ಶೀಘ್ರದಲ್ಲಿ 450 ಬೆಡ್ಡಿನ ಆಸ್ಪತ್ರೆ ಉದ್ಘಾಟನೆ-   ಕೆ. ರಾಘವೇಂದ್ರ ಹಿಟ್ನಾಳ

0

Get real time updates directly on you device, subscribe now.

 

  ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅಡಿಗಲ್ಲು ನೆರವೇರಿಸಿದರು.

ಹಿಟ್ನಾಳ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ 7.19 ಕೋಟಿ ಅನುಧಾನದಲ್ಲಿ ವಿವಿಧ ಕಾಮಗಾರಿಗಳ ಅಡಿಗಲ್ಲು.

 

ಕೊಪ್ಪಳ : ಕೊಪ್ಪಳ ವಿಧಾನಸಭ ಕ್ಷೇತ್ರದ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಅವರು ಇಂದು ಹಿಟ್ನಾಳ ಜಿಲ್ಲಾ ಪಂಚಾಯತ್ ವ್ಯಾಪ್ತಿಯ  ಹಿಟ್ನಾಳ, ಕಂಪಸಾಗರ, ಹುಲಿಗಿ, ಮುನಿರಬಾದ್ ಆರ್ ಎಸ್, ಹಳೇ ಲಿಂಗಾಪುರ, ಹೊಸ ಲಿಂಗಾಪುರ,ಮಟ್ಟಿ ಮುದ್ಲಾಪುರ, ಹೊಳೆ ಮುದ್ಲಾಪುರ, ಮುನಿರಾಬಾದ್ ಡ್ಯಾಮ್ ಹಾಗೂ ಹೊಸಳ್ಳಿ ಗ್ರಾಮಗಳಲ್ಲಿ ಅಂದಾಜು ಮೊತ್ತ 7.19 ಕೋಟಿ ಮೊತ್ತದ ಅನುಧಾನದಲ್ಲಿ ವಿವಿಧ ಕಾಮಗಾರಿಗಳ ಅಡಿಗಲ್ಲು ನೆರವೇರಿಸಿ,ಜೊತೆಗೆ ಜನಸಂಪರ್ಕ ಸಭೆಯನ್ನು ಹಮ್ಮಿಕೊಂಡು ಜನರ ಅಹವಾಲು ಆಲಿಸಿದರು.

 

ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಕೊಪ್ಪಳದ ಮೆಡಿಕಲ್ ಕಾಲೇಜ್ ಪಕ್ಕದಲ್ಲಿ 193 ಕೋಟಿ ಮೊತ್ತದಲ್ಲಿ ನಿರ್ಮಾಣ ಆಗುತ್ತಿರುವ 450 ಬೆಡ್ಡಿನ ಆಸ್ಪತ್ರೆಯನ್ನು ಅಕ್ಟೋಬರ್ ಒಂದನೇ ಅಥವಾ ಎರಡನೇ ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟಿಸಲಾಗುವುದು. ಈ ಆಸ್ಪತ್ರೆ ಯಿಂದ ನಮ್ಮ ಜಿಲ್ಲೆ ಸೇರಿದಂತೆ ಸುತ್ತು ಮುತ್ತಲಿನ ನಾಲ್ಕೈದು ಜಿಲ್ಲೆಗಳಿಗೆ ನೆರವಾಗಲಿದೆ.

 

ಮೊನ್ನೆ ಕಲಬುರ್ಗಿ ಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಮ್ಮ ಕೊಪ್ಪಳ ಕೊಪ್ಪಳದ 450 ಬೆಡ್ಡಿನ ಆಸ್ಪತ್ರೆಯ ಪೀಠೋಪಕರಣಗಳ ಖರಿದಿಗೆ ಅನುಧಾನ ಮಿಸಲಿಟ್ಟು ಸಚಿವ ಸಂಪುಟದಲ್ಲಿ ಅನುಮೋದನೆ ಆಗಿದೆ.ಗದಗ,ಚಾಮರಾಜನಗರ ಹಾಗೂ ನಮ್ಮ ಕೊಪ್ಪಳ ಆಸ್ಪತ್ರೆ ಸೇರಿದಂತೆ 149 ಕೋಟಿ ಅನುಧಾನ ನೀಡಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದರು.

 

ಕೊಪ್ಪಳಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ :

 

ಕೊಪ್ಪಳಕ್ಕೆ ಒಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಮಂಜೂರು ಮಾಡುವಂತೆ ಹೀಗಾಗಲೇ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ, ನಾಡಿದ್ದು ತುಂಗಭದ್ರಾ ಜಲಾಶಯಕ್ಕೆ ಭಾಗಿನ ಅರ್ಪಿಸಲು ಆಗಮಿಸುತ್ತಿರುವ ಮುಖ್ಯಮಂತ್ರಿಗಳಿಗೆ ಮತ್ತೊಮ್ಮೆ ಜಿಲ್ಲೆಯ ಎಲ್ಲಾ ನಾಯಕರುಗಳ ಜೊತೆಗೂಡಿ ಇನ್ನೊಂದು ಸಾರಿ ಮನವಿ ಮಾಡುತ್ತೇವೆ ಎಂದರು.

 

ಕೊಪ್ಪಳ ವಿಧಾನಸಭ ಕ್ಷೇತ್ರದಲ್ಲಿ ಹೀಗಾಗಲೇ ಹದಗೆಟ್ಟಿರುವ ರಸ್ತೆಗಳ ಅಭಿವೃದ್ಧಿಗೆ ಅನುಧಾನ ಮಿಸಲಿಟ್ಟು ಒಂದೊಂದೇ ರಸ್ತೆಯನ್ನು ಕೈಗೆತ್ತಿಕೊಂಡು ಅಭಿವೃದ್ಧಿ ಮಾಡುವ ಕೆಲಸ ಮಾಡುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ನಮ್ಮ ಕ್ಷೇತ್ರದಲ್ಲಿನ ರಸ್ತೆಗಳ ಅಭಿವೃದ್ಧಿಗೆ ಇನ್ನೂ 50 ಕೋಟಿ ಅನುಧಾನವನ್ನು ಮಂಜೂರು ಮಾಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೇನೆ, ಇದಕ್ಕೆ ಮುಖ್ಯಮಂತ್ರಿಗಳು ಸಕರಾತ್ಮಕವಾಗಿ ಸ್ಪಂದಿಸಿದ್ದು ಮಂಜೂರು ಮಾಡುವ ಭರವಸೆ ನೀಡಿದ್ದಾರೆ ಎಂದರು.

 

ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದ ಎಲ್ಲಾ  ಗ್ಯಾರಂಟಿ ಯೋಜನೆಗಳನ್ನು ಯಥವತ್ತಾಗಿ ಜಾರಿ ಮಾಡಿದ ದೇಶದಲ್ಲಿ ಯಾರಾದರೂ ಮುಖ್ಯಮಂತ್ರಿ ಇದ್ರೆ ಅದು ಸಿದ್ದರಾಮಯ್ಯನವರು. ಐದು ಗ್ಯಾರಂಟಿ ಯೋಜನೆಗಳಿಗೆ ವರ್ಷಕ್ಕೆ 50 ಸಾವಿರ ಕೋಟಿ ಅನುಧಾನವನ್ನು ಮಿಸಲಿಟ್ಟಿದೆ.

 

ಹುಲಿಗಿಗೆ ಪ್ಲೈ ಓವರ್ ನ್ನು ಹಿಂದಿನ ಸಂಸದರಾದ ಸಂಗಣ್ಣ ಕರಡಿ ಅವರು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಮಂಜೂರು ಮಾಡಿಸಿದ್ದರು, ಅದನ್ನು ಅಚ್ಚುಕಟ್ಟಾಗಿ ನಿರ್ಮಾಣ ಮಾಡಿ, ಸಂಚರಿಸಲು ಸಾರ್ವಜನಿಕರಿಗೆ ಅವಕಾಶ ಮಾಡಿ ಕೊಡುತ್ತೇವೆ. ಇದು ಆದರೆ ಟ್ರಾಫಿಕ್ ಸಮಸ್ಯೆ ನಿವಾರಣೆ ಆಗಲಿದೆ.

 

ಈ ಸಂಧರ್ಭದಲ್ಲಿ ಮಾಜಿ ಸಂಸದರಾದ ಸಂಗಣ್ಣ ಕರಡಿ,ಮಾಜಿ ಜಿ. ಪಂ ಅಧ್ಯಕ್ಷ ಜನಾರ್ಧನ್ ಹುಲಿಗಿ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣರೆಡ್ಡಿ, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಗಾಳೆಪ್ಪ ದದೇಗಲ್, ರಾಮಣ್ಣ ಚೌಡ್ಕಿ,ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಬಾಲಚಂದ್ರ ಮುನಿರಾಬದ್,ಪಾಲಾಕ್ಷಪ್ಪ ಗುಂಗಾಡಿ, ಈರಣ್ಣ ಹುಲಿಗಿ, ಯಂಕಪ್ಪ ಹೊಸಳ್ಳಿ,ಪ್ರಶಾಂತ್ ಗೌಡ್ರು, ಖಜಾವಾಲಿ ಜವಳಿ, ಜಿಯಾಸಾಬ್, ರಾಮಮೂರ್ತಿ,ಶರಣಪ್ಪ ಉಪ್ಪಾರ, ಬಸಣ್ಣ ಬೇವೂರು ಹೊಸಳ್ಳಿ, ನಿಂಗಜ್ಜ ಶಹಪುರ್, ಗಿರೀಶ್ ಶಹಾಪುರ,ಹನಮಂತಪ್ಪ ಹ್ಯಾಟಿ, ಉಪ ವಿಭಾಗಧಿಕಾರಿ ಮಹೇಶ್ ಮಾಲಗಿತ್ತಿ, ತಹಶಿಲ್ದಾರ್ ವಿಠ್ಠಲ್ ಚೌಗಲೇ, ತಾಲೂಕ ಪಂಚಾಯತ್ ಇಓ ದುಂಡೇಶ್ ತುರಾದಿ, ಅಶೋಕ ಹಿಟ್ನಾಳ, ನಾಗರಾಜ್ ಪಠವಾರಿ, ರಾಜು ಬಂಡಿಹಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

 

Get real time updates directly on you device, subscribe now.

Leave A Reply

Your email address will not be published.

error: Content is protected !!
%d bloggers like this: