ಕೊಪ್ಪಳದಲ್ಲಿ ಇಂದು ಇಸ್ಲಾಮಿಕ್ ಶಾಲೆಗಳ ಮಕ್ಕಳಿಗೆ ಖಿರಾಅತ್ ಖುರ್ ಆನ್ ಪಠಣ ಸ್ಪರ್ಧೆ.
ಕೊಪ್ಪಳ : ನಗರದ ಫಿರ್ದೋಸ್ ಸಾಂಸ್ಕೃತಿಕ, ಕ್ರೀಡಾ ಹಾಗೂ ತರಬೇತಿ ಸಂಸ್ಥೆ (ರಿ) ವತಿಯಿಂದ ದಿವಂಗತ ನಿವೃತ್ತ ಶಿಕ್ಷಕ ಹಾಜಿ ಮೊಹಮ್ಮದ್ ವಹೀದುದ್ದೀನ್ ಅಹ್ಮದ್ ಇವರ ಸ್ಮರಣಾರ್ಥ 15ನೇ ಸೆಪ್ಟೆಂಬರ್ 2024 ರವಿವಾರ ರಂದು ಫಿರ್ದೋಸ್ ಮಸೀದಿಯ ಹಾಲ್ ನಲ್ಲಿ ಬೆಳಿಗ್ಗೆ 9 ರಿಂದ 1 ಗಂಟೆಯವರೆಗೆ ಖಿರಾಅತ್ ಖುರ್ ಆನ್ ಪಠಣ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇಸ್ಲಾಮಿಕ್ ಶಾಲೆಗಳ ಮಕ್ಕಳಿಗೆ ತಿಳಿಸಲು ತುಂಬಾ ಸಂತೋಷ ಮತ್ತು ಹರ್ಷವೆನಿಸುತ್ತಿದೆ, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ (ಹೊಸಪೇಟೆ) ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಇಸ್ಲಾಮಿಕ್ ಶಾಲೆಗಳ ಮದರಸಾ ಮಕ್ಕಳಿಗೆ ಖಿರಾಅತ್ ಖುರ್ ಆನ್ ಎ ಕಲಾಂ ಪಾಕ್ ಸ್ಪರ್ಧೆ ನಡೆಸಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸುತ್ತಿದೆ.ನಗದು ಬಹುಮಾನದೊಂದಿಗೆ ಪ್ರಶಂಸಾ ಪತ್ರವನ್ನೂ ನೀಡಲಾಗುವುದು ಆದ್ದರಿಂದ, ಎಲ್ಲಾ ಇಸ್ಲಾಮಿಕ್ ಮದರಸಾಗಳಿಂದ ನಿಮ್ಮ ಸಂಸ್ಥೆಗಳಿಗೆ ಒಬ್ಬ ವಿದ್ಯಾರ್ಥಿ ಮಾತ್ರ ಹಾಜರಾಗಬೇಕು ಎಂದು ನಿಮ್ಮನ್ನು ಪ್ರಾಮಾಣಿಕವಾಗಿ ಮನವಿ ಮಾಡಿಕೊಳ್ಳುತ್ತೇವೆ.
ಕೊಪ್ಪಳ ನಗರದ ಖಾನ್ ಸಾಬ್ ಚಾಳ ಏರಿಯಾದಲ್ಲಿ ಫಿರ್ದೋಸ್ ನಗರದ ಫಿರ್ದೋಸ್ ಸಾಂಸ್ಕೃತಿಕ, ಕ್ರೀಡಾ ಹಾಗೂ ತರಬೇತಿ ಸಂಸ್ಥೆ (ರಿ) ಹೆಚ್ಚಿನ ಮಾಹಿತಿಗಾಗಿ 9900924972, 9343310118 ಈ ಸಂಖ್ಯೆಗಳಿಗೆ ಸಂಪರ್ಕಿಸಲು ಕೋರಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫಿರ್ದೋಸ್ ಸಾಂಸ್ಕೃತಿಕ, ಕ್ರೀಡಾ ಹಾಗೂ ತರಬೇತಿ ಸಂಸ್ಥೆ (ರಿ) ಅಧ್ಯಕ್ಷ ಮಹಮ್ಮದ್ ರಫಿಯುದ್ದೀನ್ ಅಹಮದ್ ವಹಿಸುವರು.
ಉದ್ಘಾಟನೆ: ಮಸ್ಜಿದ್ ಎ ಫಿರ್ದೋಸ್ ಕಮಿಟಿ ಅಧ್ಯಕ್ಷ ಅಲಿ ಜನಾಬ್ ಎಂ.ಉಸ್ಮಾನ್ ಅಲಿಖಾನ್ ನೆರವೇರಿಸುವರು.ಮುಖ್ಯ ಅತಿಥಿಗಳು: ಆಲಿ ಜನಾಬ್ ಮೌಲಾನಾ ಮುಫ್ತಿ ಮೊಹಮ್ಮದ್ ನಜೀರ್ ಅಹಮದ್ ಸಾಹಬ್ ಖತೀಬ್ ವೋ ಇಮಾಮ್ ಮಸ್ಜಿದ್-ಎ-ಯೂಸುಫಿಯಾ,
ವಿಶೇಷ ಆಹ್ವಾನಿತರು : ಫಿರ್ದೋಸ್ ನಗರದ ಹಿರಿಯ ಮುಖಂಡ ಬಹದ್ದೂರ್ ಖಾನ್ ಸಾಬ್, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಫಝಲ್ ಅಹಮದ್ ಖಾನ್,ಮುಸ್ಲಿಂ ಶಾದಿ ಮಹಲ್ ಕಮಿಟಿ ಅಧ್ಯಕ್ಷ ಅಜೀಜ್ ಚೌಥಾಯಿ, ಎಂ.ಪಾಶಾ ಕಾಟನ. ಪತ್ರಕರ್ತ ಎಂ.ಸಾಧಿಕ್ ಅಲಿ, ಜಮೀರ್ ಅಹ್ಮದ್. ಮದರಸಾ ಎ ಫಿರ್ದೋಸ್ ಉಲ್ ಉಲೂಮ್
ಮೌಲಾನಾ ಸಿರಾಜುದ್ದೀನ್ ರಶಾದಿ ಸಾಹಬ್. ನಿರೂಪಣೆ ಎಂ.ಬದಿಯುದ್ದೀನ್ ಅಹಮದ್ (ನವೀದ್) ನಡೆಸಿಕೊಡುವರೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
Comments are closed.