ರಾಷ್ಟಿಯ ಹೆದ್ದಾರಿ 50ರ ವಿವಿಧೆಡೆ 105 ಕೋಟಿ ರೂ.ವೆಚ್ಚದಲ್ಲಿ ಸೇತುವೆಗಳ ನಿರ್ಮಾಣಕ್ಕೆ ಭೂಮಿಪೂಜೆ

0

Get real time updates directly on you device, subscribe now.

 ಕೊಪ್ಪಳ ಲೋಕಸಭಾ ಕ್ಷೇತ್ರದ ವಾಪ್ತಿಯಲ್ಲಿನ ರಾಷ್ಟಿçÃಯ ಹೆದ್ದಾರಿ 50ರಲ್ಲಿನ ವಿವಿಧ ಕಡೆಗಳಲ್ಲಿ 105 ಕೋಟಿ ರೂ.ಗಳ ವೆಚ್ಚದಲ್ಲಿ ಸೇತುವೆಗಳ ನಿರ್ಮಾಣಕ್ಕೆ ಸಂಸದರಾದ ಕೆ.ರಾಜಶೇಖರ ಹಿಟ್ನಾಳ ಹಾಗೂ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಸೆ.28ರಂದು ಭೂಮಿಪೂಜೆ ನೆರವೇರಿಸಿದರು.
ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಗ್ರಾಮದ ಹತ್ತಿರದ ರಾಷ್ಟಿçÃಯ ಹೆದ್ದಾರಿ ಬಳಿಯಲ್ಲಿ ನಡೆದ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸಂಸದರಾದ ಕೆ.ರಾಜಶೇಖರ ಹಿಟ್ನಾಳ ಅವರು ಮಾತನಾಡಿ, ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಾಷ್ಟಿçÃಯ ಹೆದ್ದಾರಿ-50ರಲ್ಲಿ 29.89 ಕೋಟಿ ರೂ.ವೆಚ್ಚದಲ್ಲಿ ಮತೆಗಲ್ ಗ್ರಾಮದ ಹತ್ತಿರ ಮೇಲ್ಸೇತುವೆ ನಿರ್ಮಾಣಕ್ಕೆ, 27.20 ಕೋಟಿ ರೂ.ವೆಚ್ಚದಲ್ಲಿ ಶಹಾಪುರ ಗ್ರಾಮದ ಹತ್ತಿರ ಲಘು ವಾಹನ ಸಂಚರಿಸುವ ಕೆಳಸೇತುವೆ ನಿರ್ಮಾಣಕ್ಕೆ, 29.04 ಕೋಟಿ ರೂ.ವೆಚ್ಚದಲ್ಲಿ ಹುಲಿಗಿ ಹತ್ತಿರ ಮೇಲ್ಸೇತುವೆ ನಿರ್ಮಾಣಕ್ಕೆ ಮತ್ತು 19.43 ಕೋಟಿ ರೂ. ವೆಚ್ಚದಲ್ಲಿ ಹೊಸಳ್ಳಿ ಹತ್ತಿರ ಕೆಳ ಸೇತುವೆ ನಿರ್ಮಾಣಕ್ಕೆ ಸೆ.28ರಂದು ಭೂಮಿಪೂಜೆ ನಡೆದಿರುವುದು ಕೊಪ್ಪಳ ಇತಿಹಾಸದಲ್ಲಿ ಸ್ಮರಣೀಯವಾಗಿ ಉಳಿಯಲಿದೆ ಎಂದರು.
ಈ ಪ್ರದೇಶದಲ್ಲಿ ಸೇತುವೆಗಳು ನಿರ್ಮಾಣವಾಗಬೇಕು ಎಂದು ಹಲವಾರು ಬಾರಿ ಹೋರಾಟಗಳು ನಡೆದಿದ್ದವು. ಈ ಸೇತುವೆಗಳ ಮಂಜೂರಾತಿಯ ಪ್ರಯತ್ನದಲ್ಲಿ ಹಿರಿಯರಾದ ಕರಡಿ ಸಂಗಣ್ಣ ಅವರ ಶ್ರಮವು ಶ್ಲಾಘನೀಯವಾಗಿದೆ ಎಂದರು. ಈ ಪ್ರದೇಶದಲ್ಲಿ ಸೇತುವೆಗಳ ನಿರ್ಮಾಣವು ಅತೀ ಅವಶ್ಯಕತೆ ಇತ್ತು. ರಾಷ್ಟಿçÃಯ ಹೆದ್ದಾರಿ-50ರಲ್ಲಿ ಸೇತುವೆಗಳು ಇಲ್ಲದ ಕಾರಣ ಹಲವಾರು ವರ್ಷಗಳಿಂದ ವಿವಿಧೆಡೆ ಜನರು ರಸ್ತೆ ಅಪಘಾತದಲ್ಲಿ ಸಾವಿಗೀಡಾಗುವ ಪ್ರಕರಣಗಳು ಸಂಭವಿಸುತ್ತಿದ್ದವು. ಇನ್ಮೇಲೆ ಅದು ತಪ್ಪಲಿದೆ. ಈ ಸೇತುವೆಗಳು ನಿರ್ಮಾಣದಿಂದಾಗಿ ಸುಗಮ ಸಂಚಾರಕ್ಕೆ ಸಾಕಷ್ಟು ಅನುಕೂಲವಾಗಲಿದೆ ಎಂದರು.
ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಸೆ.28 ಸುದಿನವಾಗಿದೆ. ರಾಷ್ಟಿçÃಯ ಹೆದ್ದಾರಿ-50ರಲ್ಲಿ ಕೆಲ ಕಡೆಗಳಲ್ಲಿ ಸೇತುವೆಗಳನ್ನು ನಿರ್ಮಾಣ ಮಾಡಬೇಕು ಎಂಬುದು ಕ್ಷೇತ್ರದ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಅದು ಈಗ ಈಡೇರಿದೆ. ಈ ಮೂಲಕ ನಾವು ಜನರ ಬೇಡಿಕೆಗಳಿಗೆ ಸ್ಪಂದನೆ ನೀಡಿದ್ದೇವೆ ಎಂದು ತಿಳಿಸಿದರು.
ಹಿರಿಯ ಮುಖಂಡರಾದ ಕರಡಿ ಸಂಗಣ್ಣ ಅವರು ಮಾತನಾಡಿ, ರಾಷ್ಟಿçÃಯ ಹೆದ್ದಾರಿಯ ವಿವಿಧೆಡ ಸೇತುವೆಗಳು ಆಗಬೇಕು ಎಂಬುದು ಹಲವಾರು ವರ್ಷಗಳ ಹೋರಾಟವಾಗಿತ್ತು. ಸಂಸದರಾದ ಕೆ.ರಾಜಶೇಖರ ಹಿಟ್ನಾಳ ಮತ್ತು ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರ ಸತತ ಪ್ರಯತ್ನದಿಂದಾಗಿ ಸೇತುವೆಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಗುತ್ತಿರುವುದು ಕೊಪ್ಪಳದಲ್ಲಿ ಇತಿಹಾಸವಾಗಿ ಉಳಿಯಲಿದೆ ಎಂದರು. ಸಂಸದರು ಮತ್ತು ಶಾಸಕರ ಜನಪರವಾದ ಆಶಯದ ರಾಜಕೀಯದ ಇಚ್ಛಾಸಕ್ತಿಯು ಶ್ಲಾಘನೀಯವಾಗಿದೆ ಎಂದರು.
ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್, ಮುಖಂಡರಾದ ಟಿ.ಜನಾರ್ಧನ, ಬಾಲಚಂದ್ರ ಮುನಿರಾಬಾದ್, ಯಂಕಪ್ಪ ಹೊಸಳ್ಳಿ, ಮಾರುತಿ ಬಗನಾಳ, ಪ್ರಸನ್ನ ಗಡಾದ, ವೆಂಕಟೇಶ ಕಂಪಸಾಗರ, ಪಾಲಾಕ್ಷಪ್ಪ ಗುಂಗಾಡಿ, ವಿಜಯಕುಮಾರ, ಶರಣಪ್ಪ ಸಜ್ಜನ, ಖಾಜಾವಲಿ ನಿಂಗಾಪುರ, ನಿಂಗನಗೌಡ ಹೊಸಳ್ಳಿ, ಶರಣಪ್ಪ ಹೊಟ್ಟಿ, ಹನುಮಂತಪ್ಪ ಲಿಂಗದಳ್ಳಿ, ಹನುಮಪ್ಪ ಕಂಪಸಾಗರ, ಭರಮಪ್ಪ ಹೊಸಳ್ಳಿ, ನಿಂಗಜ್ಜ ಶಹಾಪುರ, ಗಿರೀಶ ಹಿರೇಮಠ, ಖಾಜಾವಲಿ ಹುಲಗಿ, ತಹಸೀಲ್ದಾರ ವಿಠ್ಠಲ ಚೌಗಲಾ, ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಹೊಸಳ್ಳಿ, ಮುನಿರಾಬಾದ್, ಹುಲಿಗಿ, ಹಿಟ್ನಾಳ, ಅಗಳಕೇರಾ, ಶಿವಪುರ ಮತ್ತು ಬೇವಿನಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.
ಮಂಜುನಾಥ ಕಟ್ಟಿ ಸ್ವಾಗತಿಸಿದರು. ಹೊಸ ಲಿಂಗಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಂಪ್ರಿತ ಅರಕೇರಿ ಅವರು ಸ್ವಾಗತ ಗೀತೆ ಹೇಳಿದರು. ಸಮಾರಂಭದಲ್ಲಿ ಹೊಸಲಿಂಗಾಪುರ, ಹೊಸಳ್ಳಿ, ಮುನಿರಾಬಾದ್, ಹುಲಿಗಿ, ಹಿಟ್ನಾಳ, ಅಗಳಕೇರಾ, ಶಿವಪುರ ಮತ್ತು ಬೇವಿನಹಳ್ಳಿ ಮತ್ತು ಇನ್ನೀತರ ಗ್ರಾಮಸ್ಥರು ಹಾಜರಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!
%d bloggers like this: