ವಿದ್ಯಾರ್ಥಿಗಳಿಂದ ರಾಷ್ಟ್ರ ಮಟ್ಟದ ಸಾಧನೆಗೆ ಪ್ರಶಂಸೆ: ಸಂಜಯ ಕೊತಬಾಳ

Get real time updates directly on you device, subscribe now.


ಕೊಪ್ಪಳ: ಆಪ್ತಾಸ್ ಆಯುರ್ವೇದ ಸ್ವಯಂ ಸೇವಾ ಸಂಶ್ಥೆಯು ಆಯೋಜಿಸಿದ್ದ ಆಯುರ್‌ಗ್ರಾಮ ೨.೦ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಕೊಪ್ಪಳದ ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯದ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಮಹಾ ವಿದ್ಯಾಲಯಕ್ಕೆ ಕೀರ್ತಿಯನ್ನು ತಂದಿದ್ದಾರೆ ಎಂದು ಎಸ್.ಜಿ.ವಿ.ವಿ. ಟ್ರಸ್ಟ ಅಧ್ಯಕ್ಷರಾದ ಸಂಜಯ ಕೊತಬಾಳ ತಿಳಿಸಿದರು.
ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಫೋಟೋ ಸೆಷನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶುಭ ಕೋರುತ್ತ ಮಾತನಾಡಿದ ಅವರು, ಈ ಒಂದು ಪ್ರಶಸ್ತಿಯು ಮುಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ. ಇಂತಹ ವೈವಿದ್ಯಮಯ ಕಾರ್ಯಕ್ರಮಗಳು ನಡೆದಾಗ ವಿದ್ಯಾರ್ಥಿಗಳ ಸಾಧನೆಯ ಬಗ್ಗೆ ನಮಗೂ ತಿಳಿಯುತ್ತದೆ. ಮತ್ತು ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೆ ಪೂರಕವಾಗುತ್ತೆ. ಎಂದು ಆಶಿಸಿದರು. ಇಂತಹ ಕಾರ್ಯಕ್ರಮಗಳಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲು ಭರವಸೆ ನೀಡಿ, ಶಿಕ್ಷಕರನ್ನು ಹಾಗೂ ವಿದ್ಯಾರ್ಥಿಗಳನ್ನು ಶ್ಲಾಘಿಸಿದರು.

ಆಯುರ್‌ಗ್ರಾಮ ೨.೦ ರಾಷ್ಟ್ರ ಮಟ್ಟದ ಸ್ಪರ್ಧೆಯು ೭ ದಿನಗಳ ಕಾಲಹಲಗೇರಾ ಗ್ರಾಮದಲ್ಲಿ ದ್ರುವಾಸ ತಂಡ ಹಾಗೂ ಸಂಕಲ್ಪ ತಂಡ ಗೊಂಡಬಾಳ ಗ್ರಾಮದಲ್ಲಿ ವಾಸ್ತವ್ಯ ಮಾಡಿ ಗ್ರಾಮದಲ್ಲಿರುವ ಪ್ರತಯೊಂದು ಮನೆಮನೆಗೂ ತೆರಳಿ ಆಯುರ್ವೇದದ ಪ್ರಚಾರ ಮಾಡಿ ಜನರಲ್ಲಿ ಆಯುರ್ವೇದ ಬಗ್ಗೆ ಅರಿವು ಮೂಡಿಸುವ ಬೀದಿ ನಾಟಕ, ಮೂಕಾಭಿನಯ, ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.
ಈ ಸ್ಪರ್ಧೇಯ ಅಂಗವಾಗಿ ವಿಶೇಷ ವೈದ್ಯಕೀಯ ತಂಡದಿಂದ ಮಕ್ಕಳಿಗೆ ಬಾಲರಕ್ಷಾ ಕಿಟ್ ವಿತರಿಸಿದರು. ಮತ್ತು ಹೆಣ್ಣುಮಕ್ಕಳಿಗೆ ಉಚಿತ ಆರೋಗ್ಯ ಹಾಗೂ ನೇತ್ರರೋಗ ತಪಾಸಣೆಯನ್ನು ಮಾದುತ್ತ ಸಾರ್ವಜನಿಕರಿಗೆ ಆಯುರ್ವೇದದ ಗಿಡಮೂಲಿಕೆಗಳ ಬಗ್ಗೆ ಮತ್ತು ಅವುಗಳನ್ನು ನೆಡುವುದರ ಬಗ್ಗೆ ಕಿರು ಚಿತ್ತವನ್ನು ಮಾಡಿ ತೋರಿಸಿ ಆ ಕಿರುಚಿತ್ರವನ್ನು ಯುಟ್ಯೂಬಗೆ ಅಪ್ ಲೋಡ್ ಮಾಡಿದರು. ಇಂತಹ ವೈವಿದ್ಯಮಯ ಕಾರ್ಯಕ್ರಮಕ್ಕೆ ಜನರು ಸ್ಪಂದನೆಯನ್ನು ಮಾಡಿದರು.

ಈ ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ಮಾಡಿದ ಕಿರುಚಿತ್ರವನ್ನು ಅಪ್‌ಲೋಡ ಮಾಡಿದ ಯುಟ್ಯೂಬನ್ನು ಕೇವಲ ೧೦ ದಿನದಲ್ಲಿ ಸುಮಾರು ೭೯೦೦೦ ಜನರು ದ್ರುವಾಸ್ ತಂಡದ ಕಿರುಚಿತ್ರವನ್ನು ವೀಕ್ಷಣೆ ಮಾಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ನಡೆದ ಈ ವೀಕ್ಷಣೆಯು ಎಲ್ಲಾ ವಿಭಾಗಗಳನ್ನೂ ಮೀರಿ ೩೦೦೦೦ ಹೆಚ್ಚಿನ ವೀಕ್ಷಣೆ ಸಾಧಕರಾಗಿ ದ್ರುವಾಸ್ ತಂಡವು ಪ್ರಥಮ ಬಹುಮಾನ ಪಡೆದಿದೆ. ಈ ಸ್ಪರ್ಧೆಯ ಮತ್ತಂದು ವಿಭಾಗದ ಸಂಕಪಲ್ಪ ತಂಡವು ೮೪ ತಂಡಗಳ ಪೈಕಿ ರಾಷ್ಟ್ರಮಟ್ಟದಲ್ಲಿ ತೃತೀಯ ಬಹುಮಾನ ಪಡೆದಿದೆ.

ರಾಷ್ಟ್ರಮಟ್ಟದ ಈ ಸ್ಪರ್ಧೆಯಲ್ಲಿ ನಮ್ಮ ಮಹಾವಿದ್ಯಾಲಯದ ಎರಡೂ ತಂಡಗಳು ಮಾಡಿದ ಈ ಸಾಧನೆಗೆ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಂ.ಎಂ. ಸಾಲಿಮಠರವರು ಸಂತಸ ವ್ಯಕ್ತಪಡಿಸಿದರು. ಆಪ್ತಾಸ್ ಆಯುರ್ವೇದ ಪ್ರಚಾರ ಮತ್ತು ಪ್ರಸಾರದಲ್ಲಿ ಮಾಡುತ್ತಿರುವ ಈ ತರಹದ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಆಯುರ್ವೇದದ ಬಗ್ಗೆ ಕಾಳಜಿ ಹೆಚ್ಚಿಸುತ್ತವೆ. ಇಂತಹ ವೈವಿದ್ಯಮಯ ಕಾರ್ಯಕ್ರಮಗಳು ಈ ಸಂಸ್ಥೆಯಿಂದ ಬರಲಿ ಎಂದು ತಿಳಿಸಿದ ಪ್ರಾಚಾರ್ಯರು, ತಂಡದ ಜವಾಬ್ದಾರಿ ಹೊತ್ತಿದ್ದ ದ್ರುವಾಸ್ ತಂಡದ ನಿರ್ಧೇಶಕರಾದ ಡಾ. ಎಸ.ಎಸ.ಶಿರೂರಮಠ ಹಾಗೂ ಸಂಕಲ್ಪ ತಂಡದ ನಿರ್ಧೇಶಕರಾದ ಡಾ. ರಾಧಾಕೃಷ್ಣರವರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು. ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

Get real time updates directly on you device, subscribe now.

Comments are closed.

error: Content is protected !!