ಶ್ರೀ ಗವಿಸಿದ್ದೇಶ್ವರ ಪದವಿ ಕಾಲೇಜಿನಲ್ಲಿ  ನೆಲ್ಸನ್ ಮಂಡೇಲಾ  ಜನ್ಮ ದಿನಾಚರಣೆ           

Get real time updates directly on you device, subscribe now.

       
ಕೊಪ್ಪಳ : ಮಹಾತ್ಮಾ ಗಾಂಧೀಜಿಯವರ ಆದರ್ಶಗಳಿಂದ   ಪ್ರಭಾವಿತಗೊಂಡಂತಹ ನೆಲ್ಸನ್ ಮಂಡೇಲಾರವರು  ದಕ್ಷಿಣ ಆಫ್ರಿಕದಲ್ಲಿ ವರ್ಣ  ದ್ವೇಷದ ವಿರುದ್ಧ  ಹೋರಾಡಿ  ಕಪ್ಪು ಮತ್ತು ಬಿಳಿಯರ ಮಧ್ಯದ ಅಂತರವನ್ನು ತೊಡೆದು ಹಾಕಿದರೆಂದು ಇರಕಲ್ ಗಡ  ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕೀಯರಾದ ಶ್ರೀಮತಿ ಆಶಾ ಸಿ  ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ಇಂದು  ಶ್ರೀ ಗವಿಸಿದ್ದೇಶ್ವರ ಪದವಿ ಮಹಾ ವಿದ್ಯಾಲಯದಲ್ಲಿ ಇತಿಹಾಸ ವಿಭಾಗದಿಂದ ಜರುಗಿದ ನೆಲ್ಸನ್ ಮಂಡೇಲಾರ 105ನೇ ಜನ್ಮ ದಿನೋತ್ಸವ ಮತ್ತು ನೆಲ್ಸನ್ ಮಂಡೇಲಾ
ರ  ಬದುಕು ಮತ್ತು ಹೋರಾಟದ ಕುರಿತು ವಿಶೇಷ  ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸಗೈದರು. ಮುಂದುವರಿದು ಮಂಡೇಲಾ  ಅವರು ಬಡತನದಲ್ಲಿ  ಬಾಲ್ಯ ಜೀವನ ನಡೆಸಿ ಶಾಲೆಗೆ ಹೋದಂತಹ  ಮೊದಲ  ಕಪ್ಪುವರ್ಣಿಯ ವ್ಯಕ್ತಿಯಾಗಿ ಗುರುತಿಸಿ ಕೊಂಡಿದ್ದರು. ಕಾನೂನು ಪದವಿಯನ್ನು ಪಡೆದು  ರಾಜಕೀಯ ರಂಗವನ್ನು ಸಹ ಪ್ರವೇಶ ಮಾಡಿದ್ದರು.  ಅಖಂಡ 27 ವರ್ಷಗಳ ಕಾಲ ಜೈಲುವಾಸವನ್ನು ಅನುಭವಿಸಿ  ಬಿಡುಗಡೆಗೊಂಡು  ದಕ್ಷಿಣ ಆಫ್ರಿಕಾದ ಮೊಟ್ಟ ಮೊದಲ ಕಪ್ಪು ವರ್ಣಿಯ ಅಧ್ಯಕ್ಷರಾಗಿ ಕಾಣಿಸಿಕೊಳ್ಳುವುದರ ಮೂಲಕ  ಅಂತರಾಷ್ಟ್ರೀಯ  ಹೋರಾಟಗಾರರಾಗಿ ವರ್ಣ ದ್ವೇಷವನ್ನು ಟೀಕಿಸುತ್ತ ಸರ್ವರಲ್ಲಿ ಸಮಾನತೆಯನ್ನು ಬೋಧಿಸಿದರ  ನಿಮಿತ್ಯವಾಗಿ ವಿಶ್ವಸಂಸ್ಥೆಯು 1994ರಲ್ಲಿ  ವಿಶ್ವದಲ್ಲಿ ವರ್ಣ  ತಾರತಮ್ಯತೆಯನ್ನು ತೊಡೆದು ಹಾಕಲಾಯಿತು.ವರ್ಣ ತಾರತಮ್ಯ ವಿರುದ್ಧವಾಗಿ ಹೋರಾಡಿದ ಇವರ ಹೋರಾಟವನ್ನು ಗಮನಿಸಿದ ವಿಶ್ವ ಸಂಸ್ಥೆ 2009 ದಿಂದ ಇವರ  ಜನ್ಮದಿನವನ್ನು  ಅಂತರಾಷ್ಟ್ರೀಯ ನೆಲ್ಸನ್ ಮಂಡೇಲಾ ದಿನವನ್ನಾಗಿ  ಆಚರಣೆ ಮಾಡುತ್ತ ಬರಲಾಗುತ್ತಿದೆ ಎಂದರು. ಪ್ರಾಧ್ಯಾಪಕರಾದ ಶರಣಬಸಪ್ಪ ಬಿಳಿಎಲಿ ಅವರು ಉಪಸ್ಥಿತರಿದ್ದರು.  ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ಚನ್ನಬಸವ ಅವರು  ವಹಿಸಿದ್ದರು.  ಪ್ರಾಸ್ತಾವಿಕ ನುಡಿಗಳನ್ನು ಡಾ.  ರಾಜು ಹೊಸಮನಿ,   ಪ್ರಾರ್ಥನೆ ಕು. ವೈದೇಹಿ,  ಸ್ವಾಗತ ಕು. ಪ್ರೇಮಾ,  ವಂದನಾರ್ಪಣೆ ಕು. ಜಯಶ್ರೀ  ಹಾಗೂ  ನಿರೂಪಣೆಯನ್ನು ಕು. ರಹಿಮ್ ನೆರವೇರಿಸಿದರು.

Get real time updates directly on you device, subscribe now.

Comments are closed.

error: Content is protected !!