸರಿಸುವ ಕೈಂಕರ್ಯ
ನಮ್ಮದಾಗಬೇಕಿದೆ
ಈ ಕುರಿತಂತೆ ನಾಡಿನ ಜನರಲ್ಲಿ ಭಾಷಾಭಿಮಾನದ
ಗಟ್ಟಿ ನೆಲೆಗಟ್ಟಿನಲ್ಲಿ ಕರ್ತವ್ಯ ಪೂರ್ವಕವಾಗಿ ಸ್ವಾಭಿಮಾನಿ ಕನ್ನಡಿಗರೆದೆಗೆ ತಾಕಿಸುವ ಮೂಲಕ
ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡಕ್ಕೆ ಶಾಶ್ವತ ಸ್ಥಾನವನ್ನು ಕಲ್ಪಿಸಿದ ಗೋಕಾಕ್ ಚಳವಳಿ ನಾಡಿನ ಇತಿಹಾಸದ ಮಹತ್ವದ ಅವಧಿಯಾಗಿದೆ. ಕರ್ನಾಟಕದ ಅಸ್ಥಿತೆಯನ್ನು ಹಿಂದೆಂದೂ ಇಲ್ಲದ ಮಾದರಿಯಲ್ಲಿ ಸ್ಥಿರೀಕರಿಸಿದ ಈ ಚಳವಳಿ, ಭಾಷಾಪರವಾದ ಹೋರಾಟಗಳಿಗೆ ಮಾದರಿಯಾಗಿ ಇಂದಿಗೂ ತನ್ನ ನೆನಪನ್ನು ಉಳಿಸಿಕೊಂಡಿದೆ. ಹಿರಿ-ಕಿರಿಯರೆನ್ನದೆ, ಮೇಲು-ಕೀಳೆನ್ನದೇ ನಾಡಿನ ಎಲ್ಲ ವರ್ಗದ ಜನರ ಅಂತಃಪ್ರಜ್ಞೆಯನ್ನು ತಟ್ಟುವ ಮೂಲಕ ಆಳುವ ಸರ್ಕಾರವು ಕನ್ನಡಪರವಾದ ತೀರ್ಮಾನವನ್ನು ತೆಗೆದುಕೊಳ್ಳುವ ಹಾಗೆ ಮಾಡಿದ ಈ ಅಭೂತಪೂರ್ವ ಚಳವಳಿಗೆ ಈಗ ೪೦ ರ ಸಂಭ್ರಮ.

ಇತಿಹಾಸವನ್ನು ನೆನೆಯದೇ ಭವಿಷ್ಯವನ್ನು ಕಟ್ಟಲಾಗದು. ಗೋಕಾಕ್ ಚಳವಳಿಯ ಸಮೃದ್ಧ ಇತಿಹಾಸ ಕನ್ನಡ ನಾಡಿನಲ್ಲಿ ಕನ್ನಡವನ್ನು ಇನ್ನಷ್ಟು ಆಸ್ಥೆಯಿಂದ ಕಟ್ಟಲು ಪ್ರೇರಣೆ ನೀಡಲಿ ಎನ್ನುವ ಉದ್ದೇಶದಿಂದ ಗೋಕಾಕ್ ಚಳವಳಿಯ ಹಿನ್ನೋಟ-ಮುನ್ನೋಟ ಕಾರ್ಯಕ್ರಮವನ್ನು ರಾಜ್ಯ ಸರ್ಕಾರವು ಆಯೋಜಿಸಿದೆ. ಇದು
ನಿಜಕ್ಕೂ ಕನ್ನಡನಾಡಿನ ಹಬ್ಬ, ಕನ್ನಡಿಗರ ಹಬ್ಬವೇ ಸರಿ.

 

ಕನ್ನಡದ ಭಾಷೆ, ಅನ್ನದ ಭಾಷೆಯಾಗ ಬೇಕು
——————————————-
ತಾಯ್ತುಡಿಯ ಮಾತೆಂದರೆ ಅದು ಅದಮ್ಯ ಚೇತನ, ಅಡಿಗಡಿಗೂ ನುಡಿಯುವ, ಅಡಿಗಡಿಗೂ ಬೆರೆಯುವ ಸಿಹಿ ಜೇನ ನುಡಿಯಂತೆ
ಕನ್ನಡದ ಭಾಷೆ.
ಇಂಥ ಅಪರೂಪದ, ಕನ್ನಡ ಕಂಪಿನ
ಮಹತ್ವವನ್ನು ಸಾರುವ ಕೆಲಸ ತನ್ಮೂಲಕ ಕನ್ನಡ ಭಾಷೆಯನ್ನು ಎಲ್ಲೆಡೆಯೂ ಪಸರಿಸುವ ಕೈಂಕರ್ಯ
ನಮ್ಮದಾಗಬೇಕಿದೆ.
ಖ್ಯಾತ ಸಾಹಿತಿ ವಿ, ಕೃ ಗೋಕಾಕ್
ಡಾ ರಾಜಕುಮಾರ ಸೇರಿದಂತೆ ಅನೇಕ ಸಾಹಿತಿಗಳು, ಬರಹಗಾರರು, ಬುದ್ಧಿ ಜೀವಿಗಳು, ಪ್ರಜ್ಞಾವಂತರು,
ಹಲವಾರು ಪ್ರಗತಿಪರರು ಹೀಗೆ
ಎಲ್ಲ ಸಮಾನ ಮನಸ್ಕರು ಒಟ್ಟು ಗೂಡಿ ಅಹೋರಾತ್ರಿ ಹೋರಾಡಿದ ಫಲವೇ ಇಂದು ಗೋಕಾಕ್ ಚಳವಳಿ ಗೆ ಹೊಸ ರೂಪ ಬಂದಿದೆಯಾದರೂ
ಕನ್ನಡದ ಭಾಷೆ, ಅನ್ನದ ಭಾಷೆಯಾಗ ಬೇಕು ಕನ್ನಡ ಭಾಷೆ ತನ್ನದೇ ಅಸ್ಮಿತತೆಯನ್ನು ಗಟ್ಟಿಗೊಳಿಸಿಕೊಳ್ಳುವಲ್ಲಿ ನಮ್ಮ ನಿರಂತರ ಹೋರಾಟ ಜಾರಿಯಲ್ಲಿರುತ್ತದೆ

ಜೆ ಕಲಿಂ ಭಾಷ
ಕನ್ನಡ ಹಿರಿಯ ಹೋರಾಟಗಾರರು
ಹರಿಹರ

 

ಅಲ್ಲಾವುದ್ದೀನ ಯಮ್ಮಿ
ಪತ್ರಕರ್ತರು
ಕುಕನೂರ

Get real time updates directly on you device, subscribe now.

Comments are closed.

error: Content is protected !!