ಡಾ.ಮುಮ್ತಾಜ್ ಬೇಗಂ ಗೆ ಸಮಗ್ರ ಸಾಹಿತ್ಯ ಸಾಧನೆ ಪ್ರಶಸ್ತಿ
ಬೆಂಗಳೂರು,ಜು
ಕರ್ನಾಟಕ ರಾಜ್ಯ ಲೇಖಕಿಯರ ಸಂಘ ಕೊಡ ಮಾಡುವ ಸಮಗ್ರ ಸಾಹಿತ್ಯ ಸಾಧನೆ ಪ್ರಶಸ್ತಿಗೆ ಕೊಪ್ಪಳ ಜಿಲ್ಲೆಯ ಹಿರಿಯ ಲೇಖಕಿ, ಪ್ರಾಧ್ಯಾಪಕಿ ಡಾ.ಮುಮ್ತಾಜ್ ಬೇಗಂ ಆಯ್ಕೆಯಾಗಿದ್ದಾರೆ. 2020ನೇ ಸಾಲಿನ ಕೆ.ಟಿ.ಬನಶಂಕರಮ್ಮ ಪ್ರಶಸ್ತಿಗೆ ಡಾ. ಮುಮ್ತಾಜ್ ಬೇಗಂ ಭಾಜನರಾಗಿದ್ದಾರೆ. ಕೊಪ್ಪಳ ಜಿಲ್ಲಾ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪೂ ಮೂಡಿಸಿರುವ ಇವರು 14 ಕ್ಕೂ ಹೆಚ್ಚು ಸಾಹಿತ್ಯ ಕೃತಿಗಳನ್ನ ಪ್ರಕಟಿಸಿದ್ದಾರೆ. ಜಾನಪದ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಕೊಡುಗೆ ನೀಡಿದ್ದಾರೆ. ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು ಇಲ್ಲಿ ಸ್ಮರಿಸಬಹುದು. ಅಲ್ಲದೇ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ದತ್ತಿ ಪ್ರಶಸ್ತಿಗೂ ಲೇಖಕಿ ಡಾ.ಮುಮ್ತಾಜ್ ಬೇಗಂ ಅವರ ಹಲವಾರು ಕೃತಿಗಳು ಆಯ್ಕೆಯಾಗಿರುವುದು ಇವರ ಸಾಹಿತ್ಯ ಕೃಷಿಗೆ ಹಿಡಿದ ಕೈಗನ್ನಡಿಯಾಗಿದೆ. ಈದೀಗ ಕರ್ನಾಟಕ ಲೇಖಕಿಯರ ಸಂಘ(ರಿ) ಬೆಂಗಳೂರು ನೀಡುವ ಸಮಗ್ರ ಸಾಹಿತ್ಯ ಸಾಧನೆ ಪ್ರಶಸ್ತಿಗೆ ಆಯ್ಕೆಯಾಗಿದ್ದು ಜಿಲ್ಲೆಯ ಹೆಮ್ಮೆಯ ಸಂಗತಿಯಾಗಿದೆ.
Comments are closed.