ಪ್ರಜಾಪ್ರಭುತ್ವ ದಿನ: ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ ಅವರಿಂದ ಶುಭ ಸಂದೇಶ

Get real time updates directly on you device, subscribe now.

ಕೊಪ್ಪಳ : ಜನತೆಗೆ ನಿತ್ಯ ಜೀವಪರ ಸಂದೇಶ ನೀಡುತ್ತ ಶ್ರೇಷ್ಠ ವಾಗ್ಮಿಗಳು, ಜೀವಪರ ಚಿಂತಕರು ಎಂದೇ ಜಾಗತಿಕವಾಗಿ ಹೆಸರಾದ ಕೊಪ್ಪಳ ಜಿಲ್ಲೆಯ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಯವರು, ಸೆ.15ರಂದು ನಡೆಯಲಿರುವ ಐತಿಹಾಸಿಕ ಅಂತಾರಾಷ್ಟಿçÃಯ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆಯ ಮಾನವ ಸರಪಳಿ ಕಾರ್ಯಕ್ರಮದ ಬಗ್ಗೆ ಕೊಪ್ಪಳ ಜಿಲ್ಲೆಯ ಜನತೆಗೆ ಸಂದೇಶ ರವಾನಿಸಿದ್ದಾರೆ.
‘ಮನುಷ್ಯ ಸ್ವಭಾವತಹ ಸಂತೋಷ ಮತ್ತು ಸ್ವಾತಂತ್ರö್ಯವನ್ನು ಬಯಸುತ್ತಾನೆ. ಭಾರತ ದೇಶವು ನಮಗೆಲ್ಲರಿಗೂ ಸಂತೋಷದಿAದ ಬದುಕಲು ಅವಕಾಶ ಕೊಟ್ಟರೆ, ಸಂವಿಧಾನವು ಸ್ವೇಚ್ಛೆಯಿಲ್ಲದ ಸ್ವಾತಂತ್ರö್ಯವನ್ನು ಕೊಟ್ಟಿದೆ. ಭಾರತದ ತ್ರಿವರ್ಣ ಧ್ವಜದ ಅಡಿಯಲ್ಲಿ ಹಿಂದೆ, ಇಂದು, ಮುಂದು ನಾವೆಲ್ಲರೂ ಒಂದೇ ಎನ್ನುವ ಪ್ರಜಾಪ್ರಭುತ್ವದ ತತ್ವವು ನಮ್ಮೆಲ್ಲರ ಅಂತರAಗದಲ್ಲಿ ಬೆಳಗಲಿ, ಮಾನವ ಸರಪಳಿ ಮಹಾತ್ಕಾರ್ಯವು ಯಶಸ್ವಿಯಾಗಲೆಂದು ಶುಭ ಹಾರೈಸುತ್ತೇವೆ.’ ಎಂದು ನಾಡ ಪ್ರಸಿದ್ಧ ಶ್ರೀ ಗವಿಸಿದ್ಧೇಶ್ವರ ಸಂಸ್ಥಾನ ಶ್ರೀ ಗವಿಮಠದ ಶ್ರಿ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಕೊಪ್ಪಳ ಜಿಲ್ಲೆಯ ಜನತೆಗೆ ಶುಭ ಸಂದೇಶ ನೀಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!