ಕೊಪ್ಪಳ ಜಿಲ್ಲೆ : ಕಳಪೆ ಆಹಾರ ಮಾರಾಟ ಮಾಡಿದ್ದಕ್ಕೆ ಲಕ್ಷಾಂತರ ದಂಡ ಶಿಕ್ಷೆ

0

Get real time updates directly on you device, subscribe now.

ಕೊಪ್ಪಳ ತಾಲೂಕಿನಲ್ಲಿ ಕಳಪೆ ಗುಣಮಟ್ಟದ ಆಹಾರ ಉತ್ಪಾದಕರು ಮತ್ತು ಮಾರಾಟಗಾರರಿಗೆ ದಂಡ ವಿಧಿಸಿ ಬಿಸಿ ಮುಟ್ಟಿಸಲಾಗಿದೆ.
ಕೊಪ್ಪಳ ತಾಲೂಕಿನ ಕಳಪೆ ಗುಣಮಟ್ಟದ ಸಾಂಬಾರ್ ಮಸಾಲಾ ಉತ್ಪಾದಕರಿಗೆ ರೂ.1 ಲಕ್ಷ, ಗಂಗಾವತಿ ತಾಲೂಕಿನ ಕಳಪೆ ಗುಣಮಟ್ಟದ ಉಪ್ಪು ಮಾರಾಟಗಾರರಿಗೆ 1.5 ಲಕ್ಷ ರೂ. ಹಾಗೂ ಯಲಬುರ್ಗಾ ತಾಲೂಕಿನಲ್ಲಿ ಕಳಪೆ ಗುಣಮಟ್ಟದ ಸಾಂಬಾರ್ ಮಸಾಲಾ ಉತ್ಪಾದಕರಿಗೆ 1 ಲಕ್ಷ ರೂ., ಕಳಪೆ ಗುಣಮಟ್ಟದ ಉಪ್ಪು ಉತ್ಪಾದಕರಿಗೆ 75 ಸಾವಿರ ರೂ.ದಂಡ ವಿಧಿಸಿ ಆದೇಶಿಸಲಾಗಿದೆ.
ಪ್ರಕರಣದ ಹಿನ್ನೆಲೆ : ಕೊಪ್ಪಳ ಜಿಲ್ಲೆಯ ಆಹಾರ ಸುರಕ್ಷತಾಧಿಕಾರಿಗಳು ಜೂನ್ ತಿಂಗಳಲ್ಲಿ 97 ಸರ್ವೇ ಆಹಾರ ಮಾದರಿ ಹಾಗೂ 20 ಕಾನೂನಾತ್ಮಕ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ವಿಭಾಗೀಯ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಅದರಲ್ಲಿ ಕೊಪ್ಪಳ ತಾಲೂಕಿನಲ್ಲಿ ‘ಸಾಂಬಾರ್ ಮಸಾಲಾ ಪಾಕೆಟ್’, ಗಂಗಾವತಿ ತಾಲೂಕಿನಲ್ಲಿ ‘ಉಪ್ಪು’ ಹಾಗೂ ಯಲಬುರ್ಗಾ ತಾಲೂಕಿನಲ್ಲಿ ‘ಸಾಂಬಾರ್ ಮಸಾಲಾ ಪಾಕೇಟ್’ ಮತ್ತು ‘ಉಪ್ಪು’ಗಳು ಕಳಪೆ ಆಹಾರ ಎಂದು ಪ್ರಯೋಗಾಲಯವು ವರದಿ ನೀಡಿದ ಪ್ರಯುಕ್ತ ಆಹಾರ ಸುರಕ್ಷತಾಧಿಕಾರಿಗಳು ಈ ಮೇಲಿನ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಉತ್ಪಾದನೆ ಹಾಗೂ ಮಾರಾಟ ಮಾಡುತ್ತಿದ್ದವರ ವಿರುದ್ಧ ಆಹಾರ ಸುರಕ್ಷತಾಧಿಕಾರಿಗಳು ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ ಕೊಪ್ಪಳ ಇಲಾಖೆಯಿಂದ ಮಾನ್ಯ ಅಪರ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದರು.
ಅದರಂತೆ ಸೆ.12ರಂದು ಕೊಪ್ಪಳ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಸಿದ್ದರಾಮೇಶ್ವರ್ ಅವರ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಈ ವೇಳೆ ಅಪರ ಜಿಲ್ಲಾಧಿಕಾರಿಗಳು ಒಂದೆ ದಿನದಲ್ಲಿ ಒಟ್ಟು 4.25 ಲಕ್ಷ ರೂ.ಗಳ ದಂಡ ವಿಧಿಸಿದರು. ಇನ್ಮುಂದೆ ಕಳಪೆ ಗುಣಮಟ್ಟದ ಆಹಾರ ವಸ್ತುಗಳನ್ನು ಮಾರಾಟ ಮಾಡಿದಲ್ಲಿ ಶಾಸ್ವತವಾಗಿ ಆಹಾರ ಉತ್ಪಾದನೆಯ ಪರವಾನಿಗೆ ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಿದರು.

Get real time updates directly on you device, subscribe now.

Leave A Reply

Your email address will not be published.

error: Content is protected !!
%d bloggers like this: