ತಂಬಾಕು ಪದಾರ್ಥ ಮಾರಾಟ ಅಂಗಡಿಗಳ ಮೇಲೆ ದಾಳಿ; 21 ಪ್ರಕರಣ ದಾಖಲಿಸಿ ಬಿಸಿಮುಟ್ಟಿಸಿದ ಅಧಿಕಾರಿಗಳು
ನಗರದ ಜಿಲ್ಲಾ ಸರಕಾರಿ ಆಸ್ಪತ್ರೆ, ಆರ್.ಟಿ.ಓ ಕಚೇರಿ ಸೇರಿದಂತೆ ವಿವಿಧೆಡೆ ಸಂಚರಿಸಿದ ಅಧಿಕಾರಿಗಳು ತಂಬಾಕು ಅಥವಾ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ ಕೊಟ್ಟಾ-2003 ಕಾಯ್ದೆಯ ಸೆಕ್ಷನ್:4ರಡಿಯಲ್ಲಿ 21 ಪ್ರಕರಣಗಳನ್ನು ದಾಖಲಿಸಿ 3,600 ರೂ ದಂಡ ಹಾಕಿದರು.
ಕಾರ್ಯಾಚರಣೆಯಲ್ಲಿ ಜಿಲ್ಲಾ ಸಲಹೆಗಾರರಾದ ಡಾ.ನಾಗೇಂದ್ರ, ಸಮಾಜ ಕಾರ್ಯಕರ್ತರಾದ ಸರಸ್ವತಿ, ಆಪ್ತ ಸಮಾಲೋಚಕರಾದ ಶಾಂತಾ ಕಟ್ಟಿಮನಿ ಸೇರಿದಂತೆ ಇತರರು ಇದ್ದರು.
Comments are closed.